ಭಾರತದಲ್ಲೀಗ ಸಬ್ ಕಾಂಪಾಕ್ಟ್ SUV ಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುತಿ ಬ್ರಿಜಾ ಯಶಸ್ಸಿನ ಬಳಿಕ ಇದೀಗ ಬಹುತೇಕ ಕಂಪೆನಿಗಳು 4 ಮೀಟರ್ ಸಬ್ SUV ಬಿಡುಗಡೆ ಮಾಡುತ್ತಿದೆ. ಈ ಸಾಲಿಗೆ ಕಿಯಾ ಮೋಟಾರ್ಸ್ ಕೂಡ ಲಗ್ಗೆ ಇಟ್ಟಿದೆ. ಭಾರತದಲ್ಲಿ SUV ಸ್ಪೋರ್ಟೇಜ್ ಕಾರು ಬಿಡುಗಡೆಗೆ ಮುಂದಾಗಿದೆ.
ನವದೆಹಲಿ(ಡಿ.28): ಸೌತ್ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಈಗಾಗಲೇ ಭಾರತಕ್ಕೆ ಕಾಲಿಟ್ಟಿದೆ. ಇದೀಗ ಕಿಯಾ SUV ಸ್ಪೋರ್ಟೇಜ್ ಕಾರಿನ ಟೀಸರ್ ಬಿಡುಗಡೆ ಮಾಡಿದೆ. ಈ ಮೂಲಕ ಮಾರುತಿ ಬ್ರಿಜಾ, ಇಕೋ ಸ್ಪೋರ್ಟ್ ಹಾಗೂ ನೂತನ ಮಹೀಂದ್ರ XUV 300 ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!
undefined
2019ರ ಮೇ ತಿಂಗಳಲ್ಲಿ ಭಾರತದಲ್ಲಿ ಕಿಯಾ SUV ಕಾರು ಬಿಡುಗಡೆಯಾಗಲಿದೆ. ನೂತನ ಕಿಯಾ SUV ಕಾರಿಗೆ ಟಸ್ಕರ್ ಎಂದು ಹೆಸರಿಡಲು ನಿರ್ಧರಿಸಿದೆ. ಈಗಾಗಲೇ ರೋಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನ ಕಿಯಾ SUV ಕಾರು ಯಶಸ್ವಿಯಾಗಿ ಪೂರೈಸಿದೆ.
ಸಹೋದರ ಸಂಸ್ಥೆ ಹ್ಯುಂಡೈ ಕ್ರೆಟಾ ಕಾರಿನಿಂದ ಸ್ಪೂರ್ತಿ ಪಡೆದು ನೂತನ ಕಿಯಾ ಟಸ್ಕರ್ SUV ಕಾರು ತಯಾರಿಸಲಾಗಿದೆ. ಎಮಿಶನ್ ನಿಯಮ ಪಾಲಿಸಿರುವ ಕಿಯಾ BS-VI ಸ್ಟೇಜ್ ಹೊಂದಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.
ಇದನ್ನೂ ಓದಿ: ವರ್ಷದ ಅತ್ಯುತ್ತಮ ಕಾರು-ಬೈಕ್ ಪ್ರಶಸ್ತಿ ಪ್ರಕಟ-ಇಲ್ಲಿದೆ ಲಿಸ್ಟ್!
ನೂತನ ಕಿಯಾ ಟಸ್ಕರ್ SUV ಕಾರು 115 ps ಪವರ್ ಹಾಗೂ 250nm ಟಾರ್ಕ್ ಉತ್ಪಾದಿಸಲಿದೆ. ಆದರೆ ಇದರ ಬೆಲೆ ಬಹಿರಂಗಪಡಿಸಿಲ್ಲ. ಆದರೆ ಬ್ರಿಜಾ ಹಾಗೂ ಇಕೋಸ್ಪೋರ್ಟ್ ಕಾರುಗಳಿಗಿಂತ ಕಡಿಮೆ ಇರಲಿದೆ ಎಂದು ಹೇಳಲಾಗ್ತಿದೆ.