ಮರ್ಸೀಡೀಸ್ ಬೆಂಜ್ ಕ್ಲಾಸಿಕ್ ಕಾರುಗಳ ರ‍್ಯಾಲಿಗೆ ಮಹಾ ನಗರಿ ಸಜ್ಜಾಗಿದೆ. ಹಳೇ ರೆಟ್ರೋ ಕಾರುಗಳಿಂದ ಹಿಡಿದು ಬೆಂಜ್ ಅತ್ಯಮೂಲ್ಯ ಕಾರುಗಳು ರಸ್ತೆಗಿಳಿಯುತ್ತಿದೆ. ಈ ರ‍್ಯಾಲಿ ಹಾಗೂ ಕಾರುಗಳ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಮುಂಬೈ(ನ.09): ಕ್ಲಾಸಿಕ್ ಮರ್ಸೀಡೀಸ್ ಬೆಂಜ್ ಕಾರುಗಳನ್ನು ನೋಡುವುದೆ ಆನಂದ. ಅದರಲ್ಲೂ ಹಳೇ ಕಾರುಗಳು ಎಲ್ಲರನ್ನು ಆಕರ್ಷಿಸುತ್ತಿದೆ. ಪ್ರತಿ ವರ್ಷ ಮರ್ಸಡೀಸ್ ಕ್ಲಾಸಿಕ್ ಕಾರು ರ‍್ಯಾಲಿ ಮೂಲಕ ವಿಶ್ವದ ಗಮನಸೆಳೆದಿರುವ ಬೆಂಜ್ ಇದೀಗ 6ನೇ ವರ್ಷದ ರ‍್ಯಾಲಿಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ನಾಳೆ(ನ.10) ಮುಂಬೈ ಮಹಾನಗರದಲ್ಲಿ ಮರ್ಸಿಡೀಸ್ ಬೆಂಜ್ ಕ್ಲಾಸಿಕ್ ಕಾರು ರ‍್ಯಾಲಿ ನಡೆಯಲಿದೆ.
ಇದನ್ನೂ ಓದಿ: ಬಂಪರ್ ಸೇಲ್: ಒಂದೇ ದಿನ 600 ಬೆಂಝ್ ಕಾರು ಸೇಲ್!
ಭಾನುವರಾ ಬೆಳಗ್ಗೆ 11.10ಕ್ಕೆ ರ‍್ಯಾಲಿ ಆರಂಭವಾಗಲಿದೆ. ಸೊಫಿಟೆಲ್ ಮುಂಬೈ ಬಿಕೆಸಿ ಕಾಂಪ್ಲೆಕ್ಸ್‌ನಿಂದ ರ‍್ಯಾಲಿ ಆರಂಭಗೊಳ್ಳಲಿದ್ದು, ಕಲ್ಯಾಣನಗರ ಬಿಕೆಸಿ ಮೂಲಕ ಬಾಂದ್ರಾ-ವರ್ಲಿ ಸೀ ಲಿಂಕ್, ವರ್ಲಿ ಸಿ ಫೇಸ್ ಮೂಲಕ ಸಾಗಿ ವರ್ಲಿ ಡೈರಿ ಬಳಿಕ ಯೂ ಟರ್ನ್ ಮೂಲಕ ವಾಪಾಸ್ ಸೊಫಿಟೆಲ್ ಮುಂಬೈ ಬಳಿ ಅಂತ್ಯವಾಗಲಿದೆ.
ಇದನ್ನೂ ಓದಿ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಬೆಂಜ್ ಲಕ್ಸ್ ಡ್ರೈವ್ ಕರಾಮತ್ತು!
ಪ್ರತಿಷ್ಠಿತ ರ‍್ಯಾಲಿಯಲ್ಲಿ 300SL, ನರ್ಬಗ್ 500K ಸೇರಿದಂತೆ ರೆಟ್ರೋ ಕಾರುಗಳು ರಸ್ತೆಗಿಳಿಯಲಿದೆ. ರ‍್ಯಾಲಿಯಲ್ಲಿ ಗಮನಸೆಳೆಯಲಿರುವ ಪ್ರಮುಖ ಕಾರುಗಳ ವಿವರ ಇಲ್ಲಿದೆ.
ಮರ್ಸಿಡೀಸ್ ಬೆಂಜ್ 300SL
ಮರ್ಸಿಡೀಸ್ ಬೆಂಜ್ ನರ್‌ಬರ್ಗ್
ಮರ್ಸಿಡೀಸ್ ಬೆಂಜ್ 500K
ಮರ್ಸಿಡೀಸ್ ಬೆಂಜ್ ಆ್ಯಡಾನಿಯರ್ ಲಿಮಾಸೈನ್ಸ್
ಮರ್ಸಿಡೀಸ್ ಬೆಂಜ್ 170V
ಮರ್ಸಿಡೀಸ್ ಬೆಂಜ್ 230L Pullman from 1938
ಮರ್ಸಿಡೀಸ್ ಬೆಂಜ್ SL
ಮರ್ಸಿಡೀಸ್ ಬೆಂಜ್ S-class
ಮರ್ಸಿಡೀಸ್ ಬೆಂಜ್ E-class
First generation ಮರ್ಸಿಡೀಸ್ ಬೆಂಜ್ C-class (W201)
ಮರ್ಸಿಡೀಸ್ ಬೆಂಜ್ SECs and SLCs