ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಹ್ಯುಂಡೈನ ಹೊಸ ಎಸ್‌ಯುವಿ ವೆನ್ಯೂ

Published : Jun 01, 2019, 08:40 PM IST
ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಹ್ಯುಂಡೈನ ಹೊಸ ಎಸ್‌ಯುವಿ ವೆನ್ಯೂ

ಸಾರಾಂಶ

ಭಾರತೀಯ ಯುವಜನತೆಯ ಆಸಕ್ತಿಗೆ ತಕ್ಕಂತೆ ‘ಹ್ಯುಂಡೈ ವೆನ್ಯೂ’ ಎಂಬ ಸಬ್‌ ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲು ಸಜ್ಜಾಗಿದೆ. ಏನಿದರ ವಿಶೇಷತೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

ನವದೆಹಲಿ: ‘ಹ್ಯುಂಡೈ ವೆನ್ಯೂ’ ಎಂಬ ಸಬ್‌ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಗೆ ಎಂಟ್ರಿ ಪಡೆಯುತ್ತಿದೆ. ಭಾರತೀಯ ಯುವಜನತೆಯ ಆಸಕ್ತಿಗೆ ತಕ್ಕಂತೆ ಈ ಕಾರ್‌ ಅನ್ನು ಡಿಸೈನ್‌ ಮಾಡಲಾಗಿದೆ. ಹುಂಡೈನ ಇತರ ಕಾರುಗಳಿಂದ ಹೆಚ್ಚಿನ ಫೀಚರ್‌ಗಳು ಇದರಲ್ಲಿವೆ. 

ಸ್ಮಾರ್ಟ್‌ ಟೆಕ್ನಾಲಜಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಬ್ಲೂ ಲಿಂಕ್‌ ಕನೆಕ್ಟಿವಿಟಿ ಹೊಂದಿರುವ ಕಾರು ಇದು. ಬ್ಲೂಲಿಂಕ್‌ ವ್ಯವಸ್ಥೆಯಲ್ಲಿ ಹತ್ತು ಫೀಚರ್‌ಗಳಿವೆ. ಕಾರಿಗೇನಾದರೂ ಸಮಸ್ಯೆಯಾದರೆ ತಕ್ಷಣವೇ ಅದು ಸಂಬಂಧಪಟ್ಟವರಿಗೆ ಸಂದೇಶ ಕಳಿಸುತ್ತದೆ. ಇಲ್ಲಿರುವ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಟೆಕ್ನಾಲಜಿಯಲ್ಲಿ ಇನ್‌ಬಿಲ್ಟ್‌ ಸಿಮ್‌ ಸಹ ಇದೆ. ಟರ್ಬೋ ಡಿಜಿಐ ಪೆಟ್ರೋಲ್‌ ಹಾಗೂ ಡೀಸೆಲ್‌ ಇಂಜಿನ್‌ನ ಕಾರ್‌ ಇದು. 

ಅತ್ಯುತ್ತಮ ಸಾಮರ್ಥ್ಯದ ಸ್ಟೀಲ್‌ನಿಂದ ಇದರ ಹೊರಮೈಯನ್ನು ವಿನ್ಯಾಸಗೊಳಿಸಲಾಗಿದೆ. ಸ್ಪೋರ್ಟಿ ಲುಕ್‌ನ ಈ ಕಾರ್‌, ಡೈಮಂಡ್‌ ಕಟ್‌ನ ಅಲಾಯ್‌ ವೀಲ್‌ಗಳನ್ನು ಹೊಂದಿದೆ. ಕ್ರಿಸ್ಟಲ್‌ ಎಫೆಕ್ಟ್ನ ಎಲ್‌ಇಡಿ ಲ್ಯಾಂಪ್‌ಗಳಿವೆ. ಡೆನಿಮ್‌ ಬ್ಲ್ಯೂ, ಲಾವಾ ಆರೆಂಜ್‌ ಹಾಗೂ ಡೀಪ್‌ ಫಾರೆಸ್ಟ್‌ ಬಣ್ಣಗಳಲ್ಲಿ ಲಭ್ಯ. ಪೆಟ್ರೋಲ್‌ ಇಂಜಿನ್‌ನಲ್ಲಿ 998 ಸಿಸಿ ಹಾಗೂ 128 ಬಿಎಚ್‌ಪಿ, 1,197 ಸಿಸಿ ಕಾರ್‌ಗಳಿವೆ. ಡೀಸೆಲ್‌ ಕಾರು 1,396ಸಿಸಿ ಸಾಮರ್ಥ್ಯದ್ದು.
 

PREV
click me!

Recommended Stories

ಡೀಸೆಲ್ ಕಾರಿಗೆ ಪೆಟ್ರೋಲ್ ಹಾಕಿದರೆ ತಕ್ಷಣ ಹೀಗೆ ಮಾಡಿ, ಲಕ್ಷಾಂತರ ರೂಪಾಯಿ ನಷ್ಟ ತಪ್ಪಿಸಬಹುದು..!
ಹೊಸ ಕಾರ್‌ಗಳಲ್ಲೀಗ ಸ್ಟೆಪ್ನಿ ಮಾಯ!