ಹ್ಯುಂಡೈ ಶೋರೂಂ ಸೇಲ್ಸ್‌ಮೆನ್ ಆಗಿ ಬೀದಿ ನಾಯಿ ನೇಮಕ; ಸಂಚಲನ ಮೂಡಿಸಿದೆ ಹೃದಯ ಸ್ಪರ್ಶಿ ಘಟನೆ

Published : Aug 04, 2020, 06:40 PM IST
ಹ್ಯುಂಡೈ ಶೋರೂಂ ಸೇಲ್ಸ್‌ಮೆನ್ ಆಗಿ ಬೀದಿ ನಾಯಿ ನೇಮಕ; ಸಂಚಲನ ಮೂಡಿಸಿದೆ ಹೃದಯ ಸ್ಪರ್ಶಿ ಘಟನೆ

ಸಾರಾಂಶ

ಕೆಲ ಘಟನೆಗಳು ಬಹುಬೇಗನೆ ಎಲ್ಲರನ್ನು ಸಳೆದು ಬಿಡುತ್ತದೆ. ಇದೇ ರೀತಿ ಬೀದಿ ನಾಯಿಯನ್ನು ಹ್ಯುಂಡೈ ಕಾರು ಶೋ ರೂಂ ಸೇಲ್ಸ್‌ಮೆನ್ ಆಗಿ ನೇಮಕ ಮಾಡಿದ ಘಟನೆ ಭಾರಿ ಸಂಚಲನ ಮೂಡಿಸಿದೆ. ಶೋ ರೂಂ ನಿರ್ಧಾರದ ಹಿಂದೆ ಹೃದಯ ಸ್ಪರ್ಶಿ ಘಟನೆಯೊಂದಿದೆ.

ಬ್ರಜಿಲ್(ಆ.04): ಕಾರು ಶೋ ರೂಂ ತೆರಳಿದಾಗ ಸೇಲ್ಸ್‌ಮೆನ್ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಆದರೆ ಸೇಲ್ಸ್‌ಮೆನ್ ಬದಲು, ಶೋ ರೂಂ ವಿಳಾಸ, ಫೋಟೋ ಇರುವ ಐಡಿ ಕಾರ್ಡ್ ಹಾಕಿದ ನಾಯಿಯೊಂದು ನಿಮ್ಮನ್ನು ಸ್ವಾಗತಿಸಿದರೆ ಅಚ್ಚರಿಯಾಗುವುದು ಖಚಿತ. ಹಲವು ಗ್ರಾಹಕರು ಅಚ್ಚರಿ ಹಾಗೂ ಮೆಚ್ಚು ವ್ಯಕ್ತಪಡಿಸಿದ ಘಟನೆ ಬ್ರೆಜಿಲ್‌ನ ಹ್ಯುಂಡೈ ಶೋ ರೂಂನಲ್ಲಿ ನಡೆದಿದೆ.

ಸುಶಾಂತ್ ಸಿಂಗ್ ಪ್ರೀತಿಯ ಶ್ವಾನ ಈಗ ಎಲ್ಲಿದೆ? ಏನು ಮಾಡುತ್ತಿದೆ?

ಬ್ರೆಜಿಲ್‌ನ ಟಕ್ಸನ್ ಪ್ರೈಂ ಹ್ಯುಂಡೈ ಶೋ ರೂಂ ಬೀದಿ ನಾಯಿಯನ್ನು ಸೇಲ್ಸ್‌ಮೆನ್ ಆಗಿ ನೇಮಕ ಮಾಡಿದೆ. ನಾಯಿ ಭಾವಚಿತ್ರವಿರುವ ಐಡಿ ಕಾರ್ಡ್ ನೀಡಲಾಗಿದೆ. ಇನ್ನು ನಾಯಿ ಕೂಡ ಗ್ರಾಹಕರಿಗೆ ಪ್ರೀತಿಯ ಸ್ವಾಗತ ಕೋರುತ್ತಾ ಹಾಗೂ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ. ಈ ಘಟನೆ ಕೆಲ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಕ್ಸನ್ ಶೋ ರೂಂ ಕಾರ್ಯವನ್ನು ಶ್ಲಾಘಿಸಿದ್ದಾರೆ.

 

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ವಿನ್ಯಾಸ, ಮತ್ತಷ್ಟು ಆಕರ್ಷಕ ಹ್ಯುಂಡೈ i20!

ಟಕ್ಸನ್ ಶೋ ರೂಂ ಬಳಿ ನಾಯಿಯೊಂದು ಅಲೆದಾಡುತ್ತಿತ್ತು. ಹಲವು ಬಾರಿ ದಾರಿ ಕಾಣದೆ, ಹಸಿವಿನಿಂದ ಅಲೆದಾಡುತ್ತಿದ್ದ ನಾಯಿ ಮರಿಗೆ ಹ್ಯುಂಡೈ ಶೋ ರೂಂ ಸಿಬ್ಬಂದಿಗಳು ಆಹಾರ ನೀಡಿದ್ದಾರೆ. ಸಿಬ್ಬಂದಿಗಳ ಸ್ನೇಹ ಸಂಪಾದಿಸಿದ ನಾಯಿ ಮರಿ ಶೋ ರೂಂ ಬಿಟ್ಟು ಕದಲಲಿಲ್ಲ. ಶೋ ರೂಂ ಸಿಬ್ಬಂದಿಗಳೊಂದಿಗೆ ಆತ್ಮೀಯವಾದ ನಾಯಿಯನ್ನು ಕಳುಹಿಸಿಕೊಡಲು ಯಾರಿಗೂ ಮನಸ್ಸಾಗಿಲ್ಲ.

 

ಹೀಗಾಗಿ ಹ್ಯುಂಡೈ ಶೋ ರೂಂ ನಾಯಿ ಭಾವ ಚಿತ್ರವಿರುವ ಐಡಿ ಕಾರ್ಡ್ ಮಾಡಿಸಿ, ನಾಯಿಯನ್ನು ಟಕ್ಸನ್ ಪ್ರೈಂ ಶೋ ರೂಂನ ಅಧಿಕೃತ ಸೇಲ್ಸ್‌ಮೆನ್ ಆಗಿ ನೇಮಕ ಮಾಡಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಸಂತಸವನ್ನು ಹಂಚಿಕೊಂಡಿದೆ. 

ಶೋ ರೂಂಗೆ ಆಗಮಿಸುವ ಗ್ರಾಹಕರು ಕೂಡ ವಿಶೇಷ ಸೇಲ್ಸ್‌ಮನ್ ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ. ಕೆಲ ನಿಮಿಷಗಳಲ್ಲೇ ಪೋಸ್ಟ್ ವೈರಲ್ ಆಗಿದೆ ಬ್ರೆಜಿಲ್ ಹ್ಯುಂಡೈ ಶೋ ರೂಂ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ