10 ಕೋಟಿ ರೂ ಬೆಂಟ್ಲಿ ಮಲ್ಸೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!

By Web Desk  |  First Published Nov 1, 2019, 9:14 PM IST

ಬೆಂಟ್ಲಿ ಮಸ್ಲೇನ್ EWB ಕಾರು ಭಾರತದಲ್ಲಿ ಬಿಡುಗಡೆಯಾಗಿಲ್ಲ. ಈ ಕಾರನ್ನು ಲಂಡನ್‌ನಿಂದ ಭಾರತಕ್ಕೆ ಆಮದು ಮಾಡಿಕೊಂಡು ಮೊಟ್ಟ ಮೊದಲಿಗ ಅನ್ನೋ ಕೀರ್ತಿಗೆ ಬೆಂಗಳೂರಿನ ಉದ್ಯಮಿ ಪಾತ್ರರಾಗಿದ್ದಾರೆ. ಬರೋಬ್ಬರಿ 10 ಕೋಟಿ ರೂಪಾಯಿ ಕಾರನ್ನು ಖರೀದಿಸಿ ಬೆಂಗಳೂರಿಗ ಇದೀಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.
 


ಬೆಂಗಳೂರು(ನ.01): ಭಾರತದಲ್ಲೇ ಮೊದಲ ಬೆಂಟ್ಲಿ ಮಸ್ಲೇನ್ EWB ಕಾರು ಡೆಲಿವರಿಯಾಗಿದ್ದು ನಮ್ಮ ಬೆಂಗಳೂರಿಗೆ ಅನ್ನೋದು ವಿಶೇಷ. ಬ್ರಿಟೀಷ್ ಕಾರು ತಯಾರಿಕಾ ಕಂಪನಿ ಬೆಂಟ್ಲಿ ವಿಶ್ವದ ಅತ್ಯಂತ ದುಬಾರಿ ಕಾರು ಮಸ್ಲೇನ್ ಬಿಡುಗಡೆ ಮಾಡಿದೆ. ಈ ಕಾರು ಭಾರತದಲ್ಲಿ ಬಿಡುಗಡೆಯಾಗಿಲ್ಲ. ಇದೀಗ ಈ ದುಬಾರಿ ಕಾರು ಭಾರತದಲ್ಲೇ ಮೊದಲು ಖರೀದಿಸಿದ ಹೆಗ್ಗಳಿಕೆಗೆ  ಬೆಂಗಳೂರಿನ ವಿಎಸ್ ರೆಡ್ಡಿ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಬ್ರೆಜಾ, ವೆನ್ಯೂಗೆ ಪೈಪೋಟಿ, ಬರುತ್ತಿದೆ ಟೊಯೊಟಾ ರೈಝ್ ಕಾರು!

Tap to resize

Latest Videos

undefined

ಬ್ರಟೀಷ್ ಬಯೋಲೋಜಿಕಲ್ ಕಂಪನಿ ವ್ಯವಸ್ಥಾಪಕ ನಿರ್ದೇಸಕ ವಿಎಸ್ ರೆಡ್ಡಿ ಈ ದುಬಾರಿ ಕಾರನ್ನು ಖರೀದಿಸಿದ್ದಾರೆ. ಈ ಕಾರಿಗೆ ಬರೋಬ್ಬರಿ 10 ಕೋಟಿ ರೂಪಾಯಿ. ಇದು ಆನ್ ರೋಡ್ ಬೆಲೆಯಲ್ಲ, ಎಕ್ಸ್ ಶೋ ರೂಂ ಬೆಲೆ. ತೆರಿಗೆ, ವಿಮೆ ಸೇರಿದಂತೆ ಇತರ ವೆಚ್ಚಗಳು ಸೇರಿದಂತೆ ಈ ಕಾರಿನ ಬೆಲೆ ಸರಿಸುಮಾರು 13 ಕೋಟಿ ದಾಟಲಿದೆ. ಈ ದುಬಾರಿ ಕಾರನ್ನು ವಿಎಸ್ ರೆಡ್ಡಿ ಕುಟುಂಬ ಹಾಗೂ ತನ್ನ ಕಂಪನಿ ಸಹದ್ಯೋಗಿಗಳ ಸಮ್ಮುಖದಲ್ಲಿ ಪಡೆದುಕೊಂಡರು.

ಇದನ್ನೂ ಓದಿ: ಮಾರುತಿ ಎರ್ಟಿಗಾ ಟೂರ್ M ಡೀಸೆಲ್ ಕಾರು ಬಿಡುಗಡೆ!.

ರೈತ ಕುಟುಂಬದಲ್ಲಿ ಹುಟ್ಟಿದ ನಾನು ಇದೀಗ 10 ಕೋಟಿ ರೂಪಾಯಿಯ ಬೆಂಟ್ರಿ ಮಸ್ಲೇನ್ ಕಾರು ಖರೀದಿಸಲು ಸಾಧ್ಯವಾಗಿದ್ದು, ನನ್ನ ಕಂಪನಿಯ ಉದ್ಯೋಗಿಗಳಿಂದ. ಹೀಗಾಗಿ ಅವರ ಸಮ್ಮುಖದಲ್ಲಿ ಕಾರು ಡೆಲಿವರಿ ಪಡೆದುಕೊಂಡಿದ್ದೇನೆ ಎಂದು ವಿಎಸ್ ರೆಡ್ಡಿ ಹೇಳಿದರು. ಬೆಂಟ್ರಿ ಮಸ್ಲೇನ್ ಕಾರು ಖರೀದಿಸಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಇದೀಗ ನನಸಾಗಿದೆ ಎಂದು ರೆಡ್ಡಿ ಹೇಳಿದರು.

ಬೆಂಟ್ಲಿ ಮಸ್ಲೇನ್ EWB ಕಾರು 6.9 ಲೀಟರ್ ಟರ್ಬೋಚಾರ್ಜಡ್ V8 ಪೆಟ್ರೋಲ್ ಎಂಜಿನ್ ಹೊಂದಿದ್ದು, 506 hp ಪವರ್ ಹಾಗೂ  1020 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ . ಬೆಂಗಳೂರಿನ ಎಕ್ಸ್‌ಕ್ಲೂಸೀವ್ ಮೋಟಾರ್ಸ್ ಈ ಕಾರನ್ನು ಆಮದು ಮಾಡಿಕೊಂಡು, ವಿಎಸ್ ರೆಡ್ಡಿಗೆ ಡೆಲಿವರಿ ಮಾಡಿದೆ.

click me!