ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

By Web Desk  |  First Published Jan 14, 2019, 4:00 PM IST

ಅಂಬಾನಿ ಪುತ್ರರು ಹೊಸ 3.78 ಕೋಟಿ ರೂಪಾಯಿ ಮೌಲ್ಯದ ಬೆಂಟ್ರಿ ಬೆಂಟಯಾಗ್ ಕಾರು ಖರೀದಿಸಿದ್ದಾರೆ. ಇದರ ಜೊತೆಗೆ ಅಂಬಾನಿ ಮಕ್ಕಳ ಭದ್ರತೆಗಾಗಿ ಸೆಕ್ಯೂರಿಟಿ ಗಾರ್ಡ್‌ಗಾಗಿ ಹೊಸ ರೇಂಜ್ ರೋವರ್ ಕಾರು ನೀಡಲಾಗಿದೆ.
 


ಮುಂಬೈ(ಜ.14): ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಕೇಶ್ ಅಂಬಾನಿ ತಮ್ಮ ಭಜ್ರತೆಗಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಇದೀಗ ಅಂಬಾನಿ ಪುತ್ರರ ಭದ್ರತೆಗಾಗಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ನೂತನ ಲ್ಯಾಂಡ್ ರೋವರ್ & ರೇಂಜ್ ರೋವರ್ ಕಾರು ನೀಡಲಾಗಿದೆ.

ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?

Tap to resize

Latest Videos

undefined

ಮುಕೇಶ್ ಅಂಬಾನಿ ಪುತ್ರ ಅಕಾಶ್ ಹಾಗೂ ಅನಂತ್ ಅಂಬಾನಿ ಇದೀಗ ನೂತನ ಬೆಂಟ್ಲಿ ಬೆಂಟಯಾಗ್ ಕಾರು ಖರೀದಿಸಿದ್ದಾರೆ. ಇದರ ಬೆಲೆ 3.78 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ಅಂಬಾನಿ ಮನೆಯಲ್ಲಿ 2 ಬೆಂಟ್ಲಿ ಬೆಂಟಯಾಗ್ ಕಾರುಗಳಿವೆ. ನೂತನ ಕಾರು ಖರೀದಿಸಿದ ಅಂಬಾನಿ ಪುತ್ರರಿಗೆ ಭಧ್ರತೆಗಾಗಿ ರೇಂಜ್ ರೋವರ್ ಕಾರು ಖರೀದಿಸಲಾಗಿದೆ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರು - ಪ್ರತಿ ಚಾರ್ಜ್‌ಗೆ 540 ಕೀ.ಮಿ ಪ್ರಯಾಣ

ಅಂಬಾನಿ ಕುಟುಂಬಕ್ಕೆ Z+ ಭದ್ರತೆ ಇದೆ. ಹೀಗಾಗಿ ಭದ್ರತಾ ಪಡೆಗಳು ರೇಂಜ್ ರೋವರ್, BMW ಸೇರಿದಂತೆ ದುಬಾರಿ ಕಾರುಗಳಲ್ಲೇ ಎಸ್ಕಾಟ್ ನೀಡುತ್ತೆ. ಅಂಬಾನಿ ಕುಟುಂಬ ಕಾರಿನ ಮೂಲಕ ಪ್ರಯಾಣ ಮಾಡುವಾಗ ಕನಿಷ್ಠ 15 ರಿಂದ 20 ರೇಂಜ್ ರೋವರ್, BMW ಸೇರಿದಂತೆ ದುಬಾರಿ ಕಾರುಗಳಲ್ಲಿ ಭದ್ರತಾ ಪಡೆಗಳು ಭದ್ರತೆ ನೀಡುತ್ತವೆ.

click me!