ಸುಜುಕಿ ಆಕ್ಸೆಸ್ 125 CBS ಸ್ಕೂಟರ್ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದ ನೂತನ ನಿಯಮದನ್ವಯ ಸುಜುಕಿ ಅಕ್ಸೆಸ್ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ವಿಶೇಷತೆ, ಬೆಲೆ ಎಷ್ಟು? ಇಲ್ಲಿದೆ ವಿವರ.
ನವದೆಹಲಿ(ಮಾ.25): ಸುಜುಕಿ ಮೋಟಾರ್ಸ್ ನೂತನ ಆಕ್ಸೆಸ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಹಿಂದಿನ ಸುಜುಕಿ ಆಕ್ಸೆಸ್ 125 ಸ್ಕೂಟರ್ ಇದೀಗ CBS(ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್)ನೊಂದಿಗೆ ಬಿಗುಗಡೆಯಾಗಿದೆ. ಕೇಂದ್ರ ಸರ್ಕಾರದ ನಿಯಮದನುಸಾರ ಮಾರ್ಚ್ 31ರೊಳಗೆ 125 ಸಿಸಿ ಗಿಂತಿ ಹೆಚ್ಚಿನ ಎಂಜಿನ್ ಹೊಂದಿರುವ ಬೈಕ್ ಹಾಗೂ ಸ್ಕೂಟರ್ ABS, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) CBS(ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಅಳವಡಿಸುವುದು ಕಡ್ಡಾಯ.
ಇದನ್ನೂ ಓದಿ: ಮಾರಾಟದಲ್ಲಿ ಆ್ಯಕ್ಟಿವಾ ಹಿಂದಿಕ್ಕಿದೆ ಈ ಬೈಕ್!
undefined
CBS ಹೊರತು ಪಡಿಸಿದರೆ ಸುಜುಕಿ ಆಕ್ಸೆಸ್ 125 CBS ಸ್ಕೂಟರ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 124 cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಎಂಜಿನ್, 8.5 bhp ಪವರ್ ಹಾಗೂ 10.2 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
ಇದನ್ನೂ ಓದಿ: ಭಿಕ್ಷುಕರ ವೇಷದಲ್ಲಿ ಪೊಲೀಸ್- ನಿಯಮ ಪಾಲಿಸದವರಿಗೆ ನಡು ರಸ್ತೆಯಲ್ಲೇ ಶಿಕ್ಷೆ!
ನೂತನ ಸುಜುಕಿ ಆಕ್ಸೆಸ್ 125 CBS ಸ್ಕೂಟರ್ ಬೆಲೆ 56,667 ರೂಪಾಯಿ(ಎಕ್ಸ್ ಶೋ ರೂಂ). ಇದು CBS ರಹಿತ ಸ್ಕೂಟರ್ ಬೆಲೆಗಿಂತ ಕೇವಲ 500 ರೂಪಾಯಿ ಮಾತ್ರ ಹೆಚ್ಚು. ನೂತನ CBS ತಂತ್ರಜ್ಞಾನದಿಂದ ಹೊಂಡಾ ಆಕ್ಟೀವಾ 125, ಎಪ್ರಿಲಿಯಾ SR 125, ವೆಸ್ಪಾ LX, ಹಾಗೂ TVS NTorqಗೆ ತೀವ್ರ ಪೈಪೋಟಿ ನೀಡಲಿದೆ.