ಕಳೆದ 8 ವರ್ಷಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲಿಟ್ಟದ್ದ ಭಾರತೀಯ ವಾಹನ ಮಾರುಕಟ್ಟೆ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ವಾಹನ ಕಂಪನಿಗಳಿಗೆ ಎದುರಾಗಿರೋ ಶಾಕ್ ಏನು? ಇಲ್ಲಿದೆ ವಿವರ.
ನವದೆಹಲಿ(ಮೇ.13): 2019ರ ಆರ್ಥಿಕ ವರ್ಷ ಆರಂಭವಾದ ತಿಂಗಳಲ್ಲೇ ಭಾರತೀಯ ಆಟೋಮೊಬೈಲ್ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಳೆದ 8 ವರ್ಷಗಳಲ್ಲಿ ಯಾವುದೇ ಆತಂಕವಿಲ್ಲದೆ ಸಾಗಿದ್ದ ಭಾರತ ವಾಹನ ಮಾರುಕಟ್ಟೆಗೆ ಇದೀಗ ಶಾಕ್ ಮೇಲೆ ಶಾಕ್ ಎದುರಾಗಿದೆ. ಈ ವರ್ಷ ವಾಹನ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಈ ಮೂಲಕ ಹಲವು ಕಂಪನಿಗಳು ನಷ್ಟದತ್ತ ಮುಖಮಾಡಿದೆ.
ಇದನ್ನೂ ಓದಿ: ರಸ್ತೆ ನಿಯಮ ಉಲ್ಲಂಘನೆ- ಕಾರು ಮಾಲೀಕನಿಗೆ 1 ರೂ.ಲಕ್ಷ ದಂಡ!
undefined
2019ರ ಆರ್ಥಿಕ ವರ್ಷದಲ್ಲಿ ವಾಹನ ಮಾರಾಟ ಶೇಕಡಾ 17.07 ರಷ್ಟು ಇಳಿಕೆ ಕಂಡಿದೆ. 2011ರಲ್ಲಿ ಬರೋಬ್ಬರಿ ಶೇಕಡಾ 19.87 ರಷ್ಟು ಇಳಿಕೆಯಾಗಿತ್ತು. ಇದೇ ಗರಿಷ್ಠ ಇಳಿಕೆಯಾಗಿದೆ. ಇದಾದ ಬಳಿಕ ಭಾರತದಲ್ಲಿ ವಾಹನ ಮಾರಾಟ ಗಣನೀಯವಾಗಿ ಏರಿಕೆ ಕಂಡಿತ್ತು. ಹಲವು ಕಂಪನಿಗಳು ಭಾರತದತ್ತ ಮುಖ ಮಾಡಿತ್ತು. ಇದರಲ್ಲಿ ಪ್ಯಾಸೆಂಜರ್ ಕಾರು ಗರಿಷ್ಠ ಇಳಕೆ ಕಂಡಿದೆ. ಪ್ಯಾಸೆಂಜರ್ ಕಾರು 19.93% ಇಳಿಕೆಯಾಗಿದೆ.
ಇದನ್ನೂ ಓದಿ: ಕಾರು ರಿಪೇರಿಗೆ ಡೀಲರ್ ಮೊತ್ತ 3 ಲಕ್ಷ- ಲೋಕಲ್ ಗ್ಯಾರೇಜ್‌ನಲ್ಲಿ 1000 ರೂ.ಗೆ ರೆಡಿ!
ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಹಾಗೂ ಹ್ಯುಂಡೈಗೆ ಭಾರಿ ಹೊಡೆತ ಬಿದ್ದಿದೆ. ಇನ್ನು ಭಾರತೀಯ ಕಾರು ಕಂಪನಿಗಳಾದ ಟಾಟಾ ಮೋಟಾರ್ಸ್, ಮಹೀಂದ್ರ ಮಾರಾಟ ಕೂಡ ಇಳಿಕೆಯಾಗಿದೆ. ಇದು ವಾಹನ ಕಂಪನಿಗಳ ಚಿಂತೆ ಹೆಚ್ಚಿಸಿದೆ. 2019ರಲ್ಲಿ ಜಾರಿಯಾದ ಹೊಸ ನೀತಿಗಳು ವಾಹನ ಮಾರಾಟದ ಇಳಿಕೆಗೆ ಒಂದು ಕಾರಣವಾಗಿದೆ.
ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ಸುಜುಕಿ ಕ್ಯಾರಿ ಟೆಂಪೋ ಟ್ರಾವಲರ್ ಬಿಡುಗಡೆ!
ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನು ಮಾರಾಟ ಮಾಡುವಂತಿಲ್ಲ, BS-VI ಎಮಿಶನ್ ಎಂಜಿನ್ ನಿಯಮ, ABS, ಏರ್‌ಬ್ಯಾಗ್ ಕಡ್ಡಾಯ ಸೇರಿದಂತೆ ಹಲವು ನಿಯಮಗಳು ಜಾರಿಯಾಗಿದೆ. ಹೀಗಾಗಿ ವಾಹನ ಬೆಲೆ ಕೂಡ ಹೆಚ್ಚಳವಾಗಿದೆ. ಇದು ಮಾರಾಟ ಮೇಲೆ ಪರಿಣಾಮ ಬೀರಿದೆ.