ಯುವಕರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಪ್ರೀತಿ ಹೆಚ್ಚಾಗಿದ್ದರೆ, ಇತ್ತ ಕಳ್ಳರಿಗೂ ಬುಲೆಟ್ ಗಾಡಿಗಳೇ ಬೇಕು. ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುತ್ತಿದ್ದ ಅಂತರಾಜ್ಯ ಕಳ್ಳನನ್ನು ಕೋಲಾರದ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಶೋಧ ಆರಂಭಗೊಂಡಿದೆ. ಹೀಗಾಗಿ ಬುಲೆಟ್ ಮಾಲೀಕರ ಎಚ್ಚರ ವಹಿಸುವುದು ಅಗತ್ಯ.
ಕೋಲಾರ(ಆ.28): ರಾಯಲ್ ಎನ್‌ಫೀಲ್ಡ್ ಬೈಕ್ ಹಳೆಯದಾದರೂ, ಹೊಸದಾದರೂ ಬೆಲೆ ಕಡಿಮೆಯಾಗಲ್ಲ. ಸದ್ಯ ಹೆಚ್ಚಿನ ಜನರು ರಾಯಲ್ ಎನ್‌ಫೀಲ್ಡ್ ಬೈಕ್ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಕನ್ನ ಹಾಕುತ್ತಿದ್ದಾರೆ. ಇದೀಗ ಬುಲೆಟ್ ಬೈಕ್‌ಗಳನ್ನೇ ಕದಿಯುತ್ತಿದ್ದ ಅಂತರಾಜ್ಯ ಕಳ್ಳನನ್ನು ಬಂಗಾರಪೇಟೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ: ಕಳವಾದ ವಾಹನ, ನಕಲಿ ಬಿಡಿಭಾಗ ಪತ್ತೆ ಇನ್ನು ಸುಲಭ!
undefined
ಕೋಲಾರದ ಬಂಗಾರ ಪೇಟೆ ಪೊಲೀಸರ ಕಾರ್ಯಾಚರಣೆಯಲ್ಲಿ ಕುಖ್ಯಾತ ಕಳ್ಳನನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ಸತೀಶ್(30)ಬಂಧಿತ ಆರೋಪಿ. ಬಂಧಿತನಿಂದ 15 ಲಕ್ಷ ಮೌಲ್ಯದ 11 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಹಲವು ಬೈಕ್‌ಗಳನ್ನು ಕದ್ದು ಮಾರಾಟ ಮಾಡಿದ್ದಾನೆ.
ಇದನ್ನೂ ಓದಿ: ಕಳ್ಳರು ಕದಿಯೋದು ಬುಲೆಟ್’ಗಳನ್ನು ಮಾತ್ರ : ಯಾಕೆ ಗೊತ್ತಾ..?
ಅಂತರಾಜ್ಯ ಕಳ್ಳ ಸತೀಶ್ ಬೆಂಗಳೂರಿನ ಬಸವನಗುಡಿ, ಹೆಬ್ಬಗೋಡಿ,ಅಶೋಕ ನಗರ, ಜಯನಗರ,ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದಿಯುತ್ತಿದ್ದ. ಸಹಚರರಾದ ಮೆಹಬೂಬ್, ನದೀಮ್, ಮುನೀರ್, ರಹೀಂ, ಶ್ರೀಧರ್ ಜೊತೆಗೂಡಿ ಸತೀಶ್ ಬೈಕ್ ಕಳ್ಳತನ ಮಾಡುತ್ತಿದ್ದ. ಆದರೆ ಸಹಚರರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ತನಿಖೆ ಆರಂಭಿಸಿರುವ ಬಂಗಾರಪೇಟೆ ಪೊಲೀಸರು ಇದರ ಹಿಂದೆ ಅತೀ ದೊಡ್ಡ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಅನ್ನೋ ಶಂಕೆ ವ್ಯಕ್ತಪಡಿಸಿದ್ದಾರೆ.