ಇತ್ತೀಚೆಷ್ಟೆ ಟೊಯೊಟಾ ಕೊರೊಲಾ ಕಾರಿಗೆ ಸೆಗಣಿ ಪೈಂಟ್ ಮಾಡಿ ದೇಶದಲ್ಲೇ ಸುದ್ದಿಯಾಗಿತ್ತು. ಇದೀಗ ಕಾರಿಗೆ ಸೆಗಣಿ ಪೈಂಟ್ ಟ್ರೆಂಡ್ ಆಗುತ್ತಿದ್ದೆ. ದುಬಾರಿ ಹಾಗೂ ಐಷಾರಾಮಿ ಕಾರು ಮಾಲೀಕರು ಇದೀಗ ಸೆಗಣಿ ಪೈಂಟ್ ಮೊರೆ ಹೋಗುತ್ತಿದ್ದಾರೆ
ಪುಣೆ(ಜೂ.03): ಭಾರತದಲ್ಲಿ ಕಾರಿಗೆ ಸೆಗಣಿ ಪೈಂಟ್ ಹೆಚ್ಚು ಟ್ರೆಂಡ್ ಆಗುತ್ತಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸೆಜಲ್ ಶಾ, ತಮ್ಮ ಟೊಯೊಟಾ ಕೊರೊಲಾ ಕಾರಿಗೆ ಸೆಗಣಿ ಪೈಂಟ್ ಮಾಡಿ ಸುದ್ದಿಯಾಗಿದ್ದರು. ಇದೀಗ ಡಾ.ನವನಾಥ್ ದುಧಾಲ್ ತಮ್ಮ ಮಹೀಂದ್ರ XUV500 ಕಾರಿಗೆ ಸೆಗಣಿ ಮೆತ್ತಿಸಿ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: ಹೊಸ ಐಡಿಯಾ-ಟೊಯೊಟಾ ಕಾರಿಗೆ ಸೆಗಣಿ ಪೈಂಟ್!
ಅಹಮ್ಮದಾಬಾದ್ ಮೂಲದ ನವನಾಥ್ ಸದ್ಯ ಮುಂಬೈನ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉರಿ ಬಿಸಿಲಿನಿಂದ ರಕ್ಷಣೆ ಪಡೆಯಲು ಮಹೀಂದ್ರ XUV500 ಕಾರಿಗೆ ಸೆಗಣಿ ಪೈಂಟ್ ಮಾಡಿಸಿದ್ದಾರೆ. 3 ಕೋಟಿಂಗ್ ಮೂಲಕ ಸೆಗಣಿ ಲೇಪನ ಮಾಡಿದ್ದಾರೆ. ಈ ಮೂಲಕ ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!
ಕ್ಯಾನ್ಸರ್ ಗುಣಪಡಿಸಲು ಗೋಮೂತ್ರ ಬಳಕೆ ಮಾಡುತ್ತಾರೆ. ಇನ್ನು ಮನೆಯನ್ನು ತಂಪಾಗಿಸಲು ಹಳೇ ಕಾಲದಲ್ಲಿ ಸೆಗಣಿ ಬಳಸುತ್ತಿದ್ದರು. ಮನೆ ನೆಲ ಹಾಗೂ ಒಳಭಾಗದ ಗೊಡೆಗಳಿಗೆ ಸೆಗಣಿ ಬಳಕೆ ಮಾಡುತ್ತಿದ್ದರು. ಇದರಿಂದ ಮನೆ ತಂಪಾಗುವುದಲ್ಲದೆ, ಸೋಂಕುಗಳಿಂದ ರಕ್ಷಣೆ ಸಿಗುತ್ತಿತ್ತು. ಇದೀಗ ಇದೇ ವಿಧಾನವನ್ನು ಕಾರಿನ ಮೇಲೆ ಬಳಕೆ ಮಾಡಿದ್ದೇವೆ ಎಂದು ನವನಾಥ್ ಹೇಳಿದ್ದಾರೆ.
ಪೈಂಟ್ ಕಂಪನಿಗಳು ಸೆಗಣಿ ಮೂಲಕ ಪೈಂಟ್ ತಯಾರಿಕೆ ಮಾಡಬೇಕು. ಇದು ಪರಿಸರಕ್ಕೂ ಪೂರಕ ಹಾಗೂ ಆರೋಗ್ಯಕ್ಕೂ ಉತ್ತಮ. ಈ ನಿಟ್ಟಿನಲ್ಲಿ ಭಾರತ ಚಿಂತಿಸಬೇಕು ಎಂದು ವೈದ್ಯ ನವಾಥ್ ಸಲಹೆ ನೀಡಿದ್ದಾರೆ.