ಒಂದೇ ದಿನದಲ್ಲಿ ದಾಖಲೆ ಬರೆದ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್!

By Suvarna News  |  First Published Jan 24, 2020, 3:56 PM IST

ಟೊಯೊಟಾ ಇನೋವಾ ಕಾರಿಗೆ ಪೈಪೋಟಿ ನೀಡಲು ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರು ಬಿಡುಗಡೆ ಮಾಡುತ್ತಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಅಟೋ ಎಕ್ಸ್ಪೋದಲ್ಲಿ ಕಾರ್ನಿವಲ್ ಕಾರು ಬಿಡುಗಡೆಯಾಗಲಿದೆ. ಇದೀಗ ಲಾಂಚ್‌ಗೂ ಮುನ್ನವೇ ಕಾರ್ನಿವಲ್ ದಾಖಲೆ ಬರೆದಿದೆ.
 


ಅನಂತಪುರಂ(ಜ.24): ಕಿಯಾ ಮೋಟಾರ್ಸ್ ಭಾರತದಲ್ಲಿ ತನ್ನ ಮೊದಲ ಕಾರಾದ ಸೆಲ್ಟೋಸ್ ಬಿಡುಗಡೆ ಮಾಡಿ ಭಾರಿ ಯಶಸ್ಸು ಕಂಡಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್, ರೆನಾಲ್ಟ್ ಡಸ್ಟರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಸೆಲ್ಟೋಸ್ ಬಿಡುಗಡೆಯಾಗಿದೆ. ಇಷ್ಟೇ ಈ ಎಲ್ಲಾ ಕಾರುಗಳನ್ನು ಹಿಂದಿಕ್ಕಿ ಮಾರಾಟದಲ್ಲಿ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಕಿಯಾ ಮೋಟಾರ್ಸ್ ಕಾರ್ನಿವಲ್ ಕಾರು ಬಿಡುಗಡೆ ಮಾಡುತ್ತಿದೆ.

Tap to resize

Latest Videos

undefined

ಇದನ್ನೂ ಓದಿ: ಟೊಯೋಟಾ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್ ಕಾರಿನ ಬೆಲೆ ಬಹಿರಂಗ!

ಫೆಬ್ರವರಿ 5 ರಂದು  ಗ್ರೇಟರ್ ನೋಯ್ಡಾದಲ್ಲಿ ನಡೆಲಿರುವ ಆಟೋ ಎಕ್ಸ್ಪೋದಲ್ಲಿ ಕಾರ್ನಿವಲ್ ಕಾರು ಬಿಡುಗಡೆಯಾಗಲಿದೆ. ಜನವರಿ 21  ರಂದು ಕಾರ್ನಿವಲ್ ಕಾರು ಬುಕಿಂಗ್ ಆರಂಭಿಸಿತು. ಕಿಯಾ ಕಾರ್ನಿವಲ್ ಕಾರು ಬುಕಿಂಗ್ ಬೆಲೆ 1 ಲಕ್ಷ ರೂಪಾಯಿ. ಬುಕಿಂಗ್ ಆರಂಭಿಸಿದ ಒಂದೇ ದಿನದಲ್ಲಿ 1400 ಕಾರು ಬುಕ್ ಆಗಿದೆ. ಈ ಮೂಲಕ ಗರಿಷ್ಠ ಬುಕಿಂಗ್ ಆದ  MPV ಕಾರು ಅನ್ನೋ ಹೆಗ್ಗಳಿಕೆಗೆ ಕಾರ್ನಿವಲ್ ಪಾತ್ರವಾಗಿದೆ.

ಇದನ್ನೂ ಓದಿ: ಇನೋವಾ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಟೀಸರ್ ರಿಲೀಸ್!

ಕಾರ್ನಿವಲ್ ಕಾರಿನ ಬೆಲೆ ಇನೋವಾ ಕಾರಿಗಿಂತ ದುಬಾರಿಯಾಗಿದೆ. ಕಾರ್ನಿವಲ್ ಬೆಲೆ 25 ರಿಂದ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಿಯಾ ಸೆಲ್ಟೋಸ್ ಬಳಿಕ ಕಾರ್ನಿವಲ್ ಕಾರಿಗೆ ಸಿಕ್ಕಿರುವ ಸ್ಪಂದನೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಭಾರತೀಯರು ಕಿಯಾ ಮೇಲೆ ಇಟ್ಟಿರುವ ನಂಬಿಕೆಗೆ ನಾವು ಚಿರಋಣಿ ಎಂದು ಕಿಯಾ ಮೋಟಾರ್ಸ್ ಇಂಡಿಯಾದ CEO ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೊಕ್ಯುಮ್ ಶಿಮ್ ಹೇಳಿದ್ದಾರೆ. 

ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!