ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಸ್ಟಮ್ ಕಾರು ಅನಾವರಣ!

By Web Desk  |  First Published Mar 26, 2019, 1:11 PM IST

ಮಾರುತಿ ಸ್ವಿಫ್ಟ್  ಸ್ಪೋಟ್ಸ್ ಕಸ್ಟಮ್ ಕಾರು ಅನಾವರಣಗೊಂಡಿದೆ. ನೂತನ ಸ್ವಿಫ್ಟ್ ಕಾರಿಗಿಂತಲು ಅತ್ಯಾಕರ್ಷಕ ವಿನ್ಯಾಸ ಹೊಂದಿರುವ ಈ ಕಾರು ಇತರ ಎಲ್ಲಾ ಹ್ಯಾಚ್‌ಬ್ಯಾಕ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. 


ಬ್ಯಾಂಕಾಕ್(ಮಾ.26): ಮಾರುತಿ ಸುಜುಕಿ ಕಂಪನಿಯ ನೂತನ ಸ್ವಿಫ್ಟ್ ಕಾರು ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿದೆ.  ಮಾರಾಟದಲ್ಲೂ ದಾಖಲೆ ಬರೆದಿದೆ. ಇದೀಗ ಸ್ವಿಫ್ಟ್ ಸ್ಪೋರ್ಟ್ಸ್ ಕಸ್ಟಮ್ ಕಾರು ಅನಾವರಣ ಮಾಡಿದೆ. ಬ್ಯಾಂಕಾಕ್ ಅಂತಾರಾಷ್ಟ್ರೀಯ ಮೋಟಾರ್ ಶೋನಲ್ಲಿ ನೂತನ ಸ್ವಿಫ್ಟ್ ಕಸ್ಟಮ್ ಸ್ಪೋರ್ಟ್ಸ್ ಕಾರನ್ನು ಅನಾವರಣ ಮಾಡಲಾಗಿದೆ.

Tap to resize

Latest Videos

undefined

ಇದನ್ನೂ ಓದಿ: ಇಂಗ್ಲೆಂಡ್ ರಸ್ತೆಯಲ್ಲಿ ಭಾರತದ ಬಜಾಜ್ ಅಟೋ ಹಾಗೂ ಓಲಾ!

ಸ್ಟೈಲಿಶ್ ಡಿಸೈನ್, ಸ್ಪೋರ್ಟೀವ್ ಲುಕ್, ಸ್ಪೋರ್ಟ್ಸ್ ಬಂಪರ್, ಹೊನಿಕಾಂಬ್ ಫ್ರಂಟ್ ಗ್ರಿಲ್ ಸೇರಿದಂತೆ ಕೆಲ ಬದಲಾವಣೆ ಮಾಡಿರುವ ಸುಜುಕಿ ಗ್ರಾಹಕರನ್ನ ತನ್ನತ್ತ ಸೆಳೆಯುವಂತೆ ಮಾಡಿದೆ. ಒಳವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಈ ಮೂಲಕ ಇತರ ಎಲ್ಲಾ ಹ್ಯಾಚ್‌ಬ್ಯಾಕ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

2019ರ ಸ್ವಿಫ್ಟ್ ಸ್ಪೋರ್ಟ್ ಕಸ್ಟಮ್ ಕಾರು  K14C 1.4 ಲೀಟರ್, ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದ್ದು,  140 PS ಪವರ್ ಹಾಗೂ(@ 5,500 rpm) ಹಾಗೂ 230 Nm(@2,500-3,500 rpm)ಪೀಕ್ ಟಾರ್ಕ್ ಉತ್ಪಾದಿಸಲಿದೆ.  6 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 6  ಆಟೋಮ್ಯಾಟಿಕ್ ಟ್ರಾನ್ಸಮಿಶನ್ ವೇರಿಯೆಂಟ್ ಲಭ್ಯವಿದೆ. ನೂನತ ಕಾರಿನ ಬೆಲೆ, ಮೈಲೇಜ್ ಮಾಹಿತಿ ಬಹಿರಂಗಗೊಂಡಿಲ್ಲ.

click me!