ಟಿಕ್‌‍ಟಾಕ್ ವಿಡಿಯೋಗಾಗಿ ಜೀಪ್‌ಗೆ ಬೆಂಕಿ ಹಾಕಿದ ಭೂಪ!

By Web Desk  |  First Published Sep 5, 2019, 9:58 PM IST

ಟಿಕ್‌ಟಾಕ್ ವಿಡಿಯೋ ಹುಚ್ಚು ಹಿಡಿದರೆ ಪ್ರಾಣವೂ ಲೆಕ್ಕಕ್ಕಿಲ್ಲ ಅನ್ನೋದು ಈಗಾಗಲೇ ಸಾಬೀತಾಗಿದೆ. ಇದೀಗ ಟಿಕ್‌ಟಾಕ್ ವಿಡಿಯೋಗಾಗಿ ತನ್ನ ಜೀಪ್‌ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.


ರಾಜ್‌ಕೋಟ್(ಸೆ.05): ಟಿಕ್‌ಟಾಕ್ ವಿಡಿಯೋ ಮಾಡಲು ಹೋಗಿ, ಕೈ, ಕಾಲು, ಸೊಂಟ ಮುರಿದ ಘಟನೆ ಮಾತ್ರವಲ್ಲ, ಪ್ರಾಣ  ಕಳೆದುಕೊಂಡವರ ಕತೆ ಕೇಳಿದ್ದೇವೆ. ಅಷ್ಟರ ಮಟ್ಟಿಗೆ ಟಿಕ್‌ಟಾಕ್ ಜನರನ್ನು ಆವರಿಸಿಬಿಟ್ಟಿದೆ. ಟಿಕ್‌ಟಾಕ್ ಇಲ್ಲದೆ ಜೀವನವೇ ಇಲ್ಲ ಅನ್ನೋ ಭಾವನೆ ಬಂದಿದೆ.  ಇದೀಗ ಇದೇ ಟಿಕ್‌ಟಾಕ್ ವಿಡಿಯೋ ಮಾಡಲು ತನ್ನ ಜೀಪ್‌ಗೆ ಬೆಂಕಿ ಹಚ್ಚಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. 

ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಶಾಕ್; ಪೊಲೀಸರು ನಿಯಮ ಉಲ್ಲಂಘಿಸಿದ್ರೆ ಡಬಲ್ ಫೈನ್!

Tap to resize

Latest Videos

undefined

ರಾಜ್‌ಕೋಟ್‌ನ ಕೊಥಾರಿಯಾ ರಸ್ತೆಯಲ್ಲಿ ಟಿಕ್‌ಟಾಕ್ ವಿಡಿಯೋಗಾಗಿ ಒರ್ವ, ತನ್ಮ ಮಾಡಿಫಿಕೇಶನ್ ಜೀಪ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನಡು ರಸ್ತೆಯಲ್ಲೇ ಜೀಪ್ ಹೊತ್ತಿ ಉರಿದಿದೆ. ಅಗ್ನಿಶಾಮಕ ಠಾಣೆ ಸಮೀಪದಲ್ಲೇ ಈತ ತನ್ನ ಜೀಪ್‌ಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಬೆಂಕಿ ನಡುವಿನಿಂದ ಹೀರೋ ಎದ್ದು ಬರುವ ರೀತಿ ಟಿಕ್‌ಟಾಕ್ ವಿಡಿಯೋ ಮಾಡಿದ್ದಾನೆ. ಈ ರಸ್ತೆಯಲ್ಲಿ ಸಂಚರಿಸುವವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಜಾರಿಯಾಯ್ತು ಹೊಸ ರೂಲ್ಸ್; ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ!

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬೆಂಕಿ ಹಚ್ಚಿದಾತನನ್ನು ಬಂಧಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಜೀಪ್ ಸಂಪೂರ್ಣ ಹೊತ್ತಿ ಉರಿದಿದೆ. ಸಾರ್ವಜನಿಕ ರಸ್ತೆಯಲ್ಲಿ ಬೆಂಕಿ ಹಚ್ಚಿದ ನಿಯಮ ಉಲ್ಲಂಘನೆ ಮಾಡಿದ್ದಾನೆ. ಟಿಕ್‌ಟಾಕ್ ವಿಡಿಯೋ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಟಿಕ್‌ಟಾಕ್‌ನಿಂದ ಯುವಕರನ್ನು ಉಳಿಸಲು ಪೊಲೀಸರು ಹೊಸ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸುತ್ತಿದ್ದಾರೆ. 


 

click me!