ನಿರುದ್ಯೋಗಿ ಯುವಕರಿಗೆ ಸರ್ಕಾರದಿಂದ ಮಾರುತಿ ಡಿಸೈರ್ ಕಾರು!

By Web Desk  |  First Published Jan 4, 2019, 3:25 PM IST

ಮಾರುತಿ ಸುಜುಕಿ ಸಂಸ್ಥೆಯ ಸೆಡಾನ್ ಕಾರು ಮಾರುತಿ ಡಿಸೈರ್ ಮಾರಾಟದಲ್ಲಿ ದಾಖಲೆ ಬರೆದಿದೆ. ನೂತನ ಡಿಸೈರ್ ಕಾರು ಇದೀಗ ನಿರುದ್ಯೋಗಿ ಯುವಕರಿಗೆ ನೀಡಲು ಸರ್ಕಾರ ಮುಂದಾಗಿದೆ. ಹಾಗಾದರೆ ಈ ಕೊಡುಗೆ ಯಾವ ಸರ್ಕಾರ ನೀಡುತ್ತಿದೆ? ಇಲ್ಲಿದೆ ವಿವರ.


ಅಮರಾವತಿ(ಜ.04): ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಳಿತರೂಡ ಸರ್ಕಾರಗಳು ಮತದಾರರನ್ನ ಸೆಳೆಯಲು ಒಂದೊಂದು ತಂತ್ರಗಳನ್ನ ಹೆಣೆಯಲಾಗುತ್ತೆ. ಇದೀಗ ನಿರುದ್ಯೋಗಿ ಯುವಕರಿಗೆ ಸರ್ಕಾರವೇ ಮಾರುತಿ ಸುಜುಕಿ ಡಿಸೈರ್ ಕಾರು ನೀಡಲಿದೆ. ಆದರೆ ಈ ಆಫರ್ ಇರೋದು ಕರ್ನಾಟಕದಲ್ಲಿ ಅಲ್ಲ, ಬದಲಾಗಿ ಪಕ್ಕದ ಆಂಧ್ರಪ್ರದೇಶದಲ್ಲಿ.

Latest Videos

undefined

ಇದನ್ನೂ ಓದಿ: ಅತ್ಯಂತ ದುಬಾರಿ ಕಾರು ಬಳಸೋ ಪೊಲೀಸರು ಯಾರು?

ಆಂಧ್ರಪ್ರದೇಶದ ಆಡಳಿತರೂಡ ತೆಲುಗು ದೇಶಂ ಪಾರ್ಟಿ ಈ ಭರ್ಜರಿ ಕೊಡುಗೆ ಘೋಷಿಸಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಪರ್ ಆಫರ್ ಘೋಷಿಸಿದ್ದಾರೆ. ಕೆಲಸ ಸಿಗದೆ ನಿರುದ್ಯೋಗಿಯಾಗಿರುವ ಬ್ರಾಹ್ಮಣ ಯುವಕರಿಗೆ ಮಾರುತಿ ಡಿಸೈರ್ ಕಾರು ವಿತರಿಸಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಬೀಚ್‌ಗೆ ಹೋದ ಸಚಿವರ ಕಾರಿಗೆ ಬಂತು ಸಂಕಟ-ವಿಡಿಯೋ ವೈರಲ್

ಮೊದಲ ಹಂತದಲ್ಲಿ 50 ಕಾರುಗಳನ್ನ ವಿತರಿಸಲು ಈಗಾಗಲೇ ನಿರುದ್ಯೋಗಿಗಳ ಪಟ್ಟಿ ಸಿದ್ಧವಾಗಿದೆ. ಫಲಾನುಭವಿಗಳು ಕೇವಲ 2 ಲಕ್ಷ ರೂಪಾಯಿ ಪಾವತಿಸಿದರೆ ಸಾಕು. ಅದು ಕೂಡ ಕಂತುಗಳಲ್ಲಿ ಪಾವತಿ ಮಾಡುಬಹುದು. ಮಾರುತಿ ಸುಜುಕಿ ಡಿಸೈರ್ ಮಿಡ್ ವೇರಿಯೆಂಟ್ ಕಾರಿನ ಬೆಲೆ ಸರಿಸುಮಾರು 8 ಲಕ್ಷ ರೂಪಾಯಿ. ಬಾಕಿ ಹಣವನ್ನ ಸರ್ಕಾರ ಪಾವತಿಸಲಿದೆ. 

ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆ ಕಾರುಗಳು!

ಮಾರುತಿ ಸುಜುಕಿ ಡಿಸೈರ್ 1.2 ಲೀಟರ್, 4 ಸಿಲಿಂಡರ್ ಇಂಜಿನ್ ಹೊಂದಿದೆ. 82 ಬಿಹೆಚ್‌ಪಿ ಹಾಗೂ 113 ಎನ್ಎಂ ಉತ್ವಾದಿಸಲಿದೆ. ಡೀಸೆಲ್ ವೇರಿಯೆಂಟ್ 1.3 ಲೀಟರ್ ಇಂಜಿನ್ ಹಾಗೂ 74  ಬಿಹೆಚ್‌ಪಿ ಹಾಗೂ 190 ಎನ್ಎಂ ಉತ್ವಾದಿಸಲಿದೆ. ಮಾರುತಿ ಡೈಸರ್ ಕಾರು ಮಾತ್ರವಲ್ಲ, ಇದರ ಜೊತೆಗೆ 1.4 ಕೋಟಿ ಸ್ಮಾರ್ಟ್ ಫೋನ್ ವಿತರಿಸಲು ಸರ್ಕಾರ ಸಜ್ಜಾಗಿದೆ. ಈ ಮೂಲಕ ಮತದಾರರನ್ನ ಸೆಳೆಯಲು ಎಲ್ಲಾ ಸಿದ್ಧತೆ ನಡೆಸಿದೆ.  

click me!