50 ಸಾವಿರ ಇವಿ ತ್ರಿಚಕ್ರ ವಾಹನಗಳ ಮಾರಾಟದ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ

By Supreetha Hebbar  |  First Published Jun 29, 2022, 6:04 PM IST

ಮಹೀಂದ್ರಾ ಮತ್ತು ಮಹೀಂದ್ರಾದ ಪ್ರಮುಖ ಸಂಸ್ಥೆಯಾದ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯು (Mahindra electric mobility) ಇಲ್ಲಿಯವರೆಗೆ 50,000 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.


ಭಾರತೀಯ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric vehicles) ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ. ಹೊಸ ಸ್ಟಾರ್ಟ್ಅಪ್ಗಳ ಜೊತೆಗೆ ಪ್ರಮುಖ ಆಟೋಮೊಬೈಲ್ ಕಂಪನಿಗಳು ಇವಿ (EV) ವಿಭಾಗಕ್ಕೆ ಪ್ರವೇಶಿಸುತ್ತಿವೆ. ಈ ಎಲ್ಲಾ ಬೃಹತ್ ಹೂಡಿಕೆಗಳು, ಇವಿ (EV) ಪರವಾಗಿ ಸರ್ಕಾರ ಜಾರಿಗೊಳಿಸುತ್ತಿರುವ ನೀತಿಗಳು ಮತ್ತು ದೇಶದಲ್ಲಿ EV ಗಳಿಗೆ ಹೆಚ್ಚುತ್ತಿರುವ ಸಾರ್ವಜನಿಕ ಬೇಡಿಕೆಯೊಂದಿಗೆ, ಮಾರುಕಟ್ಟೆಯಲ್ಲಿ EV ಕ್ರಾಂತಿಯು ಪ್ರಾರಂಭವಾಗಿದೆ. ಇದರಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ವಲಯ ಹೆಚ್ಚು ಸದ್ದು ಮಾಡುತ್ತಿದೆ.

ಮಹೀಂದ್ರಾ ಮತ್ತು ಮಹೀಂದ್ರಾದ ಪ್ರಮುಖ ಸಂಸ್ಥೆಯಾದ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯು (Mahindra electric mobility) ಇಲ್ಲಿಯವರೆಗೆ 50,000 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯ ಸಿಇಒ ಸುಮನ್ ಮಿಶ್ರಾ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಸುದ್ದಿ ನೀಡಿದ್ದಾರೆ. ಇದು ಸುಸ್ಥಿರ ಚಲನಶೀಲತೆಯ ಮಾರ್ಗದಲ್ಲಿ ಹೊಸ ಮೈಲಿಗಲ್ಲು ಎಂದಿದ್ದಾರೆ.

Tap to resize

Latest Videos

“ಇದುವರೆಗೆ 50000 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು. ನಮ್ಮ ಪ್ರವರ್ತಕ ಗ್ರಾಹಕರಿಗೆ ದೈತ್ಯ ಧನ್ಯವಾದಗಳು! ಸುಸ್ಥಿರ ಕೊನೆಯ ಮೈಲಿ ಚಲನಶೀಲತೆಯ ಕಡೆಗೆ ಪ್ರಯಾಣದಲ್ಲಿ ರೋಮಾಂಚಕ ಮೈಲಿಗಲ್ಲು”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಸಂತಸವನ್ನು ಹಂಚಿಕೊಂಡಿರುವ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ, “ನಿನ್ನೆ ಎಲ್ಲಾ ಗಮನವು #ScorpioN ಮೇಲೆ ಇತ್ತು. ಆದರೆ, ನಾವು ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸದ್ದಿಲ್ಲದೆ ತಲುಪಿದ್ದೇವೆ, ಇದು ದೀರ್ಘಾವಧಿಯಲ್ಲಿ, ಭಾರತದಲ್ಲಿ ಚಲನಶೀಲತೆಯನ್ನು ಪರಿವರ್ತಿಸುತ್ತದೆ. ತ್ರಿಚಕ್ರ ವಾಹನಗಳು ವಿದ್ಯುತ್ ಸಾರಿಗೆಯ ಪ್ರಮುಖ ಭಾಗವಾಗಿವೆ” ಎಂದು ಟ್ವೀಟ್ ಮಾಡಿದ್ದಾರೆ.

ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿಯ ಮೂಲ ಕಂಪನಿ, ರೇವಾ ಎಲೆಕ್ಟ್ರಿಕ್ ಕಾರ್ ಕಂಪನಿಯನ್ನು (RECC) ಚೇತನ್ ಮಿನಿ ಅವರು,  1994 ರಲ್ಲಿ ಅಮೆರಿಕದ ಮೂಲದ ಸಂಸ್ಥೆಯೊಂದಿಗೆ ಜಂಟಿ ಉದ್ಯಮವಾಗಿ ಸ್ಥಾಪಿಸಿದರು. 2010ರ ಮೇ26ರಂದು ಆರ್ಇಸಿಸಿಯ ಶೇ.55.2ರಷ್ಟು ಪಾಳನ್ನು ಭಾರತದ ಅತಿದೊಡ್ಡ SUV ಮತ್ತು ಟ್ರ್ಯಾಕ್ಟರ್ ತಯಾರಕ ಬ್ರಾಂಡ್, ಮಹೀಂದ್ರ & ಮಹೀಂದ್ರ ಖರೀದಿಸಿತು. ಈ ಒಪ್ಪಂದದ ಪ್ರಕಾರ, ಕಂಪನಿಯನ್ನು ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. 2016 ರಲ್ಲಿ, ಕಂಪನಿಯನ್ನು ಮತ್ತೆ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ LTD ಎಂದು ಮರುನಾಮಕರಣ ಮಾಡಲಾಯಿತು.

ಇದನ್ನೂ ಓದಿ: Kia Electric car ಕಿಯಾ EV6 ಎಲೆಕ್ಟ್ರಿಕ್ ಕಾರು ಭಾರತಕ್ಕೆ ಎಂಟ್ರಿ, ಮೇ.26ರಿಂದ ಬುಕಿಂಗ್ ಆರಂಭ!

2018ರ ನವೆಂಬರ್ನಲ್ಲಿ ಕಂಪನಿಯು ಭಾರತದ ಮೊದಲ ಮೂರು-ಚಕ್ರದ ರಿಕ್ಷಾವನ್ನು ಪ್ರಾರಂಭಿಸಿತು, ಇದನ್ನು ಸಂಪೂರ್ಣವಾಗಿ ಸ್ಥಳೀಯವಾಗಿ ನಿರ್ಮಿಸಲಾಗಿದೆ. ಸುಮಾರು 4 ವರ್ಷಗಳ ನಂತರ, ಕಂಪನಿಯು 50,000 ಬಳಕೆದಾರರನ್ನು ತಲುಪಿದೆ.

2022ನೇ ಸಾಲಿನಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 101ರಷ್ಟು ಬೆಳೆದಿದೆ ಮತ್ತು 1,77,874 ಇ-ತ್ರಿಚಕ್ರ ವಾಹನಗಳು ಮಾರಾಟವಾಗಿವೆ.
ಮಹೀಂದ್ರಾ ಎಲೆಕ್ಟ್ರಿಕ್ ಮೂರು-ಚಕ್ರ ವಾಹನಗಳು ತಮ್ಮ ದೃಢವಾದ ಮತ್ತು ಹಗುರ ವಾಹನಗಳಿಗೆ ಜನಪ್ರಿಯವಾಗಿದ್ದು, ಇದು 130 ಕಿಮೀ ಸಂಚಾರದ ಶ್ರೇಣಿ ಹಾಗೂ 5 ವರ್ಷಗಳವರೆಗೆ ಬಾಳಿಕೆ ಬರುವ ಬ್ಯಾಟರಿಯೊಂದಿಗೆ ಬರುತ್ತವೆ. ಪ್ರಸ್ತುತ, ಮಹೀಂದ್ರಾ ಭಾರತದಲ್ಲಿ ನಾಲ್ಕು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಹೊಂದಿದೆ- ಟ್ರಿಯೊ, ಟ್ರಿಯೊ ಯಾರಿ, ಟ್ರಿಯೊ ಝೋರ್, ಇ ಆಲ್ಫಾ ಕಾರ್ಗೋ ಮತ್ತು ಇಆಲ್ಫಾ ಮಿನಿ.

ಇದನ್ನೂ ಓದಿ: ಟೊಯೊಟಾ ಫಾರ್ಚೂನರ್ ಕಾರು ಡ್ರೈವ್‌ ಮಾಡಿದ 8 ವರ್ಷದ ಬಾಲಕ

ನಿನ್ನೆಯಷ್ಟೇ ಮಹೀಂದ್ರಾ, ಬಿಗ್ ಡ್ಯಾಡಿ ಆಫ್ ಎಸ್ಯುವಿ ಎಂದೇ ಗುರುತಿಸಿಕೊಂಡಿರುವ ಮಹೀಂದ್ರಾ ಸ್ಕಾರ್ಪಿಯೋ-ಎನ್ ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 11.99 ಲಕ್ಷ ರೂ.ಗಳಿಂದ ಆರಂಭವಾಗುತ್ತವೆ. 

click me!