ಅಂಬಾನಿ to ರಿತೇಶ್ ದೇಶ್‌ಮುಖ್: ಅಮೆರಿಕಾದ ಟೆಸ್ಲಾ ಕಾರು ಖರೀದಿಸಿದ ಭಾರತೀಯರು!

By Suvarna News  |  First Published Jan 26, 2020, 4:04 PM IST

ಅಮೆರಿಕಾದ ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು ಹಿಂದಿಕ್ಕಬಲ್ಲ ಕಾರು ಸದ್ಯ ಮಾರುಕಟ್ಟೆಯಲ್ಲಿ ಇಲ್ಲ. ಶೈಲಿ, ಎಂಜಿನ್, ಸಾಮರ್ಥ್ಯ, ಗುಣಮಟ್ಟ, ಚಾರ್ಜಿಂಗ್, ಮೈಲೇಜ್ ಸೇರಿದಂತೆ ಎಲ್ಲಾ ವಿಚಾರದಲ್ಲಿ ಟೆಸ್ಲಾ ಇತರ ಎಲೆಕ್ಟ್ರಿಕ್ ಕಾರಿಗಿಂತ ಮುಂದಿದೆ. ಈ ದುಬಾರಿ ಕಾರು ಭಾರತದಲ್ಲಿ ಬಿಡುಗಡೆಯಾಗಿಲ್ಲ. ಆದರೆ ಅಂಬಾನಿ, ನಟ ರಿತೇಶ್ ದೇಶ್‌ಮುಖ್ ಸೇರಿದಂತೆ ಕೆಲವೇ ಕೆಲವರು ಈ ಕಾರನ್ನು ಆಮದು ಮಾಡಿಕೊಂಡಿದ್ದಾರೆ. ಈ ಲಿಸ್ಟ್ ಇಲ್ಲಿದೆ.


ಮುಂಬೈ(ಜ.26): ಅಮೆರಿಕಾದ ಟೆಸ್ಲಾ ಎಲೆಕ್ಟ್ರಿಕ್ ಕಾರು ವಿಶ್ವದಲ್ಲೇ ಜನಪ್ರೀಯವಾಗಿದೆ. ದುಬಾರಿ ಮೌಲ್ಯದ ಈ ಕಾರು ಶೀಘ್ರದಲ್ಲೇ ಭಾರತದಲ್ಲೂ ಬಿಡುಗಡೆಯಾಗಲಿದೆ. ವಿಶ್ವದ ಬೆಸ್ಟ್ ಎಲೆಕ್ಟ್ರಿಕ್ ಕಾರು ಎಂದೇ ಗುರುತಿಸಿಕೊಂಡಿರುವ ಟೆಸ್ಲಾ ಕಾರು, ಭಾರತದಲ್ಲಿ ಲಾಂಚ್ ಆಗದಿದ್ದರೂ, ಈಗಾಗಲೇ ಹಲವು ಉದ್ಯಮಿಗಳು, ಶ್ರೀಮಂತರು ಈ ಕಾರನ್ನು ಆಮದು ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!

Tap to resize

Latest Videos

undefined

ಕೋಟಿ ರೂಪಯಿ ಕಾರಿಗೆ ಒಂದೆರಡು ಕೋಟಿ ಆಮದು ಸುಂಕ ನೀಡಿ ಕೆಲ ಶ್ರೀಮಂತರು ಖರೀದಿಸಿದ್ದಾರೆ. ಭಾರತದ ರೂಪಾಯಿಯಲ್ಲಿ  ಟೆಸ್ಲಾ ಕಾರುಗಳ ಸರಾಸರಿ ಬೆಲೆ 1 ಕೋಟಿ ರೂಪಾಯಿ. ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಕನಿಷ್ಠ 3 ಕೋಟಿ ರೂಪಾಯಿ  ದಾಟಲಿದೆ. ಹೀಗೆ ಭಾರತದಲ್ಲಿ ಟೆಸ್ಲಾ ಕಾರು ಖರೀದಿಸಿದ ಶ್ರೀಮಂತರ ಲಿಸ್ಟ್ ಇಲ್ಲಿದೆ.

ಇದನ್ನೂ ಓದಿ: ಭಾರತದ ರಸ್ತೆಗಿಳಿಯುತ್ತಿದೆ ಅಮೇರಿಕದ ಟೆಸ್ಲಾ ಕಾರು!..

ಮುಖೇಶ್ ಅಂಬಾನಿ (ಉದ್ಯಮಿ)
ಟೆಸ್ಲಾ ಮಾಡೆಲ್ S 100D
ಒಂದು ಬಾರಿ ಚಾರ್ಜ್‌ಗೆ 495 km ಮೈಲೇಜ್

ರಿತೇಶ್ ದೇಶಮುಖ್(ಬಾಲಿವುಡ್ ನಟ)
ಟೆಸ್ಲಾ ಮಾಡೆಲ್ X
ಒಂದು ಬಾರಿ ಚಾರ್ಜ್‌ಗೆ 42 km ಮೈಲೇಜ್

ಪ್ರಶಾಂತ್ ರುಯಾ(ಎಸ್ಸಾರ್ ಕಾಗ್ಲಮರೇಟ್ CEO)
ಟೆಸ್ಲಾ ಮಾಡೆಲ್ X
ಒಂದು ಬಾರಿ ಚಾರ್ಜ್‌ಗೆ 42 km ಮೈಲೇಜ್

ಪೂಜಾ ಬಾತ್ರ
ಟೆಸ್ಲಾ ಮಾಡೆಲ್ 3
ಒಂದು ಬಾರಿ ಚಾರ್ಜ್‌ಗೆ  386 km ಮೈಲೇಜ್

ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!