ಭಾರತೀಯರ ಮೋಡಿ ಮಾಡಿದ ಮಾರುತಿ ಬಲೆನೋ RS ಕಾರು ಸ್ಥಗಿತ?

Suvarna News   | Asianet News
Published : Jan 24, 2020, 06:56 PM ISTUpdated : Jan 24, 2020, 07:09 PM IST
ಭಾರತೀಯರ ಮೋಡಿ ಮಾಡಿದ ಮಾರುತಿ ಬಲೆನೋ RS ಕಾರು ಸ್ಥಗಿತ?

ಸಾರಾಂಶ

ಮಾರುತಿ ಸುಜುಕಿ ಬಲೆನೋ RS ಕಾರು ಬಲಿಷ್ಠ ಎಂಜಿನ್, ಆಕರ್ಷಕ ಲುಕ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಒಳಗೊಂಡಿದೆ. ಭಾರತದಲ್ಲಿ ಜನಪ್ರಿಯವಾಗಿರುವ ಬಲೆನೋ RS ಕಾರು ಎಪ್ರಿಲ್ 1 ರಿಂದ ಸ್ಥಗಿತಗೊಳ್ಳಲಿದೆ.

ನವದೆಹಲಿ(ಜ.24): ಎಪ್ರಿಲ್ 1, 2020ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ವಾಹನಗಳು BS6 ಎಂಜಿನ್ ಹೊಂದಿರಬೇಕು. ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಇದೀಗ ಹಲವು ಕಂಪನಿಗಳು ತಮ್ಮ ವಾಹನಗಳನ್ನು BS6 ಎಂಜಿನ್ ಆಗಿ ಪರಿವರ್ತಿಸುತ್ತಿದೆ. ಆದರೆ ಜನಪ್ರಿಯ ಮಾರುತಿ ಬಲೆನೋ RS BS6 ಎಂಜಿನ್‌ಗೆ ಪರಿವರ್ತನೆ ಆಗುತ್ತಿಲ್ಲ. ಹೀಗಾಗಿ ಬಲೆನೋ RS ಕಾರು ಸ್ಥಗಿತಗೊಳ್ಳುತ್ತಿದೆ.

ಇದನ್ನೂ ಓದಿ: ಬಹುಬೇಡಿಕೆಯ ಮಾರುತಿ ಬಲೆನೋ ಕಾರು ಬೆಲೆ 1 ಲಕ್ಷ ರು. ಭಾರೀ ಇಳಿಕೆ!

ಮಾರುತಿ ಬಲೆನೋ ಕಾರಿನ ಯಶಸ್ಸಿನ ಬೆನ್ನಲ್ಲೇ ಬಲೆನೋ RS ಕಾರು  ಬಿಡುಗಡೆಯಾಯಿತು. 2017ರಲ್ಲಿ ಬಲೆನೋ RS ಕಾರು ಭಾರತದಲ್ಲಿ ಬಿಡುಗಡೆಯಾಯಿತು. ಇನ್ನೂ 2019ರಲ್ಲಿ ಬಲೆನೋ RS ಫೇಸ್‌ಲಿಫ್ಟ್ ಕೂಡ ಬಿಡುಗಡೆಯಾಯಿತು. ಆದರೆ ಬಲೆನೋ RS ಕಾರಿಗೆ ಬೇಡಿಕೆ ಕಡಿಮೆಯಾದ ಕಾರಣ BS6 ಎಂಜಿನ್‌ಗೆ ಪರಿವರ್ತನೆ ಮಾಡದಿರಲು ಮಾರುತಿಸುಜುಕಿ ನಿರ್ಧರಿಸಿದೆ.

ಇದನ್ನೂ ಓದಿ: 44 ತಿಂಗಳಲ್ಲಿ ಹೊಸ ದಾಖಲೆ ಬರೆದ ಮಾರುತಿ ಬಲೆನೊ ಕಾರು!

ಬಲೆನೋ RS ಕಾರಿನ ದುಬಾರಿ ಬೆಲೆಯಿಂದಾಗಿ ಬೇಡಿಕೆ ಕಡಿಮೆಯಾಗಿದೆ. ಕಾರಣ ಬಲೆನೋ RS ಕಾರಿಗೆ 8.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಬಲೆನೋ RS ಫೇಸ್‌ಲಿಫ್ಟ್  ಕಾರಿಗೆ 8.76 ಲಕ್ಷ ರೂಪಯಿ(ಎಕ್ಸ್ ಶೋ ರೂಂ). BS6 ಎಂಜಿನ್ ಅಪ್‌ಗ್ರೇಡ್ ಮಾಡಿದರೆ ಬಲೆನೋ RS ಕಾರಿನ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.  ಗ್ರಾಹಕರು ಬಲೆನೋ ಕಾರಿಗೆ ನೀಡಿದಷ್ಟು ಪ್ರಾಮುಖ್ಯತೆ RS ಕಾರಿಗೆ ನೀಡಿಲ್ಲ. ಹೀಗಾಗಿ ಬೇಡಿಕೆ ಸಂಪೂರ್ಣವಾಗಿ ಕುಸಿದಿದೆ.

ಇದನ್ನೂ ಓದಿ: ಮಾರುತಿ ಬಲೆನೊ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ- 23.87 Kmpl ಮೈಲೇಜ್

ಗ್ರಾಹಕರ ಬೇಡಿಕೆ ಇಲ್ಲದ ಕಾರಣ ಬಲೆನೋ RS ಕಾರನ್ನು BS6  ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡುತ್ತಿಲ್ಲ. ನಿಯಮದ ಪ್ರಕಾರ ಎಪ್ರಿಲ್ 1 ರಿಂದ BS6 ಎಂಜಿನ್ ನೂತನ ಕಾರು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಹೀಗಾಗಿ ಬಲೆನೋ BS6 ಸ್ಥಗಿತಗೊಳ್ಳಲಿದೆ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ