3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

By Web DeskFirst Published Oct 13, 2019, 12:39 PM IST
Highlights

ಭಾರತದಲ್ಲಿ ಇದೇ ಮೊದಲ ಬಾರಿಗೆ ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿದೆ. ಮೊದಲ ನೋಟಕ್ಕೆ ಗ್ರಾಹಕರನ್ನು ಆಕರ್ಷಿಸುತ್ತಿರುವ ಸೆಲ್ಟೋಸ್ ಕಾರು, 3 ತಿಂಗಳಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.

ಅನಂತಪುರಂ(ಅ.13): ದಕ್ಷಿಣ ಕೊರಿಯಾದ ಕಿಯಾ ಸೆಲ್ಟೋಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆಯಾಗಿ 2 ತಿಂಗಳು ಕಳೆದಿದೆ. ಆಗಸ್ಟ್ 22 ರಂದು ಕಾರು ಲಾಂಚ್ ಮಾಡಿದ  ಕಿಯಾ ಮೋಟಾರ್ಸ್, ಜುಲೈ 16 ರಂದೇ ಬುಕಿಂಗ್ ಆರಂಭಿಸಿತು. ಭಾರತದಲ್ಲಿ ಆಟೋಮೊಬೈಲ್ ಮಾರಾಟ ತೀವ್ರ ಕುಸಿತದ ನಡವೆಯೂ ಕಿಯಾ ಸೆಲ್ಟೋಸ್ ದಾಖಲೆ ಬರೆದಿದೆ.

ಇದನ್ನೂ ಓದಿ: ಬಹುನಿರೀಕ್ಷಿತ KIA ಸೆಲ್ಟೋಸ್ ಕಾರು ಬಿಡುಗಡೆ; ಬೆಲೆ 9.69 ಲಕ್ಷ ರೂ!

ಬುಕಿಂಗ್ ಆರಂಭಿಸಿದ ಇದೀಗ ಸರಿಸುಮಾರು 3 ತಿಂಗಳಾಗಿವೆ. ಬರೋಬ್ಬರಿ 50,000 ಸೆಲ್ಟೋಸ್ ಕಾರುಗಳು ಬುಕಿಂಗ್ ಆಗಿವೆ.  ಭಾರತದ SUV ಕಾರುಗಳ ಪೈಕಿ ಹ್ಯುಂಡೈ ವೆನ್ಯೂ ಕಳೆದ 5 ತಿಂಗಳಲ್ಲಿ 75,000 ಕಾರುಗಳು ಬುಕ್ ಆಗಿವೆ. ಆದರೆ ಕಿಯಾ ಸೆಲ್ಟೋಸ್ ಇನ್ನೂ 3 ತಿಂಗಳೂ ಪೂರ್ಣಗೊಂಡಿಲ್ಲ. ಅಷ್ಟರಲ್ಲೇ 50,000 ಕಾರುಗಳು ಬುಕ್ ಆಗಿವೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಬುಕಿಂಗ್ ಆದ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?

2020ರ ವರ್ಷದ ಕಾರು ಪ್ರಶಸ್ತಿಗೆ ಕಿಯಾ ಸೆಲ್ಟೋಸ್ ನಾಮನಿರ್ದೇಶನಗೊಂಡಿದೆ. ಹೆಚ್ಚು ಆಕರ್ಷಕ, ಅತ್ಯಾಧುನಿಕ ತಂತ್ರಜ್ಞಾನ, ಬಲಿಷ್ಠ ಎಂಜಿನ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಈ ಕಾರಿನ ಬೆಲೆ 9.69 ಲಕ್ಷ ರೂಪಾಯಿಂದ ಆರಂಭವಾಗುತ್ತಿದ್ದು, ಗರಿಷ್ಠ16.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಮಾರುತಿ ಬ್ರೆಜ್ಜಾಗೆ ತಲೆನೋವಾದ ಹ್ಯುಂಡೈ ವೆನ್ಯು; 75,000 ಬುಕಿಂಗ್ ದಾಖಲೆ!

ಕಿಯಾ ಸೆಲ್ಟೋಸ್ ಕಾರು, ಹ್ಯುಂಡೈ ಕ್ರೆಟಾ, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್, ಮಹೀಂದ್ರ XUV500 ಹಾಗೂ ದೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಕಿಯಾ ಸೆಲ್ಟೋಸ್ ಕಾರು ಟೆಕ್ ಲೈನ್ ಹಾಗೂ ಜಿಟಿ ಲೈನ್ ಅನ್ನೋ 2  ಟ್ರಿಮ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಟೆಕ್ ಲೈನ್‌ನಲ್ಲಿ 5 ವೇರಿಯೆಂಟ್ ಲಭ್ಯವಿದೆ. 

ಅಕ್ಟೋಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!