ಕಾರ್ ಕಾರ್ ಕಾರ್... ಮಾಲೀಕನ ಕೈಚಳಕದಿಂದಾಗಿ ಎಲ್ಲರನ್ನು ಸೆಳೆಯುತ್ತಿದೆ ಕಾರು

Published : Jun 30, 2022, 12:22 PM ISTUpdated : Jun 30, 2022, 12:26 PM IST
ಕಾರ್ ಕಾರ್ ಕಾರ್... ಮಾಲೀಕನ ಕೈಚಳಕದಿಂದಾಗಿ ಎಲ್ಲರನ್ನು ಸೆಳೆಯುತ್ತಿದೆ ಕಾರು

ಸಾರಾಂಶ

ಪುಣೆಯ ಯುವಕನೋರ್ವ ಬೇಸಿಗೆಯ ಬಿಸಿ ತಾಪಮಾನದಿಂದ ರಕ್ಷಿಸಿಕೊಳ್ಳಲು ತನ್ನ ಕಾರಿನ ಹೊರಭಾಗವನ್ನು ಸಂಪೂರ್ಣವಾಗಿ ಹಸುವಿನ ಸೆಗಣಿಯಿಂದ ಮುಚ್ಚಿದ್ದಾನೆ. ಈ ಮೂಲಕ ಆತ ಈಗ ಸುದ್ದಿಯ ಕೇಂದ್ರ ಬಿಂದುವಾಗಿದ್ದಾನೆ.

ಪುಣೆ: ಹಸುವಿನ ಸಗಣಿ ಹಾಗೂ ಗೋಮೂತ್ರಕ್ಕೆ  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನವಿದೆ. ಶುಭ ಕಾರ್ಯಗಳಿಗೂ ಮುನ್ನ ಮೊದಲೆಲ್ಲಾ ಮನೆಯನ್ನು ಸಗಣಿಯಿಂದ ಸಾರಿಸುತ್ತಿದ್ದರು. ಆದರೆ ಈಗ ಕಾಂಕ್ರೀಟ್ ಮನೆಗಳಾಗಿದ್ದು, ಗೋಮೂತ್ರ ಅಥವಾ ಸಗಣಿಯ (cow dung) ನೀರನ್ನು ಕೇವಲ ಪ್ರೋಕ್ಷಣೆ ಮಾಡುತ್ತಾರೆ. ಸಗಣಿಯ ಅಗತ್ಯ ಹಾಗೂ ಮಹತ್ವ ವೈಜ್ಞಾನಿಕವಾಗಿ ಹಲವು ಭಾರಿ ಸಾಬೀತಾಗಿದೆ. ವಿಕಿರಣಗಳನ್ನು ತಡೆಯುವ ಶಕ್ತಿಯೂ ಸಗಣಿಗೆ ಇದೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. 

ಈ ಮಧ್ಯೆ ಪುಣೆಯ ಯುವಕನೋರ್ವ ಬೇಸಿಗೆಯ ಬಿಸಿ ತಾಪಮಾನದಿಂದ ರಕ್ಷಿಸಿಕೊಳ್ಳಲು ತನ್ನ ಕಾರಿನ ಹೊರಭಾಗವನ್ನು ಸಂಪೂರ್ಣವಾಗಿ ಹಸುವಿನ ಸೆಗಣಿಯಿಂದ ಮುಚ್ಚಿದ್ದಾನೆ. ಸಾಮಾನ್ಯವಾಗಿ ಬಿರು ಬೇಸಿಗೆಯಲ್ಲಿ ಬಿಸಿಲಿನ ಶಾಖಕ್ಕೆ ಸಿಲುಕಿ ವಾಹನಗಳು ಬೆಂಕಿಯಂತಾಗುತ್ತವೆ. ಬೇಸಿಗೆಯ ಶಾಖ ಅಷ್ಟೊಂದು ತೀವ್ರವಾಗಿದ್ದು, ಕೆಲವು ವಾಹನಗಳು ಬೆಂಕಿಗೂ ಆಹುತಿಯಾಗುತ್ತವೆ. ಅಲ್ಲದೇ ಒಳಗೆ ಕುಳಿತು ಪ್ರಯಾಣಿಸುವವರು ಸೆಖೆಯಿಂದ ಹೈರಾಣಾಗುತ್ತಾರೆ. ಈಗ ಏನೋ ಹಲವು ವಾಹನಗಳಲ್ಲಿ(vehicle) ಏಸಿ ಸೌಲಭ್ಯಗಳಿವೆ. ಆದಾಗ್ಯೂ ಪುಣೆಯ (Pune)  ಯುವಕನೊಬ್ಬನ ಈ ಕಾರ್ಯ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. 

ಸೆಗಣಿಯ ಬೆರಣಿ ಮಾಡಲು ಬನಾರಸ್ ವಿವಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ

ಪುಣೆಯ ಈ ವ್ಯಕ್ತಿ ತನ್ನ ಮಾರುತಿ ಸುಜುಕಿ ಓಮ್ನಿಯನ್ನು ಬಿಸಿಲ ಧಗೆಯಿಂದ ದೂರವಿರಿಸಲು ತನ್ನ ವಾಹನವನ್ನು ಹಸುವಿನ ಸಗಣಿಯಿಂದ ಮುಚ್ಚಲು ನಿರ್ಧರಿಸಿದ. ಕಾರಿನ ಬಂಪರ್‌ನಿಂದ ಮೇಲ್ಛಾಗದವರೆಗೂ, ಮುಂಭಾಗ, ಹಿಂಭಾಗ ಮತ್ತು ಎರಡೂ ಬದಿಗಳಲ್ಲಿಯೂ ಈತ ಸಂಪೂರ್ಣವಾಗಿ ದನದ ಸಗಣಿಯಿಂದ ಮುಚ್ಚಿದ್ದಾನೆ.ಭಾರತೀಯ ಹಳ್ಳಿಗಳಲ್ಲಿ ಸಾಂಪ್ರದಾಯಿಕವಾಗಿ ಚಾಲ್ತಿಯಲ್ಲಿರುವ ನಂಬಿಕೆಗಳಿಂದ ಸ್ಪೂರ್ತಿ ಪಡೆದು ಯುವಕ ಈ ರೀತಿ ಮಾಡಿದ್ದು, ಈಗ ಈತನ ಕಾರು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹಳ್ಳಿಗಳಲ್ಲಿ ಮಣ್ಣಿನ ಮನೆಯ ನೆಲ ಹಾಗೂ ಗೋಡೆಯನ್ನು ಸೆಗಣಿಯಿಂದ ಸಾರಿಸಲಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ತಂಪಾಗಿದ್ದರೆ, ಚಳಿಗಾಲದಲ್ಲಿ ಮನೆ ತಂಪಾಗಿರುತ್ತದೆ.  

Cow Dung ಅಂತ ಮೂಗು ಮುರೀಬೇಡಿ, ಹಸುವಿನ ಸೆಗಣಿಯಿಂದಲೇ ಕೋಟಿ ಕೋಟಿ ಸಂಪಾದಿಸ್ತಾರೆ !
 

ಆದರೆ ಈ ಕಾರ್ಯತಂತ್ರವು ಕಾರುಗಳಿಗೆ ಕೆಲಸ ಮಾಡುತ್ತದೆಯೇ ಎಂಬುದು ಇನ್ನೂ ಚರ್ಚೆಯ ವಿಷಯವಾಗಿದೆ. ಏಕೆಂದರೆ ಸೆಗಣಿ ಹಚ್ಚುವುದರಿಂದ ಕಾರು ತಂಪಾಗಿರುತ್ತದೆ ಎಂಬುದಕ್ಕೆ ಯಾವುದೇ ಸಂಶೋಧನೆಗಳು ಪುರಾವೆ ಒದಗಿಸಿಲ್ಲ. ಕಾರಿನ ಹೊರಭಾಗವನ್ನು ರೂಪಿಸುವ ಲೋಹದ ಭಾಗಗಳು ಪ್ರಕೃತಿಯಲ್ಲಿ ಸಂಪೂರ್ಣವಾಗಿ ಕರಗುವಂತಹವುಗಳಲ್ಲ. ಹೀಗಾಗಿ ಈ ವಿಧಾನ ಯಾವ ರೀತಿ ಕೆಲಸ ಮಾಡುತ್ತದೆ ಎಂಬ ಬಗ್ಗೆ ಅನುಮಾನವಿದೆ. ಹಲವು ಸಂದೇಹಗಳ ಹೊರತಾಗಿಯೂ ಈ ವಿಧಾನವನ್ನು ಅನೇಕರು ಮೆಚ್ಚಿದ್ದಾರೆ. ಏಕೆಂದರೆ ಹೀಗೆ ವಾಹನಕ್ಕೆ ಸಗಣಿ ಹಚ್ಚಿದು ಇದೇ ಮೊದಲಲ್ಲ. ಈ ಹಿಂದೆ ಅಹಮದಾಬಾದ್‌ನ ಮಹಿಳೆಯೊಬ್ಬರು ತಮ್ಮ ಟೊಯೊಟಾ ಕೊರೊಲ್ಲಾ ವಾಹನವನ್ನು ಹಸುವಿನ ಸಗಣಿಯಿಂದ ಮುಚ್ಚಿದ ನಂತರ ಸಾಕಷ್ಟು ಸಂಚಲನ ಮೂಡಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಸೆಗಣಿಯ ಬಗ್ಗೆ ಜನರ ಮನದಲ್ಲಿ  ನಕಾರಾತ್ಮಕ ಮನೋಭಾವವನ್ನು ಹುಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ. ಹಸುವಿನ ಸೆಗಣಿಯಲ್ಲಿ ಹಾನಿಕಾರಕ ಕೆಮಿಕಲ್ (Chemical) ಅಂಶವಿದೆ ಎಂಬು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಮುಂಬೈ ಮೂಲದ ವಾಣಿಜ್ಯೋದ್ಯಮಿ ಉಮೇಶ್ ಸೋನಿ ಎಂಬವರು ಹಸುವಿನ ಸೆಗಣಿಯನ್ನು ಬಳಸಿ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದ್ದು, ವರ್ಷಕ್ಕೆ ಕೋಟಿಗಟ್ಟಲೆ ವ್ಯವಹಾರ (Business) ನಡೆಸುತ್ತಿದ್ದಾರೆ.

ವೈದ್ಯರಾಗುವ  ಕನಸನ್ನು ಹೊಂದಿದ್ದ ಉಮೇಶ್ ಸೋನಿ ಆಸ್ಪತ್ರೆಯ ಕೆಲಸದಿಂದ ತಿರಸ್ಕರಿಸಲ್ಪಟ್ಟರೂ ಎದೆಗುಂದಲಿಲ್ಲ ಸಂಪೂರ್ಣವಾಗಿ ಸಾವಯವ ಮೂಲವಾದ ಹಸುವಿನ ಸಗಣಿಯಿಂದ ಸೌಂದರ್ಯವರ್ಧಕ (Beauty Products)ಗಳನ್ನು ತಯಾರಿಸಲು ನಿರ್ಧರಿಸಿದರು. ಪ್ರಸ್ತುತ ಉಮೇಶ್ ಸೋನಿ, ಮುಂಬೈ ಮೂಲದ ವಾಣಿಜ್ಯೋದ್ಯಮಿ ಕೌಪತಿಯ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಇದು ಹಸುವಿನ ಸಗಣಿಯಿಂದ ಸಾಬೂನು (Soap) ಮತ್ತು ಇತರ ಸೌಂದರ್ಯವರ್ಧಕಗಳನ್ನು ತಯಾರಿಸುವ ದೇಶದ ಮೊದಲ ಕಂಪನಿಗಳಲ್ಲಿ ಒಂದಾಗಿದೆ.

 

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ