20 ಸಾವಿರಕ್ಕೆ ಬುಕ್ ಮಾಡಿ ನೂತನ ಮಹೀಂದ್ರ XUV300 ಕಾರು!

By Web Desk  |  First Published Jan 13, 2019, 3:04 PM IST

ಮಾರುತಿ ಬ್ರಿಜಾ, ಫೋರ್ಟ್ ಇಕೋ ಸ್ಪೋರ್ಟ್, ಟಾಟಾ ನೆಕ್ಸಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗುತ್ತಿರುವ ನೂತನ ಮಹೀಂದ್ರ XUV300 ಕಾರು ಬುಕಿಂಗ್ ಆರಂಭಗೊಂಡಿದೆ. ಬುಕಿಂಗ್ ಬೆಲೆ ಎಷ್ಟು? ಇಲ್ಲಿದೆ ವಿವರ.


ಮುಂಬೈ(ಜ.13): ಮಾರುತಿ ಬ್ರಿಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ಮಹೀಂದ್ರ XUV300 ಕಾರು ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ಒಂದು ತಿಂಗಳ ಮೊದಲೇ ಮಹೀಂದ್ರ ಕಂಪೆನಿ ನೂತನ XUV300 ಕಾರಿನ ಬುಕಿಂಗ್ ಆರಂಭಿಸಿದೆ. ಕೇವಲ 20,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು.

Tap to resize

Latest Videos

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರು - ಪ್ರತಿ ಚಾರ್ಜ್‌ಗೆ 540 ಕೀ.ಮಿ ಪ್ರಯಾಣ

ಮಹೀಂದ್ರ ಡೀಲರ್‌ಶಿಪ್ ಹಾಗೂ ಅಧೀಕೃತ ವೆಬ್‌ಸೈಟ್ ಮೂಲಕ ಮಹೀಂದ್ರ XUV300 ಕಾರು ಬುಕ್ ಮಾಡಬಹುದು ಎಂದು ಮಹೀಂದ್ರ ಹೇಳಿದೆ. ನೂತನ ಮಹೀಂದ್ರ XUV300 ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೆಲೆ 8 ರಿಂದ 12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ: ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಹತ್ತು ಕಾರುಗಳು!

ಮಹಾರಾಷ್ಟ್ರದ ನಾಸಿಕ್ ನಿರ್ಮಾಣ ಘಟಕದಲ್ಲಿ ಮಹೀಂದ್ರ XUV300 ಕಾರು ನಿರ್ಮಾಣವಾಗಿದೆ. ಮಾರುತಿ ಬ್ರಿಜಾ, ಫೋರ್ಡ್ ಇಕೋ ಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ನೂತನ ಮಹೀಂದ್ರ XUV300 ಕಾರು ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

click me!