ಆಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಎಲ್ಲಕ್ಕಿಂತ ಮುಖ್ಯ ಗರಿಷ್ಠ ಸುರಕ್ಷತೆ ನೀಡುತ್ತಿರುವ ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದೆ. ವಿದೇಶಿ ಕಾರುಗಳು ಅಬ್ಬರದ ನಡುವೆ ದೇಶಿಯ ಟಾಟಾ ಇದೀಗ ಅಗ್ರಸ್ಥಾನದತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಅಂದರೆ ಟಾಟಾ ಅಲ್ಟ್ರೋಜ್ ಇದೀಗ ಹ್ಯುಂಡೈ ಐ20, ಫೋಕ್ಸ್‌ವ್ಯಾಗನ್ ಪೊಲೋ ಕಾರನ್ನು ಹಿಂದಿಕ್ಕಿ ದಾಖಲೆ ಬರೆದಿದೆ.
ಮುಂಬೈ(ಜು.06): ಕೊರೋನಾ ವೈರಸ್, ಭಾರತ ಚೀನಾ ಗಡಿ ಸಂಘರ್ಷದ ಬಳಿಕ ಭಾರತೀಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಭಾರತೀಯ ಆಟೋಮೊಬೈಲ್ ಕಂಪನಿ ವಾಹನಗಳ ಖರೀದಿಗೆ ಜನರು ಒಲವು ತೋರುತ್ತಿದ್ದಾರೆ. ದೇಶಿಯ ವಾಹನಗಳು ಅನ್ನೋ ಕಾರಣ ಮಾತ್ರವಲ್ಲ, ಜೊತೆಗೆ ಅತ್ಯುತ್ತಮ ಕಾರು ಅನ್ನೋ ಕಾರಣಕ್ಕೇ ಬೇಡಿಕೆ ಹೆಚ್ಚಾಗಿದೆ. ಟಾಟಾ ಮೋಟಾರ್ಸ್ ಬಿಡುಗೆಡೆ ಮಾಡಿರುವ ಬಹುತೇಕ ಎಲ್ಲಾ ಕಾರುಗಳು ಮಾರುಕಟ್ಟೆಯಲ್ಲಿ ದಾಖಲೆ ಬರೆಯುತ್ತಿದೆ. ಇದೀಗ ಟಾಟಾ ಅಲ್ಟ್ರೋಜ್ ಕಾರು ಹೊಸ ದಾಖಲೆ ಬರೆದಿದೆ.
5 ಸ್ಟಾರ್ ಸೇಫ್ಟಿ ಟಾಟಾ ಅಲ್ಟ್ರೋಜ್ ಕಾರಿನ ಅಸಲಿ ಮೈಲೇಜ್ ಬಹಿರಂಗ!...
ಕೊರೋನಾ ವೈರಸ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಟೋಮೊಬೈಲ್ ಕಂಪನಿಗಳು ಇದೀಗ ಚೇತರಿಕೆ ಕಾಣುತ್ತಿದೆ. ಜೂನ್ ತಿಂಗಳ ಪ್ರಿಮೀಯಂ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟ ವಿವರ ಬಹಿರಂಗಗೊಂಡಿದೆ. ಜೂನ್ ತಿಂಗಳಲ್ಲಿ ಟಾಟಾ ಅಲ್ಟ್ರೋಜ್, ಹ್ಯುಂಡೈ ಐ20 ಹಾಗೂ ಫೋಕ್ಸ್‌ವ್ಯಾಗನ್ ಪೊಲೋ ಕಾರನ್ನು ಹಿಂದಿಕ್ಕಿದೆ.
ಟಾಟಾ ಅಲ್ಟ್ರೋಜ್ ಬಿಡುಗಡೆ; ಕಡಿಮೆ ಬೆಲೆ, ಅತ್ಯಂತ ಸುರಕ್ಷತೆಯ ಕಾರು!
ಜೂನ್ ತಿಂಗಳಲ್ಲಿ ಟಾಟಾ ಅಲ್ಟ್ರೋಜ್ 3,104 ಕಾರುಗಳು ಮಾರಾಟವಾಗಿದೆ. ಈ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಮೊದಲ ಸ್ಥಾವನ್ನು ಮಾರುತಿ ಬಲೆನೋ ಉಳಿಸಿಕೊಂಡಿದೆ. ಬಲೆನೊ ಜೂನ್ ತಿಂಗಳಲ್ಲಿ 4,300 ಕಾರುಗಳು ಮಾರಾಟವಾಗಿದೆ.
ಜೂನ್ ತಿಂಗಳ ಮಾರಾಟ ವಿವರ:
ಮಾರುತಿ ಬಲೆನೋ 4300
ಟಾಟಾ ಅಲ್ಟ್ರೋಜ್ 3104
ಹ್ಯುಂಡೈ ಐ20 2718
ಫೋಕ್ಸ್‌ವ್ಯಾಗನ್ ಪೊಲೋ 1228
ಟೊಯೋಟಾ ಗ್ಲಾಂಝಾ 914
ಫೋರ್ಡ್ ಫ್ರೀ ಸ್ಟೈಲ್ 506