ರಸ್ತೆಗಿಳಿಯುವಂತಿಲ್ಲ 2 ಸ್ಟ್ರೋಕ್ ವಾಹನ- ಯಮಹಾ RX100,ಯಜೆಡಿ ಗತಿಯೇನು?

By Web Desk  |  First Published Jan 14, 2019, 7:54 PM IST

ಮಾಲಿನ್ಯ ನಿಯಿಂತ್ರಣಕ್ಕಾಗಿ ಎಪ್ರಿಲ್ 1, 2019ರಿಂದ  2 ಸ್ಟ್ರೋಕ್ ಎಂಜಿನ್ ವಾಹನಗಳನ್ನ ರಸ್ತೆಗಿಳಿಸುಲಂತಿಲ್ಲ ಅನ್ನೋ RTO ಸಂದೇಶ ಇದೀಗ ಹಲವರಿಗೆ ಶಾಕ್ ನೀಡಿದೆ. ಹಾಗಾದರೆ ಈ ಸಂದೇಶದ ಸತ್ಯಾಸತ್ಯತೆ ಏನು? ನಿಜಕ್ಕೂ 2 ಸ್ಟ್ರೋಕ್ ಎಂಜಿನ್ ವಾಹನಗಳು ನಿಷೇಧವಾಗುತ್ತಾ? ಇಲ್ಲಿದೆ.


ನವದೆಹಲಿ(ಜ.14): ಎಮಿಶನ್ ನಿಯಮ, ಮಾಲಿನ್ಯ ನಿಯಂತ್ರಣ ಸೇರಿದಂತೆ ಹಲವು ಕಾರಣಗಳಿಂದ 2 ಸ್ಟ್ರೋಕ್ ಎಂಜಿನ್ ವಾಹನಗಳನ್ನ ಈಗಾಗಲೇ ಹಲವು ದೇಶ ನಿಷೇಧಿಸಿದೆ. ಇದೀಗ ಭಾರತದಲ್ಲೂ 2 ಸ್ಟ್ರೋಕ್ ಎಂಜಿನ್ ವಾಹನಗಳಿಗೆ ನಿಷೇಧ ಹೇರಲು ಕಳೆದರಡು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿದೆ.

Latest Videos

ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಇದರ ಬೆನ್ನಲ್ಲೇ RTO(ರೀಜನಲ್ ಟ್ರಾನ್ಸ್‌ಪೋರ್ಟ್ ಆಫೀಸ್) ಹೆಸರಿನಲ್ಲಿ ಸಂದೇಶವೊಂದು ಹರಿದಾಡುತ್ತಿದೆ. 2 ಸ್ಟ್ರೋಕ್ ಎಂಜಿನ್ ವಾಹನಗಳಾದ ಯಮಹಾ RX100/ RX135?RZ-Z,ಯಜೆಡಿ ರೋಡ್‌ಕಿಂಗ್ 350/250, ಕೈನೆಟಿಕ್ ಹೊಂಡಾ, ಕವಾಸಕಿ ಬಜಾಜ್, ಬಜಾಜ್ ಚೇತಕ್,  ಸುಜುಕಿ ಶೋಗೊನ್/ಶಾವೊಲಿನ್, ಸುಜುಕಿ ಮ್ಯಾಕ್ಸ್100R ಹಾಗೂ 2 ಸ್ಟ್ರೋಕ್ ಆಟೋ ರಿಕ್ಷಾ ವಾಹನಗಳು 2019ರ ಎಪ್ರಿಲ್ 1 ರಿಂದ ರಸ್ತೆಗಿಳಿಯುವಂತಿಲ್ಲ ಅನ್ನೋ ಸಂದೇಶ ರವಾನೆಯಾಗುತ್ತಿದೆ.

ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?

ಆದರೆ ಈ 2 ಸ್ಟ್ರೋಕ್ ಎಂಜಿನ್ ನಿಷೇಧ ಕುರಿತು ಯಾವುದೇ ಅಧೀಕೃತ ಹೇಳಿಕೆಯಾಗಲಿ, ಸೂಚನೆಯಾಗಲಿ ಭಾರತದಲ್ಲಿ ಹೊರಬಿದ್ದಿಲ್ಲ. ಈ ಸಂದೇಶ ನಕಲಿ ಅನ್ನುವುದು ಸಾಬೀತಾಗಿದೆ.  ಬೆಂಗಳೂರುಲ್ಲೇ ಬರೋಬ್ಬರಿ 60,000 ಆಟೋ ರಿಕ್ಷಾಗಳು 2 ಸ್ಟ್ರೋಕ್ ಎಂಜಿನ್ ಹೊಂದಿದೆ. ಇನ್ನು ಯಮಾಹ ಸೇರಿದಂತೆ ಹಲವು 2 ಸ್ಟ್ರೋಕ್ ಎಂಜಿನ್ ಬೈಕ್ ಹಾಗೂ ಸ್ಕೂಟರ್‌ಗಳು ಬೆಂಗಳೂರಿನಲ್ಲಿದೆ.

ಇದನ್ನೂ ಓದಿ:ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಹತ್ತು ಕಾರುಗಳು!

2 ಸ್ಟ್ರೋಕ್ ಎಂಜಿನ್ ನಿಷೇಧ ಭಾರತದಲ್ಲಿ ಅಷ್ಟು ಸುಲಭವಲ್ಲ. ಇದರಿಂದ ಆಟೋ ಚಾಲಕರ ಮೇಲೆ ನೇರ ಪರಿಣಾಮ ಬೀರಲಿದೆ.  ಹಲವರ ಜೀವನ ನಿರ್ವಹಣೆಯಾಗುತ್ತಿರುವುದೇ ಇದೇ 2 ಸ್ಟ್ರೋಕ್ ಎಂಜಿನ್ ವಾಹನಗಳಿಂದ. ಹೀಗಾಗಿ ಇಲ್ಲಿ ನಿಷೇಧ ಅಂದುಕೊಂಡಷ್ಟು ಸುಲಭವಲ್ಲ. 

click me!