ಹೊಸ ಲುಕ್‌ನಲ್ಲಿ KTM ಡ್ಯೂಕ್ 200 BS6 ಎಂಜಿನ್ ಬಿಡುಗಡೆ ರೆಡಿ!

By Suvarna News  |  First Published Jan 25, 2020, 10:37 PM IST

ಭಾರತದಲ್ಲಿ ಯುವ ಜನತೆ ಹೆಚ್ಚು ಇಷ್ಟಪಟ್ಟಿರುವ KTM ಡ್ಯೂಕ್ ಇದೀಗ ಹೊಸ ಲುಕ್‌ನಲ್ಲಿ ಬಿಡುಗಡೆಯಾಗುತ್ತಿದೆ. KTM ಡ್ಯೂಕ್ 200 ಬೈಕ್ BS6 ಎಂಜಿನ್ ಜೊತೆಗೆ ಕೆಲ ಬದಲಾವಣೆ ಕಾಣುತ್ತಿದೆ. ನೂತನ ಬೈಕ್ ವಿಶೇಷತೆ ಹಾಗೂ ಬೆಲೆ ಇಲ್ಲಿದೆ.


ಮುಂಬೈ(ಜ.25); ಭಾರತೀಯ ಯುವ ಜನಾಂಗವನ್ನು ಆಕರ್ಷಿಸಿರುವ ಅಮೆರಿಕಾ ಬ್ರ್ಯಾಂಡ್ KTM ಡ್ಯೂಕ್ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಲು ಮುಂದಾಗಿದೆ. ಡ್ಯೂಕ್ 390 ಬೈಕ್ 2017ರಲ್ಲಿ ಅಪ್‌ಗ್ರೇಡ್ ಆಗಿದೆ. ಡ್ಯೂಕ್ 390 ಹಾಗೂ ಡ್ಯೂಕ್ 250  ಈಗಾಗಲೇ BS6 ಎಂಜಿನ್ ಬಿಡುಗಡೆಯಾಗಿದೆ.  ಇದೀಗ KTM ಡ್ಯೂಕ್ 200 ಅಪ್‌ಗ್ರೇಡ್ ಆಗಿ  ಬಿಡುಗಡೆಯಾಗುತ್ತಿದೆ. 

ಇದನ್ನೂ ಓದಿ: 30ಸಾವಿರಕ್ಕೆ ಬುಕ್ ಮಾಡಿ KTM ಡ್ಯೂಕ್ 790 ಬೈಕ್!.

Latest Videos

undefined

KTM ಡ್ಯೂಕ್ 200 ಬೈಕ್  BS6 ಎಂಜಿನ್ ಮಾತ್ರವಲ್ಲ, ವಿನ್ಯಾಸದಲ್ಲೂ ಬದಲಾವಣೆಯಾಗುತ್ತಿದೆ. ಈಗಾಗಲೇ ನೂತನ KTM ಡ್ಯೂಕ್ 200 BS6 ಎಂಜಿನ್ ಬೈಕ್ ಡೀಲರ್ ಕೈಸೇರುತ್ತಿದೆ. ಸೀಟ್, ಹೊಸ LED ಟೈಲ್ ಲೈಟ್ ಸೇರಿದಂತೆ ಕೆಲ ಬದಾಲಣೆಗಳು ಈ ಬೈಕ್‌ನಲ್ಲಿದೆ. ಹಳೇ ಬೈಕ್‌ನಲ್ಲಿರುವ ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್‌, ಹ್ಯಾಂಡಲ್‌ಬಾರ್ ಹಾಗೂ ಸ್ವಿಚ್‌ ಗೇರ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇದನ್ನೂ ಓದಿ: KTM RC 125 ಬೈಕ್ ಬಿಡುಗಡೆ- ಯಮಹಾ R15ಗೆ ಶುರುವಾಯ್ತು ನಡುಕ!

ಫ್ಯೂಟೆಲ್ ಟ್ಯಾಂಕ್ ಗಾತ್ರ ಹಾಗೂ ವಿನ್ಯಾಸದಲ್ಲಿ ಕೆಲ ಬದಲಾವಣೆಗಳಾವಿಗೆ. ನೂತನ ಬೈಕ್ ಹೆಚ್ಚು ಆಕರ್ಷಕವಾಗಿದೆ.  KTM ಡ್ಯೂಕ್ 200 BS6 ಎಂಜಿನ್ ಬೈಕ್ ಬೆಲೆ 1.6 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಡ್ಯೂಕ್ 125 ಕೂಡ ಶೀಘ್ರದಲ್ಲೇ BS6 ಎಂಜಿನ್ ಹಾಗೂ  ವಿನ್ಯಾಸದಲ್ಲೂ KTM ಡ್ಯೂಕ್ 200 ಮಾದರಿ ಅನುಸರಿಸುವ ಸಾಧ್ಯತೆ ಇದೆ. 

click me!