ಅತ್ಯಂತ ದುಬಾರಿ ಕಾರು ಬಳಸೋ ಪೊಲೀಸರು ಯಾರು?

By Web Desk  |  First Published Jan 3, 2019, 8:09 PM IST

ಕಳ್ಳರನ್ನ ಚೇಸ್ ಮಾಡಲು ಪೊಲೀಸರು ಆಧುನಿಕ ಕಾರು, ಬೈಕ್‌ಗಳನ್ನ ಬಳಸುತ್ತಾರೆ. ಹೀಗೆ ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಯ ಕಾರು ಬಳಸೋ ಪೊಲೀಸರು ಯಾರು? ಇಲ್ಲಿದೆ ವಿವರ.
 


ಬೆಂಗಳೂರು(ಜ.03): ಅತ್ಯಾಧುನಿಕ ತಂತ್ರಜ್ಞಾನ, ಬಲಿಷ್ಠ ಎಂಜಿನ್, ಗರಿಷ್ಠ ಸುರಕ್ಷತೆ ಕಾರುಗಳು ಪೊಲೀಸರಿಗೆ ಅಗತ್ಯ. ಹಲವು ದೇಶಗಳ ಪೊಲೀಸರು ದುಬಾರಿ, ಆಧುನಿಕ ಕಾರುಗಳನ್ನ ಬಳಸುತ್ತಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಇಟಲಿ ಸೇರಿದಂತೆ ಹಲವು ದೇಶಗಳು ಗರಿಷ್ಠ ಬೆಲೆಯ ಕಾರುಗಳನ್ನ ಬಳಸುತ್ತಾರೆ. ಆದರೆ ದುಬೈ ಪೊಲೀಸರು ವಿಶ್ವದ ಅತ್ಯಂತ ದುಬಾರಿ ಕಾರು ಬಳಸುತ್ತಾರೆ.

Tap to resize

Latest Videos

undefined

ಇದನ್ನೂ ಓದಿ: ರಸ್ತೆ ನಿಯಮ ಉಲ್ಲಂಘಿಸಿದರೆ ದಂಡ ಖಚಿತ - ಫೋಟೋ ಚಲನ್ ಜಾರಿ!

ಅಧುನಿಕ ತಂತ್ರಜ್ಞಾನ, ದುಬಾರಿ ಬೈಕ್, ಕಾರುಗಳನ್ನ ಬಳಸುವುದರಲ್ಲಿ ದುಬೈ ಪೊಲೀಸರು ಎತ್ತಿದ ಕೈ. ವಿಶ್ವದಲ್ಲೇ ಮೊದಲ ಬಾರಿಗೆ ಹೂವರ್ ಹಾರುವ ಬೈಕ್ ಬಳಸಿದ ಕೀರ್ತಿಗೆ ಇದೇ ದುಬೈ ಪೋಲೀಸರು ಪಾತ್ರರಾಗಿದ್ದಾರೆ. ಇನ್ನು ಕಾರಿನ ವಿಚಾರದಲ್ಲೂ ದುಬೈ ಪೊಲೀಸರನ್ನ ಮೀರಿಸುವುದು ಕಷ್ಟ. ಯಾಕೆಂದರೆ ದುಬೈ ಪೊಲೀಸರು  ಬುಗಾಟಿ ವೆಯ್ರಾನ್ ಕಾರು ಬಳಸುತ್ತಾರೆ.

ಇದನ್ನೂ ಓದಿ: ವಿಶ್ವದ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್-ಬೆಲೆ ಬರೋಬ್ಬರಿ 82 ಲಕ್ಷ!

ವೆಯ್ರಾನ್ ಕಾರಿನ ಬೆಲೆ ಸರಿ ಸುಮಾರು 29 ಕೋಟಿ ರೂಪಾಯಿ. ಈ ಕಾರು ಒಂದು ಗಂಟೆಯಲ್ಲಿ 430 ಕಿ.ಮೀ ದೂರ ಚಲಿಸಲಿದೆ. ಗರಿಷ್ಠ ಭದ್ರತೆಯುಳ್ಳ ಸೂಪರ್ ಕಾರು ದುಬೈ ಪೊಲೀಸರಿಗೆ ಅಗತ್ಯ. ದುಬೈನ ಚಾಲಾಕಿ ಕಳ್ಳರನ್ನ ಹಿಡಿಯಲು ಈ ಸೂಪರ್ ಕಾರು ಅಗತ್ಯ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!