50 ಸಾವಿರ ರೂಪಾಯಿಗೆ ಬುಕ್ ಮಾಡಿ MG ಹೆಕ್ಟರ್ ಪ್ಲಸ್ ಕಾರು!

By Suvarna News  |  First Published Jul 6, 2020, 8:08 PM IST

ಎಂಜಿ ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಕಾರು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಕೊರೋನಾ ವೈರಸ್ ಕಾರಣ ಹೆಕ್ಟರ್ ಪ್ಲಸ್ ಕೊಂಚ ವಿಳಂಬವಾಗಿದೆ. ಇದೀಗ ಎಂಜಿ ಮೋಟಾರ್ಸ್ ಹೆಕ್ಟರ್ ಪ್ಲಸ್ ಕಾರಿನ ಬುಕಿಂಗ್ ಆರಂಭಿಸಿದೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 


ನವದೆಹಲಿ(ಜು.06): ಎಂಜಿ ಮೋಟಾರ್ಸ್ ಇಂಡಿಯಾ ಈಗಾಗಲೇ ಹೆಕ್ಟರ್ ಪ್ಲಸ್ ಬಿಡುಗಡೆ ಖಚಿತಪಡಿಸಿದೆ. ಇದೀಗ ಹೆಕ್ಟರ್ ಪ್ಲಸ್ ಕಾರಿನ ಬುಕಿಂಗ್ ಆರಂಭಿಸಿದೆ. 50,000 ರೂಪಾಯಿ ನೀಡಿ ಹೆಕ್ಟರ್ ಪ್ಲಸ್ ಕಾರು ಬುಕ್ ಮಾಡಿಕೊಳ್ಳಬಹುದು. 2020ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಹೆಕ್ಟರ್ ಪ್ಲಸ್ 7 ಸೀಟರ್ ಕಾರಾಗಿದ್ದು, ಭಾರತದಲ್ಲಿ ಹಲವು ಕಾರುಗಳಿ ಪ್ರತಿಸ್ಪರ್ಧಿಯಾಗಿದೆ.

MG ಹೆಕ್ಟರ್ ಕಾರಿನಲ್ಲಿದೆ 5 ವಿಶೇಷತೆ-ಇತರ ಕಾರಿಗಿಂತ ಭಿನ್ನ!

Latest Videos

undefined

ಎಂಜಿ ಹೆಕ್ಟರ್ ಕಾರಿನಂತೆ ಪ್ಲಸ್ ಕಾರು ಕೂಡ ಕನೆಕ್ಟೆಡ್ ಕಾರು. ಆದರೆ ಪ್ಲಸ್‌ನಲ್ಲಿ ಐ ಸ್ಮಾರ್ಟ್ ಟೆಕ್ನಾಲಜಿ ಬಳಸಲಾಗಿದೆ.  ಇದು 55 ಫೀಚರ್ಸ್ ಹೊಂದಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡಿ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ವೆರಿಯೆಂಟ್ ಆಯ್ಕೆಗಳಿವೆ. ಪೆಟ್ರೋಲ್ ಎಂಜಿನ್ 141 Bhp ಪವರ್ ಹಾಗೂ 250Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಹ್ಯುಂಡೈ ಕೋನಾ ಪ್ರತಿಸ್ಪರ್ಧಿ MG ZS ಎಲೆಕ್ಟ್ರಿಕ್ ಕಾರು ಲಾಂಚ್!...

ಡೀಸೆಲ್ ಎಂಜಿನ್ 168bhp ಪವರ್ ಹಾಗೂ 250nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಡೀಸೆಲ್ ಎಂಜಿನ್ ಕೇವಲ 6 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.  ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಎಂಜಿ ಹೆಕ್ಟರ್ ಹಾಗೂ ಇದೀಗ ಬಿಡುಗಡೆಯಾಗಲಿರುವ 7 ಸೀಟರ್ ಹೆಕ್ಟರ್ ಪ್ಲಸ್ ಕಾರಿನ ಡಿಸೈನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 

ಟೈಲ್ ಲ್ಯಾಂಪ್‌ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ರೇರ್ ಬಂಪರ್ ಕೂಡ ಹೊಸದಾಗಿದೆ. ಇದರ ಬೆಲೆ 14 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.

click me!