ಶಾಲಾ ವಾಹನದಲ್ಲಿ ಮಕ್ಕಳ ತುಂಬಿ ಶಾಲೆಗೆ ಬಿಡುವ ಪದ್ದತಿ ಇನ್ನು ಸುಲಭವಲ್ಲ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಡ್ರೈವಿಂಗ್ ಲೈಸೆನ್ಸ್ ಮಾತ್ರವಲ್ಲ, ವಿಶೇಷ ಪರವಾನಗಿ ಕೂಡ ಅಗತ್ಯ. ಶಾಲಾ ಮಕ್ಕಳ ವಾಹನ ಹಾಗೂ ಸುರಕ್ಷತೆಯಲ್ಲಿ ಹೊಸ ನೀತಿ ಬರುತ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.
ನವದೆಹಲಿ(ಮೇ.04): ಸ್ಕೂಲ್ ಬಸ್ ಹಾಗೂ ಮಕ್ಕಳ ಸುರಕ್ಷತೆ ಕಳೆದ ಹಲವು ವರ್ಷಗಳಲ್ಲಿ ಭಾರಿ ಚರ್ಚೆಯಾಗಿದೆ. ಶಾಲಾ ವಾಹನಗಳ ಅಪಘಾತ, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣಗಳಿಂದ ಶಾಲಾ ವಾಮಹಗಳಲ್ಲಿ ಮಕ್ಕಳ ಸುರಕ್ಷತೆ ಪೋಷಕರ ನಿದ್ದೆಗೆಡಿಸಿದೆ. ಇದೀಗ ಈ ಆತಂಕಕ್ಕೆ ಪೂರ್ಣವಿರಾಮ ಹಾಕಲು ರಸ್ತೆ ಸಂಚಾರ ಶಿಕ್ಷಣ ಸಂಸ್ಥೆ (IRTE) ಹಾಗೂ ಕೇಂದ್ರ ರಸ್ತೆ ಸಾರಿಗೆ ಇಲಾಖೆ (MoRTH) ಜಂಟಿಯಾಗಿ ಮಹತ್ವದ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: ಕಾರಿನ ಮೇಲೆ ಸ್ಟಿಕ್ಕರ್- ಮಾಲೀಕನ ಮೇಲೆ ಕೇಸ್, ಕಾರು ಸೀಝ್!
ಶಾಲಾ ವಾಹಾನ ಹಾಗೂ ಮಕ್ಕಳ ಸುರಕ್ಷತೆ ವಿಚಾರವಾಗಿ IRTE ಹಾಗೂ MoRTH ಜಂಟಿಯಾಗಿ ವಿಶೇಷ ಸಭೆ ಹಮ್ಮಿಕೊಂಡಿತ್ತು. ಈ ಸಭೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆಗಾಗಿ ಯಾವ ಬದಲಾವಣೆಗಳನ್ನ ತರಬೇಕು, ಕಟ್ಟು ನಿಟ್ಟಿನ ಕ್ರಮ ಹಾಗೂ ಇತರ ಸಮಸ್ಯೆ, ಸವಾಲುಗಳ ಕುರಿತು ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಹಲವು ಕಟ್ಟು ನಿಟ್ಟಿನ ಕ್ರಮಗಳ ಕೈಗೊಳ್ಳಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ದಾಖಲೆ ಬರೆದ ಮಾರುತಿ ಸುಜುಕಿ ಇಗ್ನಿಸ್ ಕಾರು!
ಶೀಘ್ರದಲ್ಲೇ ಹೊಸ ನೀತಿಗಳು ಜಾರಿಯಾಗಲಿದೆ. ಮಕ್ಕಳ ಸುರಕ್ಷತೆಗಾಗಿ ಶಾಲೆ, ಶಾಲಾ ವಾಹನ, ಚಾಲಕರು ಹಾಗೂ ಪೋಷಕರು ಪಾಲಿಸಬೇಕಾದ ನಿಯಮಗಳನ್ನು ಶೀಘ್ರವೇ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಮೂಲಕ ಭಾರತದ ಎಲ್ಲಾ ರಾಜ್ಯಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಒತ್ತು ನೀಡಲಾಗಿದೆ.