ಸ್ವಾತಂತ್ರ್ಯ ದಿನಾಚರಣೆಗೆ ಗಿಫ್ಟ್ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!

By Suvarna News  |  First Published Aug 15, 2020, 2:55 PM IST

74ನೇ ಸ್ವಾತಂತ್ರ್ಯ ದಿನಾಚರಣೆಗೆ ಗುರುಗಾಂವ್ ಮೂಲಕ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷ ಆಫರ್ ಘೋಷಣೆ ಮಾಡಿದೆ. ಇಂದು(ಆ15) ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಆನ್‌ಲೈನ್ ಮೂಲಕ ಬುಕ್ ಮಾಡುವ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದೆ. ಸ್ವಾತಂತ್ರ್ಯ ದಿನಾಚರಣೆ ಆಫರ್ ಕುರಿತ ವಿವರ ಇಲ್ಲಿದೆ. 


ದೆಹಲಿ(ಆ.15): ದೇಶದಲ್ಲೆಡೆ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಹಾಗೂ ಸಂಭ್ರಮದ ಸಂದರ್ಭದಲ್ಲಿ ಗುರುಗಾಂವ್ ಮೂಲದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಸ್ಪೆಷಲ್ ಗಿಫ್ಟ್ ವೋಚರ್ಸ್ ಘೋಷಿಸಿದೆ. ಆಗಸ್ಟ್ 15 ರಂದು ಆನ್‌ಲೈನ್ ಮೂಲಕ ಬುಕ್ ಮಾಡುವ ಗ್ರಾಹಕರಿಗೆ 6,000 ರೂಪಾಯಿ ಗಿಫ್ಟ್ ವೋಚರ್ ಸಿಗಲಿದೆ.   ಈ ಆಫರ್ ಸ್ವಾತಂತ್ರ್ಯ ದಿನಾಚರಣೆ ದಿನವಾದ ಇಂದು(ಆ.15) ಮಾತ್ರ ಲಭ್ಯವಿದೆ.

ಒಕಿನಾವ ಪ್ರೈಸ್ ಪ್ರೋ ಸ್ಕೂಟರ್; ಮನೆಯಲ್ಲೇ ಚಾರ್ಜ್ ಮಾಡಿ 110 ಕಿ.ಮೀ ಪ್ರಯಾಣಿಸಿ!..

Tap to resize

Latest Videos

undefined

ಒಕಿನಾವ ವೆಬ್‌ಸೈಟ್ ಮೂಲಕ ಆನ್‌ಲೈನ್ ಬುಕಿಂಗ್ ಮಾಡುವ ಗ್ರಾಹಕರಿಗೆ 6,000 ರೂಪಾಯಿ ಗಿಫ್ಟ್ ವೋಚರ್ ಸಿಗಲಿದೆ. ಈ ಗಿಫ್ಟ್ ವೋಚರನ್ನು ಸ್ಕೂಟರ್ ಡೆಲಿವರಿ ವೇಳೆ ಗ್ರಾಹಕರಿಗೆ ನೀಡಲಾಗುವುದು ಎಂದು ಒಕಿನಾವ ಸ್ಪಷ್ಟಪಡಿಸಿದೆ. ಲಾಕ್‌ಡೌನ್ ಬಳಿಕ ಒಕಿನಾವ ಸ್ಕೂಟರ್‌ಗೆ ಬೇಡಿಕೆ ಹೆಚ್ಚಾಗಿದೆ. ಅನ್‌ಲಾಕ್ ಸಮಯದಲ್ಲಿ 2,000 ಒಕಿನಾವ ಸ್ಕೂಟರ್ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಒಕಿನಾವ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಕೂಟರ್ ಒದಗಿಸುತ್ತಿದೆ. ಇದೀಗ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಒಕಿನಾವ ವಿಶೇಷ ಆಫರ್ ಗ್ರಾಹಕರಿಗಾಗಿ ನೀಡುತ್ತಿದೆ ಎಂದು ಒಕಿನಾವ ಸಂಸ್ಥಾಪಕ ಹಾಗೂ ನಿರ್ದೇಶಕ ಜಿತೇಂದ್ರ ಶರ್ಮಾ ಹೇಳಿದ್ದಾರೆ.

2,000 ರೂಪಾಯಿ ನೀಡಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಇನ್ನು ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 66, 132 ರೂಪಾಯಿ(ಎಕ್ಸ್ ಶೋ ರೂಂ)

click me!