ರಾಜಧಾನಿಯಲ್ಲಿ ಬಾಡಿಗೆಗೆ ಎಲೆಕ್ಟ್ರಿಕ್ ಸ್ಕೂಟರ್ -ಪ್ರತಿ ಕಿ.ಮೀಗೆ 20 ಪೈಸೆ!

By Web Desk  |  First Published Jan 27, 2019, 7:19 PM IST

ರಾಷ್ಟ್ರ ರಾಜಧಾನಿಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸೇವೆ ಆರಂಭಗೊಂಡಿದೆ. ಪ್ರತಿ ಕಿ.ಮೀ ಪ್ರಯಾಣಕ್ಕೆ ಕೇವಲ 20 ಪೈಸೆ ಮಾತ್ರ. ಈ ಕುರಿತ ಹೆಚ್ಚಿಮ ಮಾಹಿತಿ ಇಲ್ಲಿದೆ.


ನವದೆಹಲಿ(ಜ.27): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೂತನ ಸೇವೆ ಆರಂಭಗೊಂಡಿದೆ. ನಗರದಲ್ಲಿ ಓಡಾಡಲು ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆಗೆ ಲಭ್ಯವಿದೆ. ಗಾರ್ವಿಟ್ ಸಂಸ್ಥೆ ಈ ಸೇವೆ ಆರಂಭಿಸಿದೆ. ವಿಶೇಷ ಅಂದರೆ ಈ ಬೈಕ್ ಬಾಡಿಗೆ 30 ನಿಷಕ್ಕೆ 20 ರೂಪಾಯಿ ಮಾತ್ರ. ಅಂದರೆ ಪ್ರತಿ ಕಿ.ಮೀಗೆ ಬರಿ 20 ಪೈಸೆ ಮಾತ್ರ.

ಇದನ್ನೂ ಓದಿ: ಬೈಕ್ ರೈಡ್ ಮಾಡಿದರೆ ಒತ್ತಡ ನಿವಾರಣೆ- ಅಧ್ಯಯನದಿಂದ ಬಹಿರಂಗ!

Latest Videos

undefined

ಇತರ ಯಾವುದೇ ಸ್ಕೂಟರ್, ಬೈಕ್ ಸೇವೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಚಾರ್ಜ್. ಇಷ್ಟೇ ಅಲ್ಲ ಎಲೆಕ್ಟ್ರಿಕ್ ಸ್ಕೂಟರ್ ಕಾರಣ ಮಾಲಿನ್ಯ ರಹಿತ ಪ್ರಯಾಣ. ನೂತನ ಸೇವೆ ಆರಂಭಿಸಿರುವ ಗಾರ್ವಿಟ್ ಸಂಸ್ಥೆಗೆ ದೆಹಲಿ ಪೊಲೀಸ್ ಕಮಿಶನರ್ ಸಂಜಯ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮತ್ತೆ ರಸ್ತೆಗಿಳಿಯುತ್ತಿದೆ ಬಜಾಜ್ ಸ್ಕೂಟರ್!

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಹಲವು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಇದೀಗ ಗಾರ್ವಿಟ್ ಸಂಸ್ಥೆ ಎಲೆಕ್ಟ್ರಿಕ್ ಸ್ಕೂಟರ್ ಸೇವೆ ಆರಂಭಿಸಿರುವುದು ಅತ್ಯುತ್ತ ಎಂದು ಸಂಜಯ್ ಹೇಳಿದ್ದಾರೆ.
 

click me!