ಟಾಟಾ ಏಸ್‌ಗಳಿಗೆ ಉಚಿತ ಸವೀರ್ಸ್ ಕ್ಯಾಂಪ್‌

Published : Aug 28, 2019, 10:57 AM IST
ಟಾಟಾ ಏಸ್‌ಗಳಿಗೆ ಉಚಿತ ಸವೀರ್ಸ್ ಕ್ಯಾಂಪ್‌

ಸಾರಾಂಶ

ಟಾಟಾ ಮೋಟಾರ್ಸ್ ದೇಶಾದ್ಯಂತ ಉಚಿತ ಸರ್ವೀಸ್ ಕ್ಯಾಂಪ್ ಆಯೋಜಿಸಿದೆ.  ಟಾಟಾ ಏಸ್‌ ದಾಖಲೆಯ ಮಾರಾಟ ಕಂಡಿರುವ ಹಿನ್ನಲೆಯಲ್ಲಿ ಫೀ ಸರ್ವೀಸ್ ನೀಡಲಾಗುತ್ತಿದೆ. ಈ ಫ್ರೀ ಸರ್ವೀಸ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಆ.28):  ಟಾಟಾ ಮೋಟಾರ್ಸ್‌ ಕಂಪೆನಿ ತನ್ನ ಟಾಟಾ ಏಸ್‌ ಹಾಗೂ ಟಾಟಾ ಝಿಪ್‌ ವಾಹನಗಳಿಗೆ ಆ.31ರವರೆಗೆ ಫ್ರೀ ಸರ್ವಿಸ್‌ ಕ್ಯಾಂಪ್‌ಗಳನ್ನು ದೇಶಾದ್ಯಂತ ಆಯೋಜಿಸಿದೆ. ಟಾಟಾ ಏಸ್‌ ದಾಖಲೆಯ 22 ಲಕ್ಷ ಮಾರಾಟ ದಾಖಲಿಸಿರುವ ಹಿನ್ನೆಲೆಯಲ್ಲಿ ಈ ಆಫರ್‌ ಘೋಷಿಸಲಾಗಿದೆ. 

ಇದನ್ನೂ ಓದಿ: ಕಡಿಮೆ ಬೆಲೆಯ ಟಾಟಾ ಮಿನಿ ಟ್ರಕ್ ಬಿಡುಗಡೆ!

ಟಾಟಾ ಔಟ್‌ಲೆಟ್‌ಗಳಲ್ಲಿ ನಡೆಯುವ ಈ ಶಿಬಿರದಲ್ಲಿ ಕಂಪೆನಿಯ ವಾಹನಗಳಿಗೆ ಉಚಿತ ಸರ್ವಿಸ್‌ ನೀಡುವ ಜೊತೆಗೆ ಶೇ.10 ರಿಯಾಯಿತಿಯಲ್ಲಿ ಸ್ಪೇರ್‌ಪಾಟ್ಸ್‌ರ್‍ ಮಾರಾಟ ಹಾಗೂ ರಿಪೇರಿ ಮಾಡಲಾಗುವುದು ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ. ಈ ಸಂದರ್ಭ ವಾಹನ ಮಾಲೀಕರಿಗೆ ಹಾಗೂ ಚಾಲಕರಿಗೆ ಎಂಜಿನ್‌ ಕಾಪಿಡುವ ಕುರಿತು ಅರಿವು ಮೂಡಿಸಲಾಗುವುದು. 

ಇದನ್ನೂ ಓದಿ: ಕಡಿಮೆ ಬೆಲೆ, ಗರಿಷ್ಠ ಮೈಲೇಜ್; ಬರುತ್ತಿದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

ಇದರ ಜೊತೆಗೆ ಗ್ರಾಹಕರಿಗೆ ಬುಕ್ಕಿಂಗ್‌, ಸರ್ವಿಸ್‌ ಇತ್ಯಾದಿಗಳಿಗೆ ಸಹಾಯವಾಗುವಂತೆ ಕಸ್ಟಮರ್‌ ಕೇರ್‌ ಆ್ಯಪ್‌, ವಾಹನಕ್ಕೆ ಸಂಬಂಧಿಸಿದ ಸೇವೆಗಾಗಿ ಟಾಟಾ ಅಲರ್ಟ್‌, ಹೊಸ ವಾಹನಗಳ ರಿಪೇರಿಗೆ ಟಾಟಾ ಝಿಪ್‌ ಇತ್ಯಾದಿ ಸೇವೆಗಳನ್ನು ಆರಂಭಿಸಲಾಗಿದೆ.
 

PREV
click me!

Recommended Stories

SUV ಕಾರುಗಳತ್ತ ಭಾರತೀಯರ ಒಲವು; ಕಾರು ಸಾಲದಲ್ಲಿ ಬರೋಬ್ಬರಿ 49% ಏರಿಕೆ, EMI ಅವಧಿ ಎಷ್ಟು ಗೊತ್ತಾ?
Watch: ನಿಜವಾಯ್ತು ಹಾರುವ ಕಾರು, ಗಾಳಿಯಲ್ಲಿ ತೇಲಿ, ಪಲ್ಟಿ ಹೊಡೆದ Tesla Roadster ಎಲೆಕ್ಟ್ರಿಕ್ ಕಾರು!