ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!

Suvarna News   | Asianet News
Published : Apr 26, 2020, 02:49 PM IST
ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!

ಸಾರಾಂಶ

ಕೊರೋನಾ ವೈರಸ್ ಕಾರಣ ಈಗಾಗಲೇ ಬಿಡುಗಡೆಯಾಗಬೇಕಿದ್ದ ರಾಯಲ್ ಎನ್‌ಫೀಲ್ಡ್ ಮೆಟೊರ್ ಇದೀಗ ಲಾಕ್‌ಡೌನ್ ತೆರವಾದ ಬಳಿಕ ಬಿಡುಗಡೆಯಾಗಲಿದೆ. ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್‌ ಬೈಕ್‌ಗೆ ಬದಲಾಗಿ ನೂತನ ಮೆಟೊರ್ 350 ಬೈಕ್ ಮಾರುಕಟ್ಟೆ ಪ್ರವೇಶಿಸಲು ರೆಡಿಯಾಗಿದೆ. ಇದೀಗ ನೂತನ ಬೈಕ್ ಬೆಲೆ ಬಹಿರಂಗವಾಗಿದೆ. 

ಚೆನ್ನೈ(ಏ.26): ಕೊರೋನಾ ವೈರಸ್ ಕಾರಣ ರಾಯಲ್ ಎನ್‌ಫೀಲ್ಡ್ ಕಂಪನಿಯ ನೂತನ ಬೈಕ್ ಮೆಟೊರ್ 350 ಬಿಡುಗಡೆ ವಿಳಂಬವಾಗಿದೆ. ಆದರೆ ಈ ಬೈಕ್ ಕುರಿತು ಮಾಹಿತಿಯನ್ನು ರಾಯಲ್‌ ಎನ್‌ಫೀಲ್ಡ್ ಬಹಿರಂಗ ಪಡಿಸಿದೆ. ಥಂಡರ್‌ಬರ್ಡ್ 350 ಬೈಕ್ ಸ್ಥಗಿತಗೊಳ್ಳುತ್ತಿದೆ. ಇದರ ಬದಲಾಗಿ ಮೆಟೊರ್ 350 ಬೈಕ್ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ನೂತನ ಬೈಕ್ ಕುರಿತು ಕೆಲ ಚಿತ್ರಗಳು ಮಾರ್ಚ್ ತಿಂಗಳ ಆರಂಭದಲ್ಲಿ ಬಹಿರಂಗವಾಗಿತ್ತು.

ರಾಯಲ್‌ ಎನ್‌ಫೀಲ್ಡ್ ಫೊಟೊನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ರೆಡಿ!

ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬೆಲೆ 1.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.  ಈ ಬೆಲೆಯಲ್ಲಿ ಕೆಲ ಆ್ಯಕ್ಸಸರಿಗಳು ಸೇರಿಕೊಂಡಿವೆ.   ವಿನ್ಯಾಸದಲ್ಲಿ ಹೆಚ್ಚು ಕಡಿಮೆ ಥಂಡರ್‌ಬರ್ಡ್ ವಿನ್ಯಾಸವನ್ನೇ ಹೋಲುತ್ತಿದೆ. ಕೊಂಚ ಬದಲಾವಣೆ. ಹೆಡ್‌ಲೌಟ್ ರೌಂಡ್ ಶೇಪ್ ಹೊಂದಿದೆ. LED DRLs, ಟ್ವಿನ್ ಪಾಡ್ ಇನ್ಸ್ಟ್ರುಮೆಂಟಲ್ ಪ್ಯಾನಲ್ ಸೇರಿದಂತೆ ಕೆಲ ಹೊಸತನಗಳು ಈ ಬೈಕ್‌ನಲ್ಲಿದೆ.

ನೂತನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್, ಬೆಲೆ 1.21 ಲಕ್ಷ ರೂ!.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಎಂಜಿನ್‌ನ್ನೇ ಇಲ್ಲೂ ಬಳಸಲಾಗಿದೆ. 349 cc ಸಿಂಗಲ್ ಸಿಲಿಂಡರ್ ಹಾಗೂ ಫ್ಯುಯೆಲ್ ಇಂಜೆಕ್ಟ್ BS6 ಎಂದಿನ್ ಹೊಂದಿದೆ. 19.8 bhp ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಡ್ಯುಯೆಲ್ ಚಾನೆಲ್ ABS ಬ್ರೇಕ್ ಹೊಂದಿದೆ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ