ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. BS6 ಎಂಜಿನ್ ಜೊತೆಗೆ ಹಲುವ ಫೀಚರ್ಸ್ ಸೇರಿಸಲಾಗಿದೆ. ವಿನ್ಯಾಸದಲ್ಲೂ ಕೆಲ ಬದಲಾವಣೆ, ಒಳಭಾಹದಲ್ಲೂ ಕೆಲ ಬದಲಾವಣೆಯೊಂದಿಗೆ ಬ್ರೆಜಾ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ನವದೆಹಲಿ(ಜ.14): ಮಾರುತಿ ಸುಜುಕಿಯ ಜನಪ್ರಿಯ ಸಬ್ ಕಾಂಪಾಕ್ಟ್ SUV ಕಾರಾದ ಬ್ರೆಜ್ಜಾ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಫೆಬ್ರವರಿ 6 ರಂದು ಮಾರುತಿ ಬ್ರೆಜ್ಜಾ ಫೇಸ್‌ಲಿಫ್ಟ್ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೊರಭಾಗ ಹಾಗೂ ಒಳಭಾಗದಲ್ಲಿನ ಬದಲಾವಣೆಯೊಂದಿಗೆ ಬ್ರೆಜ್ಜಾ ಕಾರು ಮಾರುಕಟ್ಟೆ ಪ್ರವೇಶಸಲಿದೆ.
undefined
ಇದನ್ನೂ ಓದಿ: 1984ರ ಮಾರುತಿ 800 ಕಾರಿಗೆ ಮರುಜೀವ; ಹಳೇ ಕಾರಿಗೆ ಹೊಸ ಟಚ್!...
ನೂತನ ಬ್ರೆಜಾ ಫೇಸ್‌ಲಿಫ್ಟ್ BS6 ಎಂಜಿನ್ ಹೊಂದಿದೆ. ಎಪ್ರಿಲ್ 1 ರಿಂದ ನೂತನ ವಾಹನಗಳೆಲ್ಲಾ BS6 ಎಂಜಿನ್ ಹೊಂದಿರಬೇಕು. ಇದೀಗ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಬ್ರೆಜಾ ಆತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. 1,3 ಲೀಟರ್ ಡೀಸೆಲ್ ಎಂಜಿನ್ ಬದಲು 1.5 ಲೀಟರ್ ಪೆಟ್ರೋಲ್ ಎಂಜಿನ್ ಬ್ರೆಜಾ ಬಿಡುಗಡೆಯಾಗಲಿದೆ. ಮಾರುತಿ ಎರ್ಟಿಗಾ ಹಾಗೂ ಮಾರುತಿ ಸಿಯಾಜ್ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ ಬಳಲಸಲಾಗಿದೆ. ಇದೇ ಎಂಜಿನ್ ಇದೀಗ ನೂತನ ಬ್ರೆಜಾ ಫೇಸ್‌ಲಿಫ್ಟ್‌ನಲ್ಲೂ ಬಳಸಲಾಗುತ್ತಿದೆ.
ಇದನ್ನೂ ಓದಿ: ಬರುತ್ತಿದೆ ಸ್ಪೊರ್ಟೀವ್ ಮಾರುತಿ ಸ್ವಿಫ್ಟ್ ಕಾರು!
1.5 ಲೀಟರ್ ಪೆಟ್ರೋಲ್ ಎಂಜಿನ್ 5 ಮಾನ್ಯುಯೆಲ್ ಗೇರ್ ಬಾಕ್ಸ್ ಹಾಗೂ ಟಾಪ್ ಮಾಡೆಲ್ ಆಟೋಮ್ಯಾಟಿಕ್(AMT) ಹೊಂದಿದೆ. ಒಳಭಾಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಫ್ರಂಟ್ ಬಾನೆಟ್ ಹೆಚ್ಚು ಅಗಲವಾಗಿದೆ. ಇದನ್ನು 2 ಸೆಕ್ಷನ್‌ಗಳಾಗಿ ವಿಂಗಡಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬ್ರೆಜಾ ಕಾರಿನ ಫಾಗ್ ಲ್ಯಾಂಪ್ ಹಾಗೂ ಹೆಡ್‌ಲ್ಯಾಂಪ್ಸ್‌ಗಿಂತ ದೊಡ್ಡಾದ ಲ್ಯಾಂಪ್ಸ್ ನೂತನ ಕಾರಿನಲ್ಲಿ ಬಳಸಲಾಗಿದೆ.
ಇದನ್ನೂ ಓದಿ: 5 ಲಕ್ಷ ರೂಪಾಯಿ ಒಳಗೆ ಲಭ್ಯವಿರುವ ಭಾರತದ ಟಾಪ್ 10 ಕಾರು ಪಟ್ಟಿ!.
ಡೇ ಟೈಮ್ ರನ್ನಿಂಗ್ LED ಲೈಟ್, ಫ್ರಂಟ್ ಹಾಗೂ ರೇರ್ ಫಾಕ್ಸ್ ಸ್ಕಿಡ್ ಪ್ಲೇಟ್, ಕಪ್ಪು ಅಲೋಯ್ ವೀಲ್ಹ್, ಟಾಪ್ ವೇರಿಯೆಂಟ್ ಕಾರಿನಲ್ಲಿ ಡೈಮಂಡ್ ಕಟ್ ಅಲೋಯ್ ವೀಲ್ಹ್ ಸೇರಿದಂತೆ ಕೆಲ ಬದಲಾವಣೆಗಳು ಬ್ರೆಜಾ ಕಾರಿನ ಅಂದ ಹೆಚ್ಚಿಸಿದೆ.