44 ತಿಂಗಳಲ್ಲಿ ಹೊಸ ದಾಖಲೆ ಬರೆದ ಮಾರುತಿ ಬಲೆನೊ ಕಾರು!

Published : Jun 03, 2019, 09:11 PM IST
44 ತಿಂಗಳಲ್ಲಿ ಹೊಸ ದಾಖಲೆ ಬರೆದ ಮಾರುತಿ ಬಲೆನೊ ಕಾರು!

ಸಾರಾಂಶ

ಮಾರುತಿ ಬಲೆನೋ ಕಾರು ಹೊಸ ದಾಖಲೆ ಬರೆದಿದೆ. ಕೇವಲ 44 ತಿಂಗಳಲ್ಲಿ ಬಲೆನೊ ಭಾರತದಲ್ಲಿ ಇತರ ಎಲ್ಲಾ ಕಾರುಗಳನ್ನು ಹಿಂದಿಕ್ಕ ಇತಿಹಾಸ ರಚಿಸಿದೆ.

ನವದೆಹಲಿ(ಜೂ.03): ಹ್ಯಾಚ್‌ಬ್ಯಾಕ್ ಕಾರು ವಿಭಾಗದಲ್ಲಿ ಮಾರುತಿ ಬಲೆನೊ ಈಗಾಗಲೇ ಹಲವು ದಾಖಲೆ ಬರೆದಿದೆ. 2015ರಲ್ಲಿ ಬಿಡುಗಡೆಯಾದ ಈ ಕಾರು ಗ್ರಾಹಕರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ಕಾರು  ಖರೀದಿಸುವವರ ಮೊದಲ ಆಯ್ಕೆ ಇದೀಗ ಬಲೆನೋ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಬಿಡುಗಡೆಯಾಗಿ 44 ತಿಂಗಳಲ್ಲೇ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ.

ಇದನ್ನೂ ಓದಿ: ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!

44 ತಿಂಗಳಲ್ಲಿ 6 ಲಕ್ಷ ಕಾರುಗಳು ಮಾರಾಟವಾಗಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ 6 ಲಕ್ಷ ಕಾರು ಮಾರಾಟಗೊಳ್ಳೋ ಮೂಲಕ ದಾಖಲೆ ಬರೆದಿದೆ. ಭಾರತದಲ್ಲಿ ಹೆಚ್ಚಿನ ಜನರ ಪ್ರೀತಿಯ ಕಾರಾಗಿ ಬಲೆನೋ ಮಾರ್ಪಟ್ಟಿದೆ. ಈಗಾಗಲೇ ಬಲೆನೊ ಕಾರು BS-VI ಎಮಿಶನ್,  1.2 ಲೀಟರ್ ಡ್ಯುಯೆಲ್ ಜೆಟ್ VVT ಪೆಟ್ರೋಲ್ ಜೊತೆಗೆ ಹೈಬ್ರಿಡ್ ಟೆಕ್ನಾಲಜಿ ಎಂಜಿನ್ ಬಿಡುಗಡೆಯಾಗಿದೆ.

ಇದನ್ನೂ ಓದಿ: 2019ರ ಜೂನ್‌--ಜುಲೈನಲ್ಲಿ ಬಿಡುಗಡೆಯಾಗುತ್ತಿದೆ 4 ಕಾರು- ಇಲ್ಲಿದೆ ವಿವರ!

ಬಲೆನೋ ಕಾರಿನ ಬೆಲೆ ಕೊಂಚ ಏರಿಕೆಯಾಗಿದೆ. ಬಲೆನೊ ಝೆಟಾ ವೇರಿಯೆಂಟ್ ಹಳೇ ಬೆಲೆ 6.97  ಲಕ್ಷ ಬೆಲೆ. ಇದೀಗ 7.86 ಲಕ್ಷ ರೂಪಾಯಿ ಆಗಿದೆ.   ಡೆಲ್ಟಾ ವೇರಿಯೆಂಟ್ ಬೆಲೆ  7.25 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ