ಸೌತ್ ಆಫ್ರಿಕಾದಲ್ಲಿ ಭಾರತದ ಕಾರಿಗೆ ಭಾರೀ ಬೇಡಿಕೆ!

Published : May 05, 2019, 04:33 PM ISTUpdated : May 05, 2019, 04:35 PM IST
ಸೌತ್ ಆಫ್ರಿಕಾದಲ್ಲಿ ಭಾರತದ ಕಾರಿಗೆ ಭಾರೀ ಬೇಡಿಕೆ!

ಸಾರಾಂಶ

ಸೌತ್ ಆಫ್ರಿಕಾದಲ್ಲಿ ಭಾರತದ ಕಾರು ಬಿಡುಗಡೆಯಾಗುತ್ತಿದೆ. ಇನ್ಮುಂದೆ ಆಫ್ರಿಕಾ ನಾಡಲ್ಲಿ ಭಾರತದ ಕಾರುಗಳ ಓಡಾಟ ಹೆಚ್ಚಾಗಲಿದೆ. ಸದ್ಯ ವಿದೇಶದಲ್ಲಿ ಬಿಡುಗಡೆಯಾಗಲಿರುವ ಕಾರು ಯಾವುದು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

ಕೇಪ್‌ಟೌನ್(ಮೇ.05): ಸೌತ್ ಆಫ್ರಿಕಾದಲ್ಲಿ ಭಾರತದ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಬೇಡಿಕೆಗೆ ಅನುಗುಣವಾಗಿ ಭಾರತದ ಕಾರು ಕಂಪನಿಗಳು ದಕ್ಷಿಣ ಆಫ್ರಿಕಾದಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಮಹೀಂದ್ರ XUV300 ಕಾರು ಇದೀಗ ಸೌತ್ ಆಫ್ರಿಕಾದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ದಾಖಲೆ ಬರೆದ ನೂತನ ಹ್ಯುಂಡೈ ವೆನ್ಯೂ ಕಾರು!

ಸೌತ್ಆಫ್ರಿಕಾದ ಶೋ ರೂಂಗಳಲ್ಲಿ ಇದೀಗ ಮಹೀಂದ್ರ  XUV300 ಕಾರು ಅನಾವರಣ ಮಾಡಲಾಗಿದೆ. ಅಫ್ರಿಕಾ ನಾಡಲ್ಲಿ ಇನ್ಮುಂದೆ ಮಹೀಂದ್ರ ಕಾರುಗಳ ಆರ್ಭಟ ಜೋರಾಗಲಿದೆ. ಭಾರತದಲ್ಲಿ ಮಹೀಂದ್ರ  XUV300 ಕಾರಿನ ಬೆಲೆ 7.90 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಟಾಪ್ ವೇರಿಯೆಂಟ್ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಮಹೀಂದ್ರ  XUV300 ಕಾರು ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಕಾರು ಗರಿಷ್ಠ 17 ಕಿ.ಮೀ ಪ್ರತಿ ಲೀಟರ್‌ಗೆ ನೀಡಿದರೆ, ಡೀಸೆಲ್ ವೇರಿಯೆಂಟ್ ಗರಿಷ್ಠ 20 ಕಿ.ಮೀ ಪ್ರತಿ ಲೀಟರ್‌ಗೆ ನೀಡಲಿದೆ. 

ಸ್ಪೆಸಿಫಿಕೇಶನ್1.5 ಲೀಟರ್ ಡಿಸೆಲ್ 1.2 ಲೀಟರ್ ಪೆಟ್ರೋಲ್
ಎಂಜಿನ್1492 cc1198 cc
ಗರಿಷ್ಠ ಪವರ್115 bhp @ 3750 rpm110 bhp @ 5000 rpm
ಗರಿಷ್ಠ ಟಾರ್ಕ್300 Nm @ 1500 - 2500 rpm200 Nm @ 2000 - 3500 rpm
ಗೇರ್ ಬಾಕ್ಸ್6-speed manual6-speed manual

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ