ಹೆಚ್ಚು ಕಡಿಮೆ ವೆಸ್ಪಾ ರೀತಿಯಲ್ಲೇ ವಿನ್ಯಾಸ ಹೊಂದಿರುವ ನೂತನ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ನೂತನ ಸ್ಕೂಟರ್ ಕೇವಲ 2 ಸಾವಿರ ರೂಪಾಯಿಗೆ ಬುಕ್ ಮಾಡಬಹುದು. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಲ್ಲಿದೆ.
ಮುಂಬೈ(ಜ.14): ಬಜಾಜ್ ಆಟೋಮೊಬೈಲ್ ಕಂಪನಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ಹಲವು ವಿಶೇಷತೆಗಳೊಂದಿಗೆ ನೂತನ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಮಾರಾಟಕ್ಕೆ ಲಭ್ಯವಿದೆ. ಆಕರ್ಷಕ ಬಣ್ಣ, ಅತ್ಯುತ್ತಮ ರೆಟ್ರೋ ಶೈಲಿ ವಿನ್ಯಾಸದಿಂದ ಇತರ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಭಿನ್ನವಾಗಿದೆ.
undefined
ಇದನ್ನೂ ಓದಿ: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ವಿ ಶೇಷತೆ!..
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿಂದ ಆರಂಭವಾಗುತ್ತಿದೆ. ಬಜಾಜ್ ಅರ್ಬನೈಟ್ ಎಡಿಶನ್ ಸ್ಕೂಟರ್ ಡ್ರಂ ಬ್ರೇಕ್ ಹೊಂದಿದ್ದು, 1 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಪ್ರೀಮಿಯರ್ ಎಡಿಶನ್ ಸ್ಕೂಟರ್ ಡಿಸ್ಕ್ ಬ್ರೇಕ್ ಹೊಂದಿದ್ದು, 1.15 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: BS6 ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆ; ಬೆಲೆ ಏರಿಕೆ!
6 ವಿವಿದ ಬಣ್ಣಗಳಲ್ಲಿ ಬಜಾಜ್ ಚೇತಕ್ ಸ್ಕೂಟರ್ ಲಭ್ಯವಿದೆ. ಜನವರಿ 15 ರಿಂದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಳ್ಳಲಿದೆ. ಕೇವಲ 2,000 ರೂಪಾಯಿ ಪಾವತಿಸಿ ಚೇತಕ್ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಚೇತಕ್ ಸ್ಕೂಟರ್ ರೆಟ್ರೋ ಶೈಲಿ ಜೊತೆಗೆ ಮೆಟಾಲಿಕ್ ಬಾಡಿ ಹೊಂದಿದೆ. ವಿನ್ಯಾಸದಲ್ಲಿ ವೆಸ್ಪಾ ಸ್ಕೂಟರ್‌ನಿಂದ ಸ್ಪೂರ್ತಿ ಪಡೆದಂತಿದೆ.
80ರ ದಶಕದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಭಾರತೀಯರ ಮನೆಮಾತಾಗಿತ್ತು. ಹಮಾರ ಬಜಾಜ್ ಜಾಹೀರಾತು ಕೂಡ ಅಷ್ಟೇ ಜನಪ್ರಿಯವಾಗಿತ್ತು. ಇದೀಗ ಇದೇ ಹೆಸರಿನಲ್ಲಿ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.
ಬಜಾಜ್ ಚೇತಕ್ ಸ್ಕೂಟರ್ ಕರ್ಬ್ ತೂಕ 120Kkg, LED ಲೈಟ್ಸ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕನ್ಸೋಲ್, ಕೀ ಲೆಸ್ ಇಗ್ನೀಶನ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಇಕೋ ಮೂಡ್‌ನಲ್ಲಿನ ರೈಡ್‌ನಲ್ಲಿ 95 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಇನ್ನು ಸ್ಪೋರ್ಟ್ ಮೂಡ್‌ನಲ್ಲಿ 85 ಕಿ.ಮೀ ಮೈಲೇಜ್ ನೀಡಲಿದೆ