ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣ!

By Suvarna News  |  First Published Aug 15, 2020, 3:55 PM IST

ದೇಶದಲ್ಲೆಡೆ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂತಸದಲ್ಲಿ ಬಹುನಿರೀಕ್ಷಿತ ಹಾಗೂ ಹಲವು ಬದಲಾವಣೆಗಳನ್ನು ಕಂಡಿರುವ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣಗೊಂಡಿದೆ. ನೂತನ ಥಾರ್ ಜೀಪ್ ವಿಶೇಷತೆ ಸೇರಿದಂತೆ ಹಚ್ಚಿನ ಮಾಹಿತಿ ಇಲ್ಲಿದೆ.


ಮುಂಬೈ(ಆ.15): ಕೊರೋನಾ ವೈರಸ್ ಕಾರಣ ದೇಶದೆಲ್ಲೆಡೆ ಸರ್ಕಾರದ ಮಾರ್ಗಸೂಚಿಯಂತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪು ಕೋಟೆಯಲ್ಲಿ ಧ್ವಾಜರೋಹಣ ನೆರವೇರಿಸಿದ್ದಾರೆ. ದೇಶದ ಹಳ್ಳಿ ಹಳ್ಳಿಯಲ್ಲಿ ತಿರಂಗ ಹಾರಾಡುತ್ತಿದೆ. ಈ ಸಂಭ್ರಮದಲ್ಲೇ ಮಹೀಂದ್ರ ತನ್ನ ಹೊಚ್ಚ ಹೊಸ ಥಾರ್ ಜೀಪ್ ಅನಾವರಣ ಮಾಡಿದೆ.

Latest Videos

undefined

ಮಹೀಂದ್ರ XUV300 ಕಾರಿಗೆ ಭರ್ಜರಿ ಆಫರ್; ಗರಿಷ್ಠ 1 ಲಕ್ಷ ರೂ ಡಿಸ್ಕೌಂಟ್!.

ಬರೋಬ್ಬರಿ 10 ವರ್ಷಗಳ ಬಳಿಕ ಮಹೀಂದ್ರ ಥಾರ್ ನ್ಯೂ ಜನರೇಶನ್ ರೂಪದಲ್ಲಿ ಅನಾವರಣಗೊಂಡಿದೆ. ಹೊಸ ಥಾರ್ ಜೀಪ್ ಹೆಚ್ಚು ಸ್ಥಳಾವಕಾಶ, ಸೀಟಿಂಗ್ ಸಾಮರ್ಥ್ಯ, ಎಂಜಿನ್ ಸಾಮರ್ಥ್ಯ ಹಾಗೂ ಹೆಚ್ಚುವರಿ ಫೀಚರ್ಸ್ ಒಳಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಅನಾವರಣಗೊಂಡಿರುವ ಥಾರ್ ಜೀಪ್, ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ. ಹೌದು, ನೂತನ ಥಾರ್ ಜೀಪ್ ಆಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ.

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!.

ಬುಕಿಂಗ್ ಕೂಡ ಅಕ್ಟೋಬರ್ 2 ರಿಂದ ಆರಂಭಗೊಳ್ಳಲಿದೆ. ನೂತನ ಥಾರ್ AX ಹಾಗೂ LX ವೇರಿಯೆಂಟ್‌ನಲ್ಲಿ ಲಭ್ಯವಿದೆ. ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ LED ಹಾಗೂ DRL ಹೆಡ್‌ಲ್ಯಾಂಪ್ಸ್, LED ಟೈಲ್ ಲೈಟ್ಸ್, 18 ಇಂಚಿನ ಅಲೋಯ್ ವ್ಹೀಲ್ ಸೇರಿದಂತೆ ಹಲವು ಅಪ್‌ಡೇಟ್ ಪಡೆದುಕೊಂಡಿದೆ.

ನೂತನ ಥಾರ್ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 2 ಲೀಟರ್ ಪೆಟ್ರೋಲ್ ಎಂಜಿನ್  150 bhp ಪವರ್ ಹಾಗೂ  320 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  2.2  ಲೀಟರ್ ಡೀಸೆಲ್ ಎಂಜಿನ್  130 bhp ಪವರ್ ಹೊಂದಿದೆ. 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. 

click me!