ಕಾರಿನ ಮೇಲೆ ಸ್ಟಿಕ್ಕರ್- ಮಾಲೀಕನ ಮೇಲೆ ಕೇಸ್, ಕಾರು ಸೀಝ್!

By Web DeskFirst Published May 4, 2019, 6:24 PM IST
Highlights

ಕಾರಿನ ಮೇಲೆ ಸ್ಟಿಕ್ಕರ್ ಹಾಕಿದ ಕಾರಣ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಹಾಗೂ ಕಾರು ಮಾಲೀಕನ ಮೇಲೆ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಇದೀಗ ಕೇಂದ್ರ ತನಿಖಾ ದಳದ ವಿಚಾರಣೆಗೆ ಒಳಪಡಬೇಕಿದೆ. ಅಷ್ಟಕ್ಕೂ ಕಾರಿನಲ್ಲಿದ್ದ ಆ ಸ್ಟಿಕ್ಕರ್ ಯಾವುದು? ಇಲ್ಲಿದೆ ವಿವರ.

ಕೊಲ್ಲಂ(ಮೇ.04):  ಕಾರಿನ ಮೇಲೆ ಸ್ಟಿಕ್ಕರ್ ಹಾಕೋದು, ಹೆಸರು ಬರೆಸಿಕೊಳ್ಳೋದು ವಿಶ್ವದ ಎಲ್ಲಾ ಕಡೆ ಸಾಮಾನ್ಯ. ಆದರೆ ಭಾರತದಲ್ಲಿ ಈ ಕ್ರೇಝ್ ಸ್ವಲ್ಪ ಹೆಚ್ಚು. ಇದೀಗ ಕಾರಿನ ಮೇಲೆ ಸ್ಟಿಕ್ಕರ್ ಹಾಕಿಕೊಂಡ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ: ಒಂದೇ ದಿನದಲ್ಲಿ ದಾಖಲೆ ಬರೆದ ನೂತನ ಹ್ಯುಂಡೈ ವೆನ್ಯೂ ಕಾರು!

ಕೇಸ್ ಬೀಳುವಂತಾ ಸ್ಟಿಕ್ಕರ್ ಏನು  ಅಂತೀರಾ? ಈ ಘಟನೆ ನಡೆದಿರೋದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ.  ಇಲ್ಲಿ ಓಡಾಡುತ್ತಿದ್ದ ಹೊಂಡಾ ಎಕಾರ್ಡ್ ಕಾರಿನ ಹಿಂಭಾಗದಲ್ಲಿ ಉಗ್ರ ಒಸಾಮಾ ಬಿನ್ ಲಾಡೆನ್ ಸ್ಟಿಕ್ಕರ್ ಹಾಕಲಾಗಿದೆ. ಇದನ್ನು ಗಮಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಸೀಝ್ ಮಾಡಿ ಕಾರಿನಲ್ಲಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

ಪ್ರಕರಣ ಇಷ್ಟಕ್ಕೆ ಮುಗಿಲ್ಲ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಮದುವೆಗೆಂದು ತೆರಳುತಿದ್ದ ವೇಳೆ ಪೊಲೀಸರು ಕಾರನ್ನು ಸೀಝ್ ಮಾಡಿದ್ದಾರೆ. ಕಾರಿನಲ್ಲಿದ್ದ ಮೂವರನ್ನು ವಿಚಾರಣೆಗೆ ನಡೆಸಿದಾಗ ಮನೆ ಹತ್ತಿರದ ವ್ಯಕ್ತಿಯಿಂದ ಕಾರನ್ನು ಮದುವೆಗಾಗಿ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಕಾರು ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡು ಠಾಣೆಗೆ ಕರೆಸಿದ್ದಾರೆ.

ಇದನ್ನೂ ಓದಿ: ಗುಡ್ ಬೈ ಹೇಳಿದ ಮಹೀಂದ್ರ e2o ಎಲೆಕ್ಟ್ರಿಕ್ ಕಾರು !

ವಿಚಾರಣೆ ವೇಳೆ ಮಾಲೀಕ ತಕ್ಕ ಉತ್ತರ ನೀಡಿಲ್ಲ. ಕಾರು ವೆಸ್ಟ್ ಬೆಂಗಾಲ್ ರಿಜಿಸ್ಟ್ರೇಶನ್ ಕಾರಾಗಿದೆ. ಕೆಲ ತಿಂಗಳ ಹಿಂದಷ್ಟೇ ಬಂಗಾಳದಿಂದ ಕೇರಳಾಗೆ ಕಾರು ತರಲಾಗಿದೆ. ಆದರೆ ಸ್ಟಿಕ್ಕರ್ ಕುರಿತು ಸಮರ್ಪಕ ಉತ್ತರ ನೀಡಿಲ್ಲ. ಸದ್ಯ ಜಾಮೀನು ಮೂಲಕ ಮಾಲೀಕ ಹೊರಬಂದಿದ್ದಾನೆ. ಆದರೆ ಕೇಂದ್ರ ತನಿಖಾದಳ ವಿಚಾರಣೆಗೆ ಒಳಪಡಬೇಕಿದೆ. ಕಾರಣ, ಈಗಾಗಲೇ ಶ್ರೀಲಂಕಾ ಸ್ಫೋಟದ ಬಳಿಕ ಕೇರಳಾದಲ್ಲಿ ಉಗ್ರನೊಬ್ಬನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಉಗ್ರನ ಸ್ಟಿಕ್ಕರ್ ಇರೋ ಕಾರು ಓಡಾಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಕೇಂದ್ರ ತನಿಖಾ ದಳ ಇದೀಗ ಕೇರಳಾಗೆ ತೆರಳಿ, ಕಾರು ಮಾಲೀಕನ್ನು ವಿಚಾರಣೆ ನಡೆಸಲಿದೆ. ಇಷ್ಟೇ ಅಲ್ಲ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕೂಡ ತನಿಖೆಗೆ ಹಾಜರಾಗಬೇಕಿದೆ.

click me!