ಭಾರತದಲ್ಲೇ ತಯಾರಿಸಲಾಗುತ್ತಿರುವ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನೂತನ ಬೈಕ್‌ನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
ನವದೆಹಲಿ(ಜ.04): ಭಾರತದಲ್ಲೇ ನಿರ್ಮಾಣವಾಗುತ್ತಿರುವ ನೂತನ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 2017ರಲ್ಲೇ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಬಳಿಕ ಸೈಲೆಂಟ್ ಆಗಿತ್ತು. ಇದೀಗ 2019ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಟಾರ್ಕ್ T6X ಕಂಪೆನಿ ಸಜ್ಜಾಗಿದೆ.
undefined
ಇದನ್ನೂ ಓದಿ: ನಿರುದ್ಯೋಗಿ ಯುವಕರಿಗೆ ಸರ್ಕಾರದಿಂದ ಮಾರುತಿ ಡಿಸೈರ್ ಕಾರು!
11 ಕಿಲೋ ವ್ಯಾಟ್ ಮೋಟಾರ್ ಎಂಜಿನ್ ಹೊಂದಿರುವ ನೂತನ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಶೇಕಡಾ 80 ಬ್ಯಾಟರಿ ಚಾರ್ಜ್‌ನಲ್ಲಿ 100 ಕಿ.ಮಿ ಪ್ರಯಾಣ ಮಾಡಬುಹುದಾಗಿದೆ.
ಇದನ್ನೂ ಓದಿ: 1980-90ರ ದಶಕದಲ್ಲಿ ಭಾರತದಲ್ಲಿ ಮಿಂಚಿದ ಕಾರುಗಳು ಇಲ್ಲಿದೆ!
ಸದ್ಯ ರೋಡ್ ಟೆಸ್ಟ್ ನಡೆಸಿರುವ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ 2019ರ ಅಂತ್ಯದಲ್ಲಿ ಬಿಡುಗಡೆ ಮಾಡಲಿದೆ. ನೂತನ ಬೈಕ್ ಬೆಲೆ 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 27Nm ಟಾರ್ಕ್ ಉತ್ಪಾದಿಸಬಲ್ಲ ಎಂಜಿನ್ ಹೊಂದಿರುವ ನೂತನ ಬೈಕ್ ಇತರ ಇಂಧನ ಬೈಕ್‌ಗಳಿಗೂ ಭಾರಿ ಪೈಪೋಟಿ ನೀಡಲಿದೆ.