5ಸಾವಿರ ರೂ.ಗೆ ಬುಕ್ ಮಾಡಿ ಮಹೀಂದ್ರ ಸ್ಕಾರ್ಪಿಯೋ BS6, ಆನ್‌ಲೈನ್‌ನಲ್ಲಿ ಮಾತ್ರ!

By Suvarna News  |  First Published Apr 26, 2020, 4:09 PM IST

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಇದೀಗ ಹಲವು ಆಟೋಮೊಬೈಲ್ ಕಂಪನಿಗಳು ಆನ್‌ಲೈಕ್  ಬುಕಿಂಗ್ ಆರಂಭಮಾಡಿದೆ. ಲಾಕ್‌‌ಡೌನ್ ತೆರವಿನ ಬಳಿಕ ವಾಹನ ಡೆಲಿವರಿ ಆಗಲಿದೆ. ಇದೀಗ ಮಹೀಂದ್ರ  ಸ್ಕಾರ್ಪಿಯೋ ಆನ್‌ಲೈನ್ ಬುಕಿಂಗ್ ಆರಂಭವಾಗಿದೆ. ಕೇವಲ 5,000 ರೂಪಾಯಿಗೆ BS6 ಸ್ಕಾರ್ಪಿಯೋ ಕಾರು ಬುಕ್ ಮಾಡಬಹುದು.
 


ಮುಂಬೈ(ಏ.26): ಲಾಕ್‌ಡೌನ್ ಕಾರಣ ಬಹುತೇಕ ಕಂಪನಿಗಳು ತಮ್ಮ ವಾಹನಗಳು ಬಿಡುಗಡೆಯಾಗದೇ ಉಳಿದಿದೆ. ಇದೀಗ ಲಾಕ್‌ಡೌನ್ ನಡುವೆ ಕೆಲ ಕಂಪನಿಗಳು ಆನ್‌ಲೈನ್ ಬುಕಿಂಗ್ ಆರಂಭಿಸಿದೆ.  ಮಹೀಂದ್ರ ಕಂಪನಿಯ ನೂತನ  ಸ್ಕಾರ್ಪಿಯೋ BS6 ಕಾರು ಲಾಕ್‌ಡೌನ್ ಕಾರಣ ಬುಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋ ಕೊರಗಿಗೆ ಇದೀಗ ಮಹೀಂದ್ರ ಉತ್ತರ ಕೊಟ್ಟಿದೆ. ಮಹೀಂದ್ರ ಆನ್‌ಲೈನ್ ಬುಕಿಂಗ್ ಆರಂಭಿಸಿದೆ. 

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ಕ್ರಾಸ್ಓವರ್ ಕಾರು; ಟಾಟಾ HBX ಮೇಲೆ ಎಲ್ಲರ ಚಿತ್ತ!

Tap to resize

Latest Videos

ಮಹೀಂದ್ರ ಸ್ಕಾರ್ಪಿಯೋ  BS6 ಕಾರನ್ನು ಕೇವಲ 5,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬುಹುದು. ಇದರಲ್ಲಿ ನಾಲ್ಕು ವೇರಿಯೆಂಟ್ ಕಾರುಗಳು ಲಭ್ಯವಿದೆ. S5, S7, S9 ಹಾಗೂ S11 ವೇರಿಯೆಂಟ್ ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದು.  ಸ್ಕಾರ್ಪಿಯೋ ಜೊತೆಗೆ ಮಹೀಂದ್ರ XUV500, ಬೊಲೆರೋ, KUV100 NXT, XUV300 ಹಾಗೂ ಅಲ್ಟುರಾಸ್ G4 ಕಾರಿನ ಆನ್‌ಲೈನ್ ಬುಕಿಂಗ್ ಆರಂಭಗೊಂಡಿದೆ.

ಆಕರ್ಷಕ ಲುಕ್‌ನಲ್ಲಿ ಟೊಯೋಟಾ ಯಾರಿಸ್ ಕ್ರಾಸ್ ಕಾರು ಅನಾವರಣ!

ನೂತನ ಮಹೀಂದ್ರ ಸ್ಕಾರ್ಪಿಯೋ ಮುಂಭಾಗದ ಗ್ರಿಲ್ ಬದಲಾವಣೆ ಮಾಡಲಾಗಿದೆ. ಗ್ರಿಲ್ ಬಳಿ ಕ್ರೋಮ್ ಬಳಕೆ ಮಾಡಲಾಗಿದೆ. ಇನ್ನು 17 ಇಂಚಿನ ಅಲೋಯ್ ವೀಲ್ಹ್, LED ಟೈಲ್‌ಲೈಟ್ ಸೇರಿದಂತೆ ಹಲವು ಹೊಸತನಗಳನ್ನು ಕಾರಿನಲ್ಲಿ ತರಲಾಗಿದೆ. 

2.2 ಲೀಟರ್ mHawk,4 ಸಿಲಿಂಡರ್, ಡೀಸೆಲ್ ಎಂಜಿನ್ ಹೊಂದಿರುವ ಮಹೀಂದ್ರ ಸ್ಕಾರ್ಪಿಯೋ  138 bhp ಪವರ್ ಹಾಗೂ 320 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ.
 

click me!