ಹೊಂಡಾ ಜಾಝ್ ಕಾರು ಹೊಸ ಲುಕ್, ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನಗಳಲ್ಲಿ ಅನಾವರಣ ಗೊಂಡಿದೆ. ನೂತನ ಕಾರು ಆಕರ್ಷಕವಾಗಿದ್ದು, ಮೊದಲ ನೋಟದಲ್ಲಿ ಗಮನಸೆಳೆಯುತ್ತಿದೆ. ನೂತನ ಕಾರಿನ ವಿವರ ಇಲ್ಲಿದೆ.
ಟೊಕಿಯೊ(ನ.02): ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿಂದ ಭಾರತದ ಆಟೋಮೊಬೈಲ್ ಕಂಪನಿಗಳು ಚೇತರಿಕೆ ಕಂಡಿದೆ. ಪಾತಾಳಕ್ಕೆ ಕುಸಿದಿದ್ದ ವಾಹನ ಮಾರಾಟ ಮೆಲ್ಲನೆ ಚಿಗುರಿಕೊಂಡಿದೆ. ಇದರ ಬೆನ್ನಲ್ಲೇ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದೀಗ ಹೊಂಡಾ ತನ್ನ ನೆಚ್ಚಿನ ಹಾಗೂ ಗರಿಷ್ಛ ಮಾರಾಟವಾದ ಜಾಝ್ ಕಾರನ್ನು ಹೊಸ ಅವತಾರದಲ್ಲಿ ಅನಾವರಣ ಮಾಡಿದೆ.
undefined
ಇದನ್ನೂ ಓದಿ: 10 ಕೋಟಿ ರೂ ಬೆಂಟ್ಲಿ ಮಸ್ಲೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!
ಹೊಂಡಾ ಜಾಝ್ ಫಿಟ್ ಹೊಸ ಕಾರನ್ನು ಟೊಕಿಯೊ ಮೋಟಾರ್ ಶೋನಲ್ಲಿ ಅನಾವರಣ ಮಾಡಲಾಗಿದೆ. ಮುಂದಿನ ವರ್ಷ ಭಾರತದಲ್ಲಿ ನೂತನ ಜಾಝ್ ಫಿಟ್ ಕಾರು ಬಿಡುಗಡೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಜಾಝ್ ಕಾರಿಗೆ ಹೊಸ ರೂಪ ನೀಡಲಾಗಿದೆ. ಹೆಚ್ಚು ಆಕರ್ಷಕ ರೀತಿಯಲ್ಲಿ ಈ ಕಾರನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ನೂತನ ವ್ಯಾಗನ್R ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!
ಅತ್ಯಾಧುನಿಕ ತಂತ್ರಜ್ಞಾನ, LED ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್, , LED ಡೇ ಟೈಮ್ ರನ್ನಿಂಗ್ ಲೈಟ್ ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ಎಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. 1.2 ಲೀಟರ್ i-VTEC ಪೆಟ್ರೋಲ್ ಎಂಜಿನ್, ಹೈಬ್ರಿಡ್ ಪವರ್‌ಟ್ರೈನ್ ಹೊಂದಿದೆ. ಆದರೆ ಭಾರತದಲ್ಲಿ 1.2 ಲೀಟರ್ i-VTEC ಪೆಟ್ರೋಲ್ ಎಂಜಿನ್, ಹೈಬ್ರಿಡ್ ಮೈಲ್ಡ್ ಪವರ್‌ಟ್ರೈನ್ ಎಂಜಿನ್ ಹೊಂದಿರಲಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ಜಾಝ್ ಕಾರಿನ ಚಿತ್ರ
ಇದನ್ನೂ ಓದಿ: ಬ್ರೆಜಾ, ವೆನ್ಯೂಗೆ ಪೈಪೋಟಿ, ಬರುತ್ತಿದೆ ಟೊಯೊಟಾ ರೈಝ್ ಕಾರು!.
1.5-ಲೀಟರ್ i-DTEC ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್ ಆಯ್ಕೆಯೂ ಲಭ್ಯವಿದೆ. ವಿಶೇಷ ಅಂದರೆ ಗರಿಷ್ಠ ಸುರಕ್ಷೆಯನ್ನೂ ಈ ಕಾರು ನೀಡಲಿದೆ. ನೂತನ ಜಾಝ್ ಕಾರಿನ ಬೆಲೆ, ಮೈಲೇಜ್ ಕುರಿತ ಮಾಹಿತಿ ಬಹಿರಂಗವಾಗಿಲ್ಲ.