Mahindra Thar Facelift: ಹೊಸ ಲುಕ್, ಹೈ-ಟೆಕ್ ಫೀಚರ್‌ಗಳೊಂದಿಗೆ ರಸ್ತೆಗಿಳಿಯಲು ಸಜ್ಜಾದ ಹೊಸ ಥಾರ್

Published : Aug 08, 2026, 11:05 AM IST
Mahindra Thar

ಸಾರಾಂಶ

ಮಹೀಂದ್ರಾ ತನ್ನ ಜನಪ್ರಿಯ SUV ಥಾರ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದೇ ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಇದು ಹೊಸ ವಿನ್ಯಾಸ, ADAS ಸೂಟ್, ಮತ್ತು ನವೀಕರಿಸಿದ ಇಂಟೀರಿಯರ್‌ನಂತಹ ಹಲವು ಬದಲಾವಣೆಗಳನ್ನು ಹೊಂದಿರಲಿದೆ.

Mahindra Thar facelift: ವಾಹನಗಳ ನಿರ್ಮಾಣ ಕಂಪನಿಯಾಗಿರುವ ಮಹೀಂದ್ರಾ ಹಲವು ಸೆಗ್ಮೆಂಟ್‌ಗಳಲ್ಲಿ SUV ಮಾರಾಟ ಮಾಡುತ್ತಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ, ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೆ Mahindra Tharನ್ನು ಬಿಡುಗಡೆ ಮಾಡಲಿದೆ. ಇದೇ ಅಗಸ್ಟ್ 14 ಅಥವಾ 15ರಂದು Mahindra Thar ಬರುವ ನಿರೀಕ್ಷೆಗಳಿವೆ. ಸದ್ಯ ಈ ಹೊಸ SUV ಟೆಸ್ಟಿಂಗ್ ನಡೆಯುತ್ತಿದೆ. ಟೆಸ್ಟಿಂಗ್ ವೇಳೆ SUV ಲುಕ್ ಹೊರ ಬಂದಿದೆ.

ಹಲವು ನವೀಕರಣಗಳೊಂದಿಗೆ ಎಂಟ್ರಿ ಸಾಧ್ಯತೆ

ವರದಿಗಳ ಪ್ರಕಾರ Mahindra Thar facelift ಫ್ರಂಟ್ ಮತ್ತು ರಿಯರ್ ಜೊತೆಯಲ್ಲಯೇ ಆಲಾಯ್ ವ್ಹೀಲ್ಸ್ ಅಪ್‌ಡೇಟ್ ಹೊಂದಿದೆ. ಈ ಮಹೀಂದ್ರಾ ಥಾರ್ ಅಪ್‌ಡೇಟೆಡ್ ಮೂರು ಡೋರ್‌ ಗಳನ್ನು ಹೊಂದಿರಲಿದೆ. ಇದರ ಜೊತೆಯಲ್ಲಿಯೇ ಇನ್ನೂ ಹಲವು ನವೀಕರಣಗಳೊಂದಿಗೆ ಎಸ್‌ಯುವಿ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ. ಯಾವೆಲ್ಲಾ ಅಪ್‌ಡೇಟ್‌ಗಳೊಂದಿಗೆ Mahindra Thar facelift ಬರಲಿದೆ ಎಂಬುದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳು ಹೊರ ಬಂದಿಲ್ಲ.

ಒಳಗಡೆ ಏನೆಲ್ಲಾ ಇರಬಹುದು?

ಫೇಸ್‌ಲಿಫ್ಟೆಡ್ ಮಹೀಂದ್ರಾ ಥಾರ್ SUV ಒಳಗಡೆ ADAS (Advanced Driver Assistance Systems) ಸೂಟ್, ಫ್ರಂಟ್ ಸೀಟ್‌ನಲ್ಲಿ ವೆಂಟಿಲೇಟರ್ ಕಂಟ್ರೋಲ್, ಡಿಜಿಟಲ್ ಬಣ್ಣದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. 2.0-ಲೀಟರ್ ಟರ್ಬೊ-ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 2.2-ಲೀಟರ್ ಡೀಸೆಲ್ ಮೋಟಾರ್‌ ಒಳಗೊಂಡಿರುವ ಪವರ್‌ಟ್ರೇನ್‌ಗಳನ್ನು ಆರು-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಹೊಂದಿರುವ ನಿರೀಕ್ಷೆಗಳಿವೆ. ಇದರ ಜೊತೆಯಲ್ಲಿ 4x4 ಮತ್ತು RWD ಟ್ರಿಮ್‌ಗಳು ಸಹ ಆಫರ್‌ನಲ್ಲಿ ಲಭ್ಯವಿರುತ್ತವೆ ಎಂಬ ಮಾಹಿತಿ ಹರಿದಾಡುತ್ತಿದೆ.

ಹೊಸದಾದ ಫ್ರಂಟ್ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಸಿ-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ಲ್ಯಾಂಪ್‌ಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ.

ಬೆಲೆ ಎಷ್ಟು?

ಎಕ್ಸ್ ಶೋರೂಂ ಬೆಲೆ Rs. 9.50 - 17.00 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಶ್ನೆ: ಮಹೀಂದ್ರಾ ಥಾರ್ ಫೇಸ್‌ಲಿಫ್ಟ್‌ನ ನಿರೀಕ್ಷಿತ ಬೆಲೆ ಎಷ್ಟು?

ಮಹೀಂದ್ರಾ ಥಾರ್ ಫೇಸ್‌ಲಿಫ್ಟ್ ಬೆಲೆ ರೂ. 9.50 - 17.00 ಲಕ್ಷ ವ್ಯಾಪ್ತಿಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಶ್ನೆ: ಮಹೀಂದ್ರಾ ಥಾರ್ ಫೇಸ್‌ಲಿಫ್ಟ್‌ನ ನಿರೀಕ್ಷಿತ ಬಿಡುಗಡೆ ದಿನಾಂಕ ಯಾವುದು?

ಮಹೀಂದ್ರಾ ಥಾರ್ ಫೇಸ್‌ಲಿಫ್ಟ್ ಆಗಸ್ಟ್ 2027 ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮಾರುತಿ ಬ್ರೆಜಾಗೆ ಪೈಪೋಟಿ, ಕಿಯಾ ಸೊನೆಟ್ ಕಾರು ಸೇರಿ ಕೆಲ ಕಾರುಗಳು 1 ಲಕ್ಷ ರೂ ಡಿಸ್ಕೌಂಟ್ ಆಫರ್

ಇದನ್ನು ಓದಿ: ಬೆಂಗಳೂರಿನಿಂದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಎಐ ಟೆಕ್ ಜೊತೆ 165 ಕಿ.ಮೀ ಮೈಲೇಜ್

ಪ್ರಸ್ತುತ ಇರುವ ಥಾರ್‌ಗೆ ಹೋಲಿಸಿದರೆ ಬೆಲೆ ಹೆಚ್ಚಾಗಲಿದೆಯೇ? 

ಹೌದು, ಹೊಸ ಫೇಸ್‌ಲಿಫ್ಟ್‌ನಲ್ಲಿ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ), ವೆಂಟಿಲೇಟೆಡ್ ಸೀಟ್‌ಗಳು, ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು C-ಆಕಾರದ DRL ನಂತಹ ಆಧುನಿಕ ಫೀಚರ್‌ಗಳನ್ನು ಸೇರಿಸುತ್ತಿರುವುದರಿಂದ, ಪ್ರಸ್ತುತ ಲಭ್ಯವಿರುವ ಥಾರ್ ಮಾದರಿಗಿಂತ ಸುಮಾರು ₹30,000 ದಿಂದ ₹60,000 ದಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

PREV
Read more Articles on
click me!

Recommended Stories

ಮಾರುತಿ ಬ್ರೆಜಾಗೆ ಪೈಪೋಟಿ, ಕಿಯಾ ಸೊನೆಟ್ ಕಾರು ಸೇರಿ ಕೆಲ ಕಾರುಗಳು 1 ಲಕ್ಷ ರೂ ಡಿಸ್ಕೌಂಟ್ ಆಫರ್
TVS Jupiter 125 Vs Suzuki Access 125: ದರ, ಮೈಲೇಜ್ ಮತ್ತು ಫೀಚರ್ಸ್‌ನಲ್ಲಿ ಯಾವುದು ಬೆಸ್ಟ್?