ಭಾರತೀಯ ವಾಹನ ಮಾರುಕಟ್ಟೆ ಸಂಕಷ್ಟಕ್ಕೆ ಸಿಲುಕಿದೆ. ಮಾರಾಟ ಇಳಿಮುಖವಾಗಿದೆ. ಆದರೆ ಕಾರು ಪ್ರಿಯರು ಮಾರುತಿ ವ್ಯಾಗನ್ಆರ್ ಕಾರು ಖರೀದಿಸಲು ಮುಗಿ ಬಿದ್ದಿದ್ದಾರೆ. ಇತರ ಎಲ್ಲಾ ಕಾರುಗಳು ದಾಖಲೆಯ ಕುಸಿತ ಕಂಡಿದ್ದರೆ ವ್ಯಾಗನ್ಆರ್ ಕಾರು ಮಾರಾಟ ಸಮಾಧಾನ ತಂದಿದೆ.
ನವದೆಹಲಿ(ಮೇ.14): ಭಾರತದ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸಿದೆ. 2019ರ ಆರ್ಥಿಕ ವರ್ಷದಲ್ಲಿ ನಿರೀಕ್ಷಿತ ಮಾರಾಟ ಕಾಣದೆ ಕುಸಿತ ಕಂಡಿದೆ. ಕಳೆದ 8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ. ವಾಹನ ಮಾರಾಟ ಒಟ್ಟು ಶೇಕಡಾ17 ರಷ್ಟು ಇಳಿಕೆ ಕಂಡಿದೆ. ಆದರೆ ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ನೂತನ ವ್ಯಾಗನ್ಆರ್ ಕಾರು ಮಾರಾಟ ಅಂಕಿ ಅಂಶ ಕೊಂಚ ಸಮಾಧಾನ ತಂದಿದೆ.
ಇದನ್ನೂ ಓದಿ: ಬ್ರೇಕ್ ಫೇಲ್ ಆದಾಗ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ?
undefined
ಎಪ್ರಿಲ್ ತಿಂಗಳಲ್ಲೇ ಶೇಕಡಾ 30 ರಷ್ಟು ಕಾರು ಮಾರಾಟ ಇಳಿಕೆಯಾಗಿದೆ. ಆದರೆ ಮಾರುತಿ ವ್ಯಾಗನ್ಆರ್ ಕಾರು ಮಾತ್ರ ಮಾರುತಿ ಸಂಸ್ಥೆ ಕೈ ಹಿಡಿದಿದೆ. ಎಪ್ರಿಲ್ ತಿಂಗಳಲ್ಲಿ ಸಣ್ಣ ಕಾರು ವಿಭಾಗದಲ್ಲಿ ಮಾರುತಿ ವ್ಯಾಗನ್ಆರ್ ಕಾರು ಗರಿಷ್ಠ ಮಾರಾಟ ಕಂಡಿದೆ. ಇತರ ಕಾರುಗಳಾದ ಹ್ಯುಂಡೈ ಸ್ಯಾಂಟ್ರೋ, ಟಾಟಾ ಟಿಯಾಗೋ, ದಾಟ್ಸನ್ ಗೋ ಕಾರುಗಳು ಕುಸಿತ ಕಂಡಿದೆ.
ಇದನ್ನೂ ಓದಿ: ಟಾಟಾ ಇಂಡಿಗೋ To ಮರ್ಸಡೀಸ್ ಬೆಂಝ್- ರತನ್ ಟಾಟಾ ಕಾರ್ ಕಲೆಕ್ಷನ್ ಹೇಗಿದೆ?
ಎಪ್ರಿಲ್ ತಿಂಗಳಲ್ಲಿ ಮಾರುತಿ ವ್ಯಾಗನ್ಆರ್ ಕಾರು 11,306 ಕಾರು ಮಾರಾಟವಾಗಿದೆ. ಮಾರ್ಚ್ ತಿಂಗಳ ಮರಾಟಕ್ಕೆ ಹೋಲಿಸಿದರೆ ವ್ಯಾಗನ್ಆರ್ ಕಾರು ಮರಾಟ ಕೂಡ ಕಡಿಮೆಯಾಗಿದೆ. ಮಾರ್ಚ್ ತಿಂಗಳಲ್ಲಿ ವ್ಯಾಗನ್ಆರ್ ಕಾರು 16152 ಕಾರು ಮಾರಾಟವಾಗಿತ್ತು. ಎಪ್ರಿಲ್ ತಿಂಗಳ ಮಾರಾಟ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಸ್ಯಾಂಟ್ರೋ 6,906 ಕಾರುಗಳು ಮಾರಾಟವಾಗಿದೆ. ಮಾರುತಿ ಸೆಲೆರಿಯೋ 6,668, ಟಾಟಾ ಟಿಯಾಗೋ 5,309 , ಮಾರುತಿ ಇಗ್ನಿಸ್ 2497, ದಾಟ್ಸನ್ 279 ಕಾರುಗಳು ಮಾರಾಟವಾಗಿದೆ.