ಚಲಿಸುತ್ತಿದ್ದ ಕಾರಿನಲ್ಲಿ ದೀಪಾವಳಿ ಪಟಾಕಿ; ಮಾಲೀಕನ ವಿರುದ್ಧ ಕೇಸ್!

By Web Desk  |  First Published Nov 1, 2019, 6:52 PM IST

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದು ತಪ್ಪಲ್ಲ. ಆದರೆ ನಿಯಮ ಮೀರವುದು ತಪ್ಪ. ಇದೀಗ ಅತ್ಯಂತ ಅಪಾಯಕಾರಿ ಸ್ಟಂಟ್ ಮಾಡೋ ಮೂಲಕ ಪಟಾಕಿ ಸಿಡಿಸಿದವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿ ಪಟಾಕಿ ಸಿಡಿಸಿದ ಘಟನೆ ಬೆಳಕಿಗೆ ಬಂದಿದೆ.
 


ಉತ್ತರ ಪ್ರದೇಶ(ನ.01): ದೀಪಾವಳಿ ಹಬ್ಬ ಮುಗಿದು ಇದೀಗ ಜನ ಮುಂದಿನ ಹಬ್ಬಕ್ಕೆ ಕಾಯುತ್ತಿದ್ದಾರೆ. ಈ ಬಾರಿಯ ದೀಪಾವಳಿಗೆ ಪಟಾಕಿಗಳ ಸದ್ದು ಈ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿತ್ತು. ಹಲವು ನಿಯಮ, ನಿರ್ಬಂಧ ಹಾಗೂ ಜಾಗೃತಿಯಿಂದ ಹೆಚ್ಚಿನವರು ಪಟಾಕಿಯಿಂದ ದೂರವಿದ್ದರು. ಕೆಲವರು ಪಟಾಕಿ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಲಿಸುತ್ತಿದ್ದ ಕಾರಿನ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ರವಿಶಂಕರ್ ಪ್ರಸಾದ್ to ಗಂಭೀರ್; 18 ರಾಜಕಾರಣಿಗಳಿಂದ ಟ್ರಾಫಿಕ್ ರೂಲ್ಸ್ ಬ್ರೇಕ್!

Tap to resize

Latest Videos

ಈ ಅಪಾಯಕಾರಿ ಪಟಾಕಿ ಸಿಡಿಸಿದ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ.  ಹೊಂಡಾ ಸಿಟಿ ಕಾರಿನ ಸನ್‌ರೂಫ್ ತೆರೆದು ಕಾರು ಚಲಿಸುತ್ತಿದ್ದ ವೇಳೆ ರಾಕೆಟ್ ಪಟಾಕಿ ಸಿಡಿಸಿದ್ದಾರೆ. ಇದು ಒಂದೆರಡಲ್ಲ. ರಸ್ತೆಯುದ್ದಕ್ಕೂ ರಾಕೆಟ್ ಪಟಾಕಿ ಸಿಡಿಸಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾಗಿದೆ. 

ಇದನ್ನೂ ಓದಿ: ಜೀನ್ಸ್ ಧರಿಸಿದ ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶವಿಲ್ಲ!

ಚಲಿಸುತ್ತಿದ್ದ ಕಾರಿನಲ್ಲಿ ಪಟಾಕಿ ಸಿಡಿಸಿದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಆದರೆ ಲಭ್ಯವಿರುವು ವಿಡಿಯೋಗಳಲ್ಲಿ ಕಾರಿನ ನಂಬರ್ ಪ್ಲೇಟ್ ಸ್ಪಷ್ಟವಾಗಿಲ್ಲ. ಹೀಗಾಗಿ ಪೊಲೀಸರು ಸಿಸಿಟಿವಿ ಮೊರೆ ಹೋಗಿದ್ದಾರೆ. 

ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ಕಿರಿಕಿರಿ: ಜಂಕ್ಷನ್ ಕ್ಲಿಯರ್‌ಗೆ ಕಮಿಷನರ್ ಸಲಹೆ ಕೇಳ್ಯಾರ್ ರೀ!

ಉತ್ತರ ಪ್ರದೇಶದಲ್ಲಿ ಪಟಾಕಿ ಸಿಡಿಸಲು ರಾತ್ರಿ 8 ಗಂಟೆಯಿಂದ 10ರ ವರೆಗೆ ಸಮಯ ನಿಗಧಿ ಮಾಡಲಾಗಿತ್ತು. ಆದರೆ ಚಲಿಸುತ್ತಿದ್ದ ಕಾರಿನ ಸನ್‌ರೂಫ್ ಮೂಲಕ ರಾಕೆಟ್ ಲಾಂಚ್ ಮಾಡಿದ್ದು ಅಪರಾಧವೇ ಸರಿ. ನಿಯಮ ಉಲ್ಲಂಘನೆ, ಅಪಾಯಕಾರಿ ಸ್ಟಂಟ್ ಮಾಡಿದವರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ. 


 

click me!