ಒಕಿನಾವ ಪ್ರೈಸ್ ಪ್ರೋ ಸ್ಕೂಟರ್; ಮನೆಯಲ್ಲೇ ಚಾರ್ಜ್ ಮಾಡಿ 110 ಕಿ.ಮೀ ಪ್ರಯಾಣಿಸಿ!

By Web Desk  |  First Published Sep 5, 2019, 6:41 PM IST

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಪ್ರೈಸ್ ಪ್ರೂ ಸ್ಕೂಟರ್ ಬಿಡುಗಡೆ ಮಾಡಿದೆ. ಸ್ಕೂಟರ್‌ನಿಂದ ಬ್ಯಾಟರಿ ಬೇರ್ಪಡಿಸುವ ಸೌಲಭ್ಯ,ಒಂದು ಸಲ ಚಾರ್ಜ್ ಮಾಡಿದರೆ 90-110 ಕಿಲೋಮೀಟರ್ ಮೈಲೇಜ್, ಆಕರ್ಷಕ ವಿನ್ಯಾಸ ಹಾಗೂ ಬಣ್ಣ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಒಕಿನಾವ ಪ್ರೈಸ್ ಪ್ರೋ ಸ್ಕೂಟರ್ ಬೆಲೆ ಹಾಗೂ ಹೆಚ್ಚಿನ ವಿವರ ಇಲ್ಲಿದೆ.


ಬೆಂಗಳೂರು(ಸೆ.05): ಭಾರತದಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಒಕಿನವಾ ಹೊಚ್ಚ ಹೊಸ 'ಒಕಿನವಾ ಪ್ರೈಸ್‍ಪ್ರೊ' ಇ-ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಮನೆಯಲ್ಲೇ ಚಾರ್ಜ್ ಮಾಡಬಹುದಾದ ಸುಲಭ ಚಾರ್ಜಿಂಗ್, ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 110 ಕಿ.ಮೀ ಮೈಲೇಜ್ ರೇಂಜ್ ನೀಡುವ ಒಕಿನಾವ ಪ್ರೈಸ್ ಪ್ರೊ ಇ ಸ್ಕೂಟರ್ ಬೆಲೆ 71,990 ರೂಪಾಯಿ(ಎಕ್ಸ್ ಶೋ ರೂಂ).

Latest Videos

undefined

ಇದನ್ನೂ ಓದಿ: ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ 3 ಗಂಟೆ ಚಾರ್ಜ್ ಮಾಡಿದರೆ ಸಂಪೂರ್ಣ ಚಾರ್ಜ್ ಆಗಲಿದೆ.  2.0 ಕೆಡಬ್ಲ್ಯೂಎಚ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು . ಇದರ ಅತಿಹೆಚ್ಚು ಸಾಮಥ್ರ್ಯ ಎಂದರೆ 2500 ವ್ಯಾಟ್. ಕೇವಲ 2-3 ಗಂಟೆಯಲ್ಲಿ ಚಾರ್ಜ್ ಮಾಡುಬಹುದಾದಂತ ಪ್ರೈಸ್‍ಪ್ರೊ ಒಂದು ಸಲ ಚಾರ್ಜ್ ಮಾಡಿದರೆ ಇಕೋ ಮೋಡ್‍ನಲ್ಲಿ 110 ಕಿಲೋಮೀಟರ್ ಮತ್ತು ಸ್ಟೋರ್ಟ್ಸ್ ಮೋಡ್‍ನಲ್ಲಿ 90 ಕಿಲೋಮೀಟರ್ ಮೈಲೆಜ್ ನೀಡುತ್ತದೆ. 

ಇದನ್ನೂ ಓದಿ: GST ಇಳಿಕೆ; ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕಡಿತ!

ಡಿಜಿಟಲ್ ಸ್ಪಿಡೋಮೀಟರ್ 3 ಮೋಡ್‍ಗಳನ್ನು ಹೊಂದಿದೆ. ಎಕಾನಮಿ ಮೋಡ್ 30-35 ಪ್ರತಿ ಗಂಟೆಗೆ ಚಲಿಸುತ್ತದೆ. ಸ್ಪೋಟ್ರ್ಸ್ ಮೋಡ್‍ನಲ್ಲಿ 50-60 ಕಿಲೋಮೀಟರ್ ಪ್ರತಿ ಗಂಟೆ ಮತ್ತು ಟರ್ಬೊ ಮೋಡ್‍ನಲ್ಲಿ 65-70 ಪ್ರತಿ ಗಂಟೆಗೆ ಚಲಿಸುತ್ತದೆ. ಸೀಟಿನ ಕೆಳಗೆ 150 ಕೆಜಿಯಷ್ಟು ಭಾರ ಇಡಬಹುದು. 

ಇದನ್ನೂ ಓದಿ: ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ- 5 ಸಾವಿರ ರೂ.ಗೆ ಬುಕ್ ಮಾಡಿ!

ಒಕಿನಾವ ಪ್ರೈಸ್ ಪ್ರೂ ವಿಶೇಷತೆ: 
ಸೆಂಟ್ರಲ್ ಲಾಕಿಂಗ್ ಮತ್ತು ಆಂಟಿ-ಥೆಫ್ಟ್ ಅಲರಾಂ ಹೊಂದಿದೆ
ಕೀಲೆಸ್ ಎಂಟ್ರಿ
ಸ್ಕೂಟರ್ ಹುಡುಕು ಆಯ್ಕೆ
ಮೊಬೈಲ್ ಚಾರ್ಜ್ ಮಾಡಲು ಯುಎಸ್‍ಬಿ ಪೊರ್ಟ್
ರೋಡ್ ಸೈಡ್ ಅಸಿಸ್ಟೆಂಟ್ ಸೌಲಭ್ಯ

ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನ ಮತ್ತು ಪರಿಹಾರವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಗ್ರಾಹಕರ ಬೇಡಿಕೆ ತಕ್ಕಂತೆ ನಾವು ಪೆಟ್ರೋಲ್ ಸ್ಕೂಟರ್‍ಗೆ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಇ-ಸ್ಕೂಟರ್ ಬಿಡುಗಡೆ ಮಾಡಿದ್ದೇವೆ. ಎಲ್ಲಾ ವಿಧದಲ್ಲೂ ಕೈಗೆಟುಕುವ ಬೆಲೆಯಲ್ಲಿ ಇರುವ ಪ್ರೈಸ್‍ಪ್ರೊ ಇ-ಸ್ಕೂಟರ್ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲಿದೆ" ಎಂದು ಒಕಿನವಾ ಆಟೋಟೆಕ್ ಪ್ರೈ ಲಿ ಸಂಸ್ಥೆಯ ಸಂಸ್ಥಾಪಕ ಹಾಗು ವ್ಯವಸ್ಥಾಪಕ ನಿರ್ದೇಶಕ ಜೀತೆಂದರ್ ಶರ್ಮಾ ಹೇಳಿದರು.

click me!