ಬ್ರೆಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬರುತ್ತಿದೆ ಕಿಯಾ ಸಬ್ ಕಾಂಪಾಕ್ಟ್ SUV ಕಾರು!

By Suvarna NewsFirst Published Jan 24, 2020, 6:08 PM IST
Highlights

ಸದ್ಯ ಎಲ್ಲರ ಚಿತ್ತ ಕಿಯಾ ಕಾರ್ನಿವಲ್ MPV ಕಾರಿನತ್ತ ನೆಟ್ಟಿದೆ. ಟೊಯೊಟಾ ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಾರ್ನಿವಲ್ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ  ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಡಿಮೆ ಬೆಲೆ ಹಾಗೂ ಆಕರ್ಷಕ SUV ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ವಿವರ ಇಲ್ಲಿದೆ.

ಅನಂತಪುರಂ(ಜ.24): ಸೌತ್ ಕೊರಿಯಾ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಇದೀಗ ಭಾರತದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಈಗಾಗಲೇ ಕಿಯಾ ಸೆಲ್ಟೋಸ್ ಕಾರಿನ ಮೂಲಕ ಭಾರತದಲ್ಲಿ ಹೊಸ ಯುಗ ಆರಂಭಿಸಿದ ಕಿಯಾ ಮೋಟಾರ್ಸ್ ಇದೀಗ ಕಿಯಾ ಕಾರ್ನಿವಲ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಕಿಯಾ ಸಬ್ ಕಾಂಪಾಕ್ಟ್ SUV ಕಾರು ಕೂಡ ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ದಾಖಲೆ ಬರೆದ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್!.

ಮಾರುತಿ ಬ್ರಿಜ್ಜಾ, ಹ್ಯುಂಡೈ ವೆನ್ಯೂ, ಮಹೀಂದ್ರ XUV300 ಕಾರು ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ SUV ಕಾರು ಬಿಡುಗಡೆಯಾಗುತ್ತಿದೆ. ಕಿಯಾ ಸೆಲ್ಟೋಸ್, ಇದೀಗ ಕಾರ್ನಿವಲ್ ಹಾಗೂ ಬರಲಿರುವ ಸಬ್ ಕಾಂಪಾಕ್ಟ್ ಕಾರು ಕೂಡ ಅನಂತಪುರದಲ್ಲಿರುವ ಕಿಯಾ ಮೋಟಾರ್ಸ್ ಘಟಕದಲ್ಲಿ ನಿರ್ಮಾಣವಾಗಲಿದೆ.

ಇದನ್ನೂ ಓದಿ: 3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

ನೂತನ ಸಬ್ ಕಾಂಪಾಕ್ಟ್ SUV ಕಾರಿನ ಬೆಲೆ 7 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಲೆಯಲ್ಲೂ ಬ್ರೆಜ್ಜಾ ಹಾಗೂ ವೆನ್ಯೂಗೆ ಪೈಪೋಟಿ ನೀಡಲು ಕಿಯಾ ಸಜ್ಜಾಗಿದೆ. ನೂತನ ಕಾರು 1.2 ಲೀಟರ್ ಪೆಟ್ರೋಲ್, 1 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಬಿಡುಗಡೆ ಮಾಡಲು ನಿರ್ಧರಿಸಿದೆ.

ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?

ಕಿಯಾ ಕಾರ್ನಿವಲ್ ಇದೆ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಬಿಡುಗಡೆಯಾಗಲಿದೆ. ಇನ್ನೂ ನೂತನ ಸಬ್ ಕಾಂಪಾಕ್ಟ್ SUV ಕಾರು 2020ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 

click me!