ಡೀಸೆಲ್ ದರ ಇಳಿಸಿ; ಕೇಂದ್ರ ಸರ್ಕಾರಕ್ಕೆ ಲಾರಿ ಮಾಲೀಕರ ಸಂಘ ಆಗ್ರಹ!

By Suvarna News  |  First Published Aug 4, 2020, 9:27 PM IST
  • ಡೀಸೆಲ್‌ ದರ ಇಳಿಸಿ ಹಾಗೂ ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಲಾರಿ ಮಾಲೀಕರ ಸಂಘಟನೆಗಳ ಆಗ್ರಹ
  • ಒಂದು ತಿಂಗಳ ಒಳಗಾಗಿ ಬೇಡಿಕೆ ಈಡೇರಿಸದಿದ್ದಲ್ಲಿ ರಾಷ್ಟ್ರವ್ಯಾಪಿ ಹೋರಾಟದ ಎಚ್ಚರಿಕೆ

ಬೆಂಗಳೂರು(ಆ.03): ಕೇಂದ್ರ ಸರಕಾರ ತೆರಿಗೆಯನ್ನು ಹೆಚ್ಚಿಸಿ ಕೃತಕವಾಗಿ ಡೀಸೆಲ್‌ ದರವನ್ನು ಹೆಚ್ಚಿಸಿರುವುದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಡೀಸೆಲ್‌ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸುವಂತೆ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಬಿ ಚನ್ನಾರೆಡ್ಡಿ ಅವರು ಆಗ್ರಹಿಸಿದ್ದಾರೆ. 

ನಾಸಿಕ್‌ನಿಂದ ಕೇರಳಕ್ಕೆ ಸರಕು ಸಾಗಣೆ, ಒಂದು ವರ್ಷವಾದರೂ ಇನ್ನೂ ತಲುಪಿಲ್ಲ ಟ್ರಕ್!.

Tap to resize

Latest Videos

ದೇಶಾದ್ಯಂತ ಕೊರೋನಾ ಪರಿಸ್ಥಿತಿ ಇರುವುದರಿಂದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಏರುಪೇರಾಗಿದೆ. ಈ ಸಂಧರ್ಭದಲ್ಲಿ ನಮ್ಮ ಸರಕು ಸಾಗಾಣೆ ವಾಹನಗಳ ವ್ಯವಹಾರವು ಕುಂಠಿತಗೊಂಡಿದ್ದು, ಈ ಉದ್ದಿಮೆಯಲ್ಲಿ ನಷ್ಟವೇ ಹೆಚ್ಚಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಕೇಂದ್ರ ಸರಕಾರ ಡೀಸೆಲ್‌ ದರಗಳನ್ನು ದಿನೇ ದಿನೇ ಹೆಚ್ಚಿಸಿತ್ತಿರುವುಗು ಉದ್ದಿಮೆಗೆ ದೊಡ್ಡ ಹೊಡೆತವನ್ನು ನೀಡಿದೆ. ರಾಷ್ಟ್ರಾದ್ಯಂತ ಲಾರಿ ಮಾಲೀಕರು ಕೇಂದ್ರ ಸರಕಾರಕ್ಕೆ ಡೀಸೆಲ್‌ ದರವನ್ನು ತಗ್ಗಿಸಲು ಹಲವ ಮನವಿ ಮಾಡಿದ್ದಾರೆ.  ಈಗಿನ ಡೀಸೆಲ್‌ ಬೆಲೆಯು ಕೃತಕವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ತಮ್ಮ ಪಾಲಿನ ತೆರಿಗೆಗಳನ್ನು ಹೆಚ್ಚಿಸಿರುವುದರಿಂದಲೇ ಆಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ ಚನ್ನಾ ರೆಡ್ಡಿ ಹೇಳಿದ್ದಾರೆ. 

ಟ್ರಕ್ ಚಾಲಕರು, ರೈತರ ಆರೋಗ್ಯ ಕಾಳಜಿ; ಸಮೀಕ್ಷೆಯಿಂದ ಬಹಿರಂಗ!

ಅಮೇರಿಕಾ ದೇಶ ಡೀಸೆಲ್‌ ಮೇಲೆ ಶೇಕಡಾ 19 ರಷ್ಟು ತೆರಿಗೆಯನ್ನು ವಿಧಿಸಿದರೆ, ಫ್ರಾನ್ಸ್‌ ದೇಶದಲ್ಲಿ ಇದರ ಪ್ರಮಾಣ ಶೇಕಡಾ 63 ರಷ್ಟಿದೆ. ಆದರೆ, ಭಾರತ ದೇಶದಲ್ಲಿ ಮಾತ್ರ ಇದರ ಪ್ರಮಾಣ ಶೇಕಡಾ 250 ರಷ್ಟು ಇದೆ. ಈದನ್ನು ನೋಡಿದರೆ ಕೇಂದ್ರ ಸರಕಾರ ಯಾವ ರೀತಿ ಸರಕು ಸಾಗಣೆ ವಾಹನಗಳ ಮಾಲೀಕರ ಮೇಲೆ ಅವೈಜ್ಞಾನಿಕ ತೆರಿಗೆ ಹೊರೆಯನ್ನು ಹಾಕುತ್ತಿದೆ ಎಂದು ಗೊತ್ತಾಗುತ್ತದೆ. ಈಗಿನ ಕೊರೋನಾ ವೈರಸ್ ಪರಿಣಾಮ ದೇಶದ ಆರ್ಥಿಕ ಚಟುವಟಿಕೆಗಳು ಸರಿಯಾಗಿ ನಡೆಯದೇ ಇರುವುದರಿಂದ ದುಬಾರಿ ಡೀಸೆಲ್‌ ದರವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ರಾಷ್ಟ್ರವ್ಯಾಪಿ ಇರುವ ಎಲ್ಲಾ ಲಾರಿ ಮಾಲೀಕರ ಸಂಘಟನೆಗಳು ಜಂಟಿಯಾಗಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ಪರಿಹಾರ ನೀಡಲು ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. 

ಡೀಸೆಲ್‌ ದರವನ್ನು ಇಳಿಸುವುದು. ಧರ್ಡ್‌ ಪಾರ್ಟಿ ಇನ್ಸೂರೆನ್ಸ್‌ ನ್ನು ಡಿ ಟ್ಯಾರೀಫ್‌ ಮಾಡುವುದು. 15 ವರ್ಷದ ಹಳೆಯ ವಾಹನಗಳನ್ನು ಸ್ಕ್ರಾಪ್‌ ಮಾಡುವುದರ ಬಗ್ಗೆ ಚರ್ಚಸಿವುದು ಹಾಗೂ ಡೀಸೆಲ್‌ ದರಗಳನ್ನು ಜಿ.ಎಸ್‌.ಟಿ ವ್ಯಾಪ್ತಿಗೆ ಒಳಪಡಿಸುವುದು. ಈ ಮೇಲ್ಕಂಡ ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರಕಾರ ಒಂದು ತಿಂಗಳ ಒಳಗಾಗಿ ಪರಿಹರಿಸಬೇಕು. ಇಲ್ಲದೆ ಇದ್ದ ಪಕ್ಷದಲ್ಲಿ ರಾಷ್ಟ್ರವ್ಯಾಪಿ ಲಾರಿ ಮಾಲೀಕರ ಸಂಘಟನೆಗಳು ಮುಂದಿನ ಪ್ರತಿಭಟನಾ ಮಾರ್ಗವನ್ನು ಹಮ್ಮಿಕೊಳ್ಳಲು ತೀರ್ಮಾನಿಸುವುದು ಅನಿವಾರ್ಯವಾಗಲಿದೆ ಎಂದು ಇದೇ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದರು. 

click me!