ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಬಹುತೇಕ ಕಂಪನಿಗಳು ನಷ್ಟದ ಸುಳಿಗೆ ಸಿಲುಕಿದೆ. ಇದೀಗ ಉದ್ಯೋಗಿಗಳ ವೇತನ ಕಡಿತ, ಉದ್ಯೋಗ ಕಡಿತ ಸೇರಿದಂತೆ ಹಲವು ಕಠಿಣ ನಿರ್ಧಾಗಳನ್ನು ಕಂಪನಿ ತೆಗೆದುಕೊಳ್ಳುತ್ತಿದೆ. ಇದೀಗ ಭಾರತೀಯ ವಿಮಾನಯಾನ ಕ್ಷೇತ್ರ ಲಾಕ್‌ಡೌನ್ ಕಾರಣ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇದೀಗ 29 ಲಕ್ಷ ಉದ್ಯೋಗಿಗಳ ಭವಿಷ್ಯ ಅತಂತ್ರವಾಗುವ ಭೀತಿಯಲ್ಲಿದೆ.
ನವದೆಹಲಿ(ಏ.25): ಕೊರೋನಾ ವೈರಸ್ ಕಾರಣ ಮೇ.3ರ ವರೆಗೆ ಲಾಕ್‌ಡೌನ್ ಮುಂದುವರಿಯಲಿದೆ. ಬಳಿಕ ಲಾಕ್‌ಡೌನ್ ತೆರವಾದರೂ ಕೆಲ ನಿರ್ಬಂಧಗಳನ್ನು ಹೇರಲಾಗುತ್ತದೆ. ಹೀಗಾಗಿ ಎಲ್ಲಾ ಸೇವೆಗಳು ಮತ್ತೆ ಆರಂಭವಾಗಬೇಕಾದರೆ ಕನಿಷ್ಠ 6 ತಿಂಗಳ ಸಮಯ ಅವಶ್ಯತೆ ಇದೆ. ಹೀಗಾಗಿ ಭಾರತೀಯ ವಿಮಾನ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಬರೋಬ್ಬರಿ 29 ಲಕ್ಷ ಉದ್ಯೋಗಿಗಳ ಭವಿಷ್ಯ ಅತಂತ್ರವಾಗಲಿದೆ ಎಂದು IATA (ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಸಂಸ್ಥೆ) ಹೇಳಿದೆ.
ಲಾಕ್‌ಡೌನ್ ಮುಗಿದರೆ ವಿಮಾನಯಾನದಲ್ಲೂ ಸೋಷಿಯಲ್ ಡಿಸ್ಟೆನ್ಸ್; ಇಲ್ಲಿದೆ ಸೂತ್ರ!..
ನೇರವಾಗಿ ವಿಮಾನಯಾನ ಕಂಪನಿಗಳು ಹಾಗೂ ಇದರ ಜೊತೆ ಸಹಭಾಗಿತ್ವದಲ್ಲಿರುವ ಕಂಪನಿಗಳಲ್ಲಿ ಉದ್ಯೋಗ ಕಡಿತವಾಗಲಿದೆ. 29,32,900 ಉದ್ಯೋಗ ಸಮಸ್ಯೆ ಎದುರಾಗಲಿದೆ ಎಂದಿದೆ. ಪ್ಯಾಸೆಂಜರ್ ವಿಮಾನ ಹಾರಾಟದಲ್ಲಿ ಶೇಕಡಾ 47 ರಷ್ಟು ಕುಸಿತ ಕಂಡಿದೆ. ಇದು ಲಾಕ್‌ಡೌನ್ ಬಳಿಕದ ಕುಸಿತ. ಈ ಮೂಲಕ ಭಾರತದಲ್ಲಿ ಕಾರ್ಯನಿರ್ವಹಿಸುವ ಹಾಗೂ ಸಹಭಾಗಿತ್ವ ಹೊಂದಿರುವ ಕಂಪನಿಗಳಿಗೆ ಒಟ್ಟು 85,000 ಕೋಟಿ ರೂಪಾಯಿ ನಷ್ಟವಾಗಿದೆ.
ಭಾರತದ ಜೊತೆಗೆ ವಿಶ್ವದಲ್ಲಿ ಇದೇ ಸಮಸ್ಯೆ. ಕೊರೋನಾ ವೈರಸ್ ಕಾರಣ ವಿಶ್ವದ ವಿಮಾನಯಾನ ಸಂಸ್ಥೆಗಳಿಗೆ 314 ಬಿಲಿಯನ್ ಅಮೆರಿಕ ಡಾಲರ್ ನಷ್ಟು ನಷ್ಟವಾಗಿದೆ. ಉದ್ಯೋಗ ಕಡಿತ ಸೇರಿದಂತೆ ಹಲುವು ಸಮಸ್ಯೆಗಳಿಗೆ ಶೀಘ್ರದಲ್ಲಿ ಯಾವುದೇ ಉತ್ತರವಿಲ್ಲ. ಇಷ್ಟೇ ಅಲ್ಲ ವಿಮಾನ ಸಂಸ್ಥೆ ನಷ್ಟದಿಂದ ಮತ್ತ ಸಹಸ ಸ್ಥಿತಿಗೆ ಬರಲು ಕನಿಷ್ಠ 6 ತಿಂಗಳಾದರೂ ಬೇಕು. ಹೀಗಾಗಿ ವೈರಸ್ ತೊಲಗಿದ ಮೇಲೆ ಭಾರತ ಸೇರಿದಂತೆ ವಿಶ್ವದಲ್ಲಿ ಉದ್ಯೋಗ ಸಮಸ್ಯೆ ತಾಂಡವ ಆಡಲಿದೆ ಎಂದು IATA ಹೇಳಿದೆ.