ಕೊರೋನಾ ವೈರಸ್ ಕಾರಣ ದೇಶದ ಆಟೋಮೊಬೈಲ್ ವಿಭಾಗ ತೀವ್ರ ಸಂಕಷ್ಟ ಎದುರಿಸುತ್ತಿದೆ. ಅನ್‌ಲಾಕ್ ಅವಧಿಯಲ್ಲಿ ಆಟೋಮೊಬೈಲ್ ಕೊಂಚ ಚೇತರಿಕೆ ಕಾಣುತ್ತಿದೆ. ಉತ್ತರ ಪ್ರದೇಶ ಕಳೆದ ತಿಂಗಳ ಆಟೋಮೊಬೈಲ್ ಮಾರಾಟದಲ್ಲಿ ಗರಿಷ್ಠ ಆದಾಯಗಳಿಸಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.
ನವದೆಹಲಿ(ಆ.15): ಕೊರೋನಾ ವೈರಸ್ ಕಾರಣ ಆಟೋಮೊಬೈಲ್ ಮಾರಾಟ ಕುಸಿತ ಕಂಡಿತ್ತು. ಇದೀಗ ಅನ್‌ಲಾಕ್ ನಿಯಮ ಜಾರಿಯಲ್ಲಿದೆ. ಈ ನಡುವೆ ಆಟೋಮೊಬೈಲ್ ಕಂಪನಿಗಳು ಹಲವು ಆಫರ್ ನೀಡಿ ಮಾರಾಟ ಉತ್ತೇಜನಕ್ಕೆ ಮುಂದಾಗಿದೆ. ಆದರೂ ನಿರೀಕ್ಷಿತ ಮಟ್ಟ ತಲುಪಿಲ್ಲ. ಇದೀಗ ಭಾರತದಲ್ಲಿನ ಆಟೋಮೊಬೈಲ್ ಮಾರಾಟ ಕುರಿತು ಅಂಕಿ ಅಂಶ ಬಿಡುಗಡೆಯಾಗಿದೆ. ಈ ಪೈಕಿ ಉತ್ತರ ಪ್ರದೇಶ ಸರ್ಕಾರ ಗರಿಷ್ಠ ಆದಾಯಗಳಿಸೋ ಮೂಲಕ ಮೊದಲ ಸ್ಥಾನ ಅಲಂಕರಿಸಿದೆ.
BS4 ವಾಹನ ರಿಜಿಸ್ಟ್ರೇಶನ್‌ಗೆ ಸುಪ್ರೀಂ ಗ್ರೀನ್ ಸಿಗ್ನಲ್; ನಿಟ್ಟುಸಿರುಬಿಟ್ಟ FADA!
undefined
ಜೂನ್ ತಿಂಗಳಿನಿಂದ ಭಾರತದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಇದೀಗ ಸತತ 2 ತಿಂಗಳುಗಳಿಂದ ಆಟೋಮೊಬೈಲ್ ಮಾರಾಟ ಹಾಗೂ ಸರ್ಕಾರದ ಆದಾಯದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಹೊಸ ವಾಹನ ರಿಜಿಸ್ಟ್ರೇಶನ್, ತೆರಿಗೆ ಸೇರಿದಂತೆ ಉತ್ತರ ಪ್ರದೇಶ ಸರ್ಕಾರ ಜುಲೈ ತಿಂಗಳಲ್ಲಿ 424.53 ಕೋಟಿ ರೂಪಾಯಿ ಆದಾಯಗಳಿಸಿದೆ. ಇದರಲ್ಲಿ 387.80 ಕೋಟಿ ರೂಪಾಯಿ ಹೊಸ ವಾಹನ ನೋಂದಾವಣಿಯಿಂದಲೇ ಸರ್ಕಾರದ ಬೊಕ್ಕಸಕ್ಕೆ ಬಂದಿದೆ.
ಉತ್ತರ ಪ್ರದೇಶದಲ್ಲಿ ಜುಲೈ ತಿಂಗಳಲ್ಲಿ 2,01,528 ಹೊಸ ವಾಹನಗಳ ರಿಜಿಸ್ಟ್ರೇಶನ್ ಮಾಡಲಾಗಿದೆ. 1,96,086 ಕಾರು ಹಾಗೂ ಬೈಕ್ ಇನ್ನು 5,442 ವಾಹನಗಳು ಟ್ರಾನ್ಸ್‌ಪೋರ್ಟ್ ಹಾಗೂ ಕಮರ್ಷಿಯಲ್ ವಾಹನಗಳಾಗಿವೆ. ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ 1.5 ಲಕ್ಷ ವಾಹನಗಳ ರಿಜಿಸ್ಟ್ರೇಶನ್ ಮಾಡಲಾಗಿದೆ.