ಮಾರುತಿ ಬ್ರೆಜ್ಜಾ ಕಾರಿನ ಅಗ್ರಸ್ಥಾನ ಪಟ್ಟ ಕಳಚಿದೆ. ಸದ್ಯ ಹ್ಯುಂಡೈ ವೆನ್ಯೂ SUV ಕಾರುಗಳ ಬೈಕಿ ಮೊದಲ ಸ್ಥಾನ ಅಲಂಕರಿಸಿದೆ.
ನವದೆಹಲಿ(ಅ.12): ಭಾರತದಲ್ಲಿ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಸದ್ಯ ವಾಹನ ಮಾರಾಟ ಕುಸಿತದ ಕಾರಣ ಯಾವುದೇ ಕಾರುಗಳು ನಿರೀಕ್ಷಿತ ಮಾರಾಟ ಕಾಣುತ್ತಿಲ್ಲ. ಆದರೆ ಮಾರಾಟವಾಗೋ ಕಾರುಗಳ ಪೈಕಿ SUV ಮುಂಚೂಣಿಯಲ್ಲಿದೆ. ಮಾರುತಿ ಬ್ರೆಜ್ಜಾ ಕಾರು ಭಾರತದಲ್ಲಿ ಮಾರಾಟವಾಗೋ ಟಾಪ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ವೆನ್ಯೂ ತೀವ್ರ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!
ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್ ಹಾಗೂ ಬ್ರೆಜ್ಜಾ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಹ್ಯುಂಡೈ ವೆನ್ಯೂ ಇದೀಗ ಬ್ರೆಜ್ಜಾ ಕಾರಿಗೆ ತಲೆನೋವಾಗಿ ಪರಿಣಮಿಸಿದೆ. ಬ್ರೆಜಾ ತನ್ನ ಅಗ್ರಸ್ಥಾನ ಕಳೆದುಕೊಂಡಿದೆ. ಹ್ಯುಂಡೈ ಬಿಡುಗಡೆಯಾದ 5 ತಿಂಗಳಲ್ಲಿ 42,000 ಕಾರುಗಳು ಮಾರಾಟವಾಗಿದ್ದರೆ, 75,000 ಕಾರುಗಳು ಬುಕಿಂಗ್ ಆಗಿವೆ.
ಇದನ್ನೂ ಓದಿ: Photo Gallery: ಇತರ SUV ಕಾರಿಗಿಂತ ಹ್ಯುಂಡೈ ವೆನ್ಯೂ ಭಿನ್ನ ಯಾಕೆ?
ಮಾರುತಿ ಬ್ರೆಜ್ಜಾ ಕಳೆದ 5 ತಿಂಗಳಲ್ಲಿ 40,425 ಕಾರುಗಳು ಮಾರಾಟವಾಗಿದೆ. ಮಹೀಂದ್ರ XUV300 19,370 ಕಾರು ಮಾರಾಟವಾಗೋ ಮೂಲಕ 3ನೇ ಸ್ಥಾನದಲ್ಲಿದೆ. ಟಾಟಾ ನೆಕ್ಸಾನ್ 17,137 ಹಾಗೂ ಫೋರ್ಡ್ ಇಕೋಸ್ಪೋರ್ಟ್ 16,016 ಕಾರುಗಳು ಮಾರಾಟವಾಗಿದೆ.