ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೆ BMW ಬೈಕ್ ಗಿಫ್ಟ್ ನೀಡಿದ ಅಭಿಮಾನಿ!

By Web Desk  |  First Published Jan 27, 2019, 11:24 PM IST

ಬಿಗ್ ಬಾಸ್ ಫಿನಾಲೆಯಲ್ಲಿ ಕಿಚ್ಚ ಸುದೀಪ್‌ಗೆ ಅಭಿಮಾನಿಯೊರ್ವ BMW ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. ಸುದೀಪ್‌ಗೆ ಈ ಸರ್ಪ್ರೈಸ್ ಗಿಫ್ಟ್ ನೀಡಲು ಕಾರಣವೇನು? ಈ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ.


ಬೆಂಗಳೂರು(ಜ.28): ಬಿಗ್ ಬಾಸ್ ಫಿನಾಲೆಯಲ್ಲಿ ಒಂದು ಅಚ್ಚರಿ ಕಾದಿತ್ತು. ಕಾರ್ಯಕ್ರಮ ನಿರೂಪಕ, ನಟ ಕಿಚ್ಚ ಸುದೀಪ್‌ಗೂ ಈ ಬಗ್ಗೆ ಸಣ್ಣ ಸುಳಿವು ಇರಲಿಲ್ಲ. ಫಿನಾಲೇ ವೇದಿಕೆಯಲ್ಲಿ ಸುದೀಪ್ ಅಭಿಮಾನಿ ಶ್ರೀನಿವಾಸ್ BMW ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಕೈ ಶಾಸಕನಿಂದ ಸಿದ್ದರಾಮಯ್ಯಗೆ ಕೋಟಿ ಮೌಲ್ಯದ ಕಾರು ಗಿಫ್ಟ್!

Tap to resize

Latest Videos

undefined

ಸುದೀಪ್‌ಗೆ BMW ಬೈಕ್ ಉಡುಗೊರೆಯಾಗಿ ನೀಡಿದ್ದು ಅಭಿಮಾನಿ ಶ್ರೀನಿವಾಸ್. ಬೆಂಗಳೂರಿನಲ್ಲಿ BMW ಹಾಗೂ ಹಾರ್ಲೇ ಡೇವಿಡ್ಸನ್ ಬೈಕ್ ಶೋ ರೂಂ ಮಾಲೀಕರಾಗಿರುವ ಶ್ರೀನಿವಾಸ್ ಹಲವು ವರ್ಷಗಳಿಂದ ಆಪ್ತರಾಗಿದ್ದಾರೆ. ಇದೇ ಶ್ರೀನಿವಾಸ್ ಅವರ ಶೋ ರೂಂ ನಿಂದ ಹಾರ್ಲೇ ಡೇವಿಡ್ಸನ್ ಸೇರಿದಂತೆ ಹಲವು ಬೈಕ್‌ ಖರೀದಿಸಿದ್ದಾರೆ.

ಸುದೀಪ್ ಅವರ ಅಭಿಮಾನಿಯಾಗಿರುವ ಶ್ರೀನಿವಾಸ್ ಬಿಗ್ ಬಾಸ್ ಫಿನಾಲೆಯಲ್ಲಿ ಸರ್ಪ್ರೈಸ್ ಗಿಫ್ಟ್ ನೀಡಿ ಸುದೀಪ್‌ಗೆ ಮಾತ್ರವಲ್ಲ ಎಲ್ಲರಿಗೂ ಅಚ್ಚರಿ ನೀಡಿದರು. ನೆಚ್ಚಿನ ಬಣ್ಣವಾದ ರೆಡ್ ಕಲರ್ BMW ಬೈಕ್ ಪಡೆದ ಸುದೀಪ್, ಧನ್ಯವಾದ ಹೇಳಿದರು.

ಇದನ್ನೂ ಓದಿ: ಟಾಟಾ ಇಂಡಿಗೋ To ಮರ್ಸಡೀಸ್ ಬೆಂಝ್- ರತನ್ ಟಾಟಾ ಕಾರ್ ಕಲೆಕ್ಷನ್ ಹೇಗಿದೆ?

ಭಾರತದಲ್ಲಿ BMW ಬೈಕ್ ಹೆಚ್ಚು ಸದ್ದು ಮಾಡುತ್ತಿದೆ.  BMW ಬೈಕ್ ಬೆಲೆ 2.99 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದ್ದು, ಟಾಪ್ ಮಾಡೆಲ್ ಬೆಲೆ 28.30 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ ದೆಹಲಿ). BMW G 310 R ಬೇಸ್ ಮಾಡೆಲ್‌ನಿಂದ ಹಿಡಿದು BMW K 1600 GTL ಟಾಪ್ ಮಾಡೆಲ್ ವರೆಗೂ ಒಟ್ಟು 8 ಬೈಕ್‌ಗಳು ಭಾರತದಲ್ಲಿ ಲಭ್ಯವಿದೆ.

BMW G 310 R = 2.99 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)
BMW S 1000 RR =18.05 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)
BMW R 1250 GS ಅಡ್ವೆಂಚರ್ = 18.25 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)
BMW G 310 GS = 3.49 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)
BMW R nineT = 17.30 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)
BMW R 1250 GS = 16.85 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)
BMW S 1000 XR = 17.65 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)
BMW K 1600 GTL= 28.30 ಲಕ್ಷ ರೂಪಾಯಿಂದ ಪ್ರಾರಂಭ(ಎಕ್ಸ್  ಶೋ ರೂಂ)

click me!