ಜಾವಾ ಪೆರಾಕ್ ಬೈಕ್ ಬಿಡುಗಡೆಗೆ ಕೌಂಟ್‌ಡೌನ್!

By Web DeskFirst Published Nov 10, 2019, 7:33 PM IST
Highlights

ಕಳೆದ ವರ್ಷ ಅನಾವರಣಗೊಂಡಿದ್ದ ಜಾವಾ ಪೆರಾಕ್ ಬೈಕ್ ಹಲವು ಕಾರಣಗಳಿಂದ ಬಿಡುಗಡೆ ಮುಂದೂಡಿತ್ತು. ಇದೀಗ ಜಾವಾ ಮೊದಲ ವರ್ಷಾಚಣೆ ಸಂಭ್ರಮದಲ್ಲಿ ಬಾಬ್ಬರ್ ಬೈಕ್ ಬಿಡುಗಡೆಯಾಗುತ್ತಿದೆ. ಈ ಬೈಕ್ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.
 

ನವದೆಹಲಿ(ನ.10): ಜಾವಾ ಮೋಟಾರ್ ಸೈಕಲ್ 2018ರಲ್ಲಿ ಹೊಸ ಇನಿಂಗ್ಸ್ ಆರಂಭಿಸಿತ್ತು. ಕ್ಲಾಸಿಕ್ ಹಾಗೂ ಜಾವಾ 42 ಬೈಕ್ ಬಿಡುಗಡೆ ಮಾಡಿದ ಜಾವಾ, ಇದೀಗ ಮೊದಲ ವರ್ಷಾಚರಣೆಯಂದು ಜಾವೆ ಪೆರಾಕ್ ಬೈಕ್ ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷವೇ ಪೆರಾಕ್ ಬೈಕ್ ಅನಾವರಣ ಮಾಡಿತ್ತು. ಬಳಿಕ ಬಿಡುಗಡೆ ಮುಂದೂಡಿದ್ದ ಜಾವಾ ಇದೀಗ ನವೆಂಬರ್ 15  ರಂದು ತನ್ನ ಬಾಬರ್ ಬೈಕ್ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಜಾವಾ 90th ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ!

ಜಾವಾ ಪೆರಾಕ್ ಬೈಕ್ ಹೊಸದು. ಆದರೆ ಹೆಸರು ಹೊಸದಲ್ಲ. 1946ರ 2ನೇ ಮಹಾಯುದ್ದ ಸಮಯದಲ್ಲಿ ಪ್ಯಾರಿಸ್ ಮೋಟಾರ್ ಶೋನಲ್ಲಿ ಜಾವಾ ಮೋಟಾರ್ ಪೆರಾಕ್ ಬೈಕ್ ಪರಿಚಯಿಸಿತ್ತು. ಅಂದು 250 cc ಎಂಜಿನ್ ಪರಿಚಯಿಸಿದ್ದ ಜಾವಾ, ಇದೀಗ 334cc ಎಂಜಿನ್ ಪೆರಾಕ್ ಬೈಕ್ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಜಾವಾ- ಜಾವಾ 42 ಬೈಕ್ ಮೈಲೇಜ್ ಬಹಿರಂಗ!

ಸದ್ಯ ಮಾರುಕಟ್ಟೆಯಲ್ಲಿರುವ ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕ್ 293cc ಎಂಜಿನ್ ಹೊಂದಿದೆ. ಆದರೆ ಪೆರಾಕ್ ಹೆಚ್ಚು ಬಲಿಷ್ಟ ಹಾಗೂ ಆಕರ್ಷಕ ಲುಕ್ ಹೊಂದಿದೆ. 334cc ಎಂಜಿನ್ ಎಂಜಿನ್ ಹೊಂದಿರುವ ಜಾವಾ ಪೆರಾಕ್ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಮೋಟಾರ್ ಹೊಂದಿದೆ. 30 bhp ಪವರ್ ಹಾಗೂ  31 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ಹುತಾತ್ಮ ಯೋಧರ ಮಕ್ಕಳಿಗಾಗಿ ಜಾವಾ ಬೈಕ್ ಹರಾಜು!

ಪೆರಾಕ್ ಬೈಕ್ ಡ್ಯುಯೆಲ್ ABS(ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಕಳೆದ ವರ್ಷ ಅನಾವರಣ ವೇಳೆ ಜಾವಾ ಪೆರಾಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಘೋಷಿಸಿತ್ತು. ಇದೀಗ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದ್ದು, 2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 

click me!